ಕಾಸರಗೋಡು: ಕುಂಬಳೆ ಸೀಮೆಯ ಇತಿಹಾಸ ಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವರ ದಿವ್ಯ ಸನ್ನಿಧಾನದಲ್ಲಿ ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಸ್ವಾಮಿ ಶ್ರೀಪಾದಂಗಳವರ ಪೂರ್ಣಾ ಶೀರ್ವಾದಗಳೊಂದಿಗೆ ಮೂರು ದಿನಗಳ ಕಾಲ ನಡೆಯುವ ಮಹಾರುದ್ರ ಯಾಗ ಲಕ್ಷಾರ್ಚನೆ, ಚತುರ್ವಿಂಶತ್ಯುತ್ತರ ಸಹಸ್ರ ನಾಳಿಕೇರ ಮಹಾಗಣಯಾಗ, ಸಾರ್ವಜನಿಕ ಶ್ರೀ ಸತ್ಯವಿನಾಯಕ ವ್ರತ ಕಾರ್ಯಕ್ರಮಕ್ಕೆ ಫೆ.26ರಂದು ಚಾಲನೆ ನೀಡಲಾಯಿತು.
ರವಿವಾರ ಬೆಳಗ್ಗೆ ಸೂರ್ಯೋದಯಕ್ಕೆ ದೀಪ ಪ್ರಜ್ವಲನೆಯೊಂದಿಗೆ ಭಜನ ಕಾರ್ಯಕ್ರಮ ಶುಭಾರಂಭಗೊಂಡಿತು. ಸಂಜೆ ಹೊರೆಕಾಣಿಕೆ ಮೆರವಣಿಗೆ ಯೊಂದಿಗೆ ತಂತ್ರಿವರ್ಯರು ಮತ್ತು ವೈದಿಕ ವೃಂದಕ್ಕೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಸಾಮೂಹಿಕ ಶ್ರೀ ದೇವರ ಪ್ರಾರ್ಥನೆ, ತೋರಣ ಮುಹೂರ್ತ, ಶ್ರೀ ದೇವರ ಉಗ್ರಾಣ ಮುಹೂರ್ತ, ಸಾರ್ವಜನಿಕ ಅನ್ನ ಸಂತರ್ಪಣೆ ಉಗ್ರಾಣ ಮುಹೂರ್ತ, ಆಚಾರ್ಯಾದಿ ಋತ್ವಿಗÌರಣ, ಯಾಗ ಮಂಟಪ ಪ್ರವೇಶ, ಯಾಗ ಮಂಟಪ ದಲ್ಲಿ ಸಪ್ತಶುದ್ಧಿ, ವಾಸ್ತು ಪೂಜೆ, ವಾಸ್ತು ಬಲಿ, ಪ್ರಾಕಾರಬಲಿ, ವಾಸ್ತು ಹೋಮ, ರಾಕ್ಷೋಘ್ನ ಹೋಮ, ಮಂಟಪ ಸಂಸ್ಕಾರ, ರಕ್ಷೆ ಮೊದಲಾದವು ನಡೆಯಿತು. ಧಾರ್ಮಿಕ ಸಭೆಯ ಬಳಿಕ ರಾತ್ರಿ ಅನ್ನಸಂತರ್ಪಣೆ, ನಾಟ್ಯ ಮಂಟಪ ಮಧೂರು ಅವರಿಂದ ಭರತನಾಟ್ಯ ಕಾರ್ಯಕ್ರಮ ಜರಗಿತು.
ಇಂದಿನ ಕಾರ್ಯಕ್ರಮ: ಫೆ.27 ರಂದು ಸೂರ್ಯೋದಯದಿಂದ ಸೂರ್ಯಾಸ್ತಮಾನದ ತನಕ ವಿವಿಧ ಭಜನ ತಂಡಗಳಿಂದ ಭಜನಕಾರ್ಯಕ್ರಮ ನಡೆಯಲಿರುವುದು. ಬೆಳಗ್ಗೆ 9ರಿಂದ ಅರಣಿ ಮಥನ, ಅಗ್ನಿ ಜನನ, ಅಗ್ನಿ ಸಂಸ್ಕಾರ ನಡೆಯಲಿದೆ. 8 ರಿಂದ ಈಶಾವಾಸ್ಯಂ ಯಾಗ ಶಾಲೆಯಲ್ಲಿ ಮಹಾರುದ್ರಯಾಗ ಪ್ರಾರಂಭ. ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವರಿಗೆ ಲಕ್ಷಾರ್ಚನೆ ನಡೆಯಲಿದೆ. ಸಂಜೆ 5ರಿಂದ ಮಂಡಲ ಪೂಜೆ, ದ್ರವ್ಯ ಪೂಜೆ, ಅಷ್ಟಾವದಾನ ಸೇವೆ, ಸಹಸ್ರ ನಾಳಿಕೇರ ಅಷ್ಟದ್ರವ್ಯ ಮುಹೂರ್ತ ನಡೆಯವುದು.
ಸಂಜೆ 6ರಿಂದ ಕ್ಷೇತ್ರದ ಆನುವಂಶಿಕ ಮೊಕ್ತೇಸರ ಮಾಯಿಪ್ಪಾಡಿ ಅರಮನೆಯ ದಾನ ಮಾರ್ತಾಂಡ ವರ್ಮ ರಾಜ ಯಾನೆ ರಾಮಂತರಸು- 8 ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದ್ದು ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಲಿರುವರು. ಆ ಬಳಿಕ ಮಧೂರು ಸಹೋದರಿಯರಿಂದ ಶಾ ಸಂಗೀತ, ನಾಟ್ಯ ನಿಲಯ ಬಾಲ ಕೃಷ್ಣ ಮಾಸ್ತರ್ ಮಂಜೇಶ್ವರ ಅವರ ಶಿಷ್ಯೆ ಯರಿಂದ ನೃತ್ಯ ವೈಭವ ನಡೆಯಲಿದೆ.
ಫೆ.28ರಂದು ವಿವಿಧ ಭಜನಾ ತಂಡಗಳಿಂದ ಭಜನೆ, ಬೆಳಗ್ಗೆ 6ರಿಂದ ಚತುರ್ವಿಂಶತ್ಯುತ್ತರ ಸಹಸ್ರ ನಾರಿಕೇಳ ಅಷ್ಟದ್ರವ್ಯ ಮಹಾಗಣಯಾಗ, 11ಕ್ಕೆ ಪೂರ್ಣಾಹುತಿಗೊಳ್ಳಲಿದೆ. ಸಂಜೆ 5 ರಿಂದ ಸಾರ್ವಜನಿಕ ಶ್ರೀ ಸತ್ಯವಿನಾಯಕ ಪೂಜೆ, ರಾತ್ರಿ 8ರಿಂದ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಅವರ ಅಧ್ಯಕ್ಷತೆಯ ಧಾರ್ಮಿಕ ಸಭೆಯಲ್ಲಿ ಶ್ರೀಧಾಮ ಮಾಣಿಲದ ಸ್ವಾಮೀಜಿ ಆಶೀರ್ವಚನ ನೀಡುವರು. ಮಧ್ಯಾಹ್ನ 1ರಿಂದ ಶ್ರೀ ಬೊಡ್ಡಜ್ಜ ಯಕ್ಷಭಾರತಿ ಮಧೂರು ಅವರಿಂದ ದಕ್ಷದ್ವಾರ ಯಕ್ಷಗಾನ ಕೂಟ, ರಾತ್ರಿ 10 ರಿಂದ ಅಗ್ರಗಣ್ಯ ಕಲಾವಿದರಿಂದ “ಭಸ್ಮಾಸುರ ಮೋಹಿನಿ’ ಯಕ್ಷಗಾನ ಬಯಲಾಟ ಜರಗಲಿದೆ.