Advertisement

ಸೊರಬದಲ್ಲಿ ಮುಂದುವರಿದ ಸೋದರರ ಕಾಳಗ

06:15 AM May 04, 2018 | |

ಸೋದರರ ಸವಾಲ್‌ ಎಂದೇ ಬಿಂಬಿತವಾಗಿರುವ ಸೊರಬ ಕ್ಷೇತ್ರ ರಾಜ್ಯದಲ್ಲಿ ಗಮನ ಸೆಳೆಯುವ ಕ್ಷೇತ್ರಗಳಲ್ಲಿ ಒಂದಾಗಿದೆ. ನಾಲ್ಕನೇ ಬಾರಿಗೆ ಪರಸ್ಪರ ಎದುರಾಗಿರುವ ಈ ಸಹೋದರರು ವಿಜಯದ ನಗೆ ಬೀರಲು ಭಾರೀ ಪೈಪೋಟಿ ನಡೆಸುತ್ತಿದ್ದಾರೆ. ಯಾರೇ ಗೆದ್ದರೂ ಅಂತರ ದೊಡ್ಡದಾಗಿರುವಂತೆ ಕಾಣಬರುತ್ತಿಲ್ಲ.

Advertisement

ಬಿಜೆಪಿಯಿಂದ ಕುಮಾರ್‌ ಬಂಗಾರಪ್ಪ ಮತ್ತು ಜೆಡಿಎಸ್‌ನಿಂದ ಮಧು ಬಂಗಾರಪ್ಪ ಸ್ಪರ್ಧಿಸಿದ್ದಾರೆ. 2004ರಲ್ಲಿ ಮೊದಲ ಬಾರಿಗೆ ಈ ಸೋದರರು ಪರಸ್ಪರ ಎದುರಾಗಿದ್ದರು. ಆಗ ಕುಮಾರ್‌ ಗೆಲುವು ಸಾಧಿಸಿದ್ದರು. 2008ರಲ್ಲಿ ಮತ್ತೂಮ್ಮೆ ನಡೆದ ಸೋದರರ ಕಾಳಗದಲ್ಲಿ ಮೂರನೇ ವ್ಯಕ್ತಿಯಾಗಿ ಹರತಾಳು ಹಾಲಪ್ಪ ಅನಾಯಾಸವಾಗಿ ಬಿಜೆಪಿಯಿಂದ ಗೆದ್ದು ಸಚಿವರೂ ಆದರು. 3ನೇ ಬಾರಿಗೆ ಎಂದರೆ ಕಳೆದ ಚುನಾವಣೆಯಲ್ಲಿ ಮಧು ಬಂಗಾರಪ್ಪ ಜೆಡಿಎಸ್‌ನಿಂದ ಮತ್ತು ಕುಮಾರ್‌ ಬಂಗಾರಪ್ಪ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಆಗ ಮಧು ಭಾರೀ ಅಂತರದಿಂದ ಗೆದ್ದು ಸೋಲಿಗೆ ಸೇಡು ತೀರಿಸಿಕೊಂಡಿದ್ದರು.

ಕುಮಾರ್‌ ಬಂಗಾರಪ್ಪ ಚುನಾವಣೆ ಘೋಷ ಣೆಗೆ ಸ್ವಲ್ಪ ಮೊದಲು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿಕೊಂಡರು. ಕುಮಾರ್‌ ಕಾಂಗ್ರೆಸ್‌ ತೊರೆಯು ತ್ತಲೇ ಜತೆಯಲ್ಲಿ ಅವರ ಬೆಂಬಲಿಗರೂ ಬಿಜೆಪಿ ಸೇರಿಕೊಂಡರು. ಕುಮಾರ್‌ ಬಿಜೆಪಿ ಸೇರುತ್ತಿದ್ದಂತೆ ಅಲ್ಲಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ತಲ್ಲೂರು ರಾಜು ಕಾಂಗ್ರೆಸ್‌ ಸೇರಿಕೊಂಡು ಟಿಕೆಟ್‌ ಗಿಟ್ಟಿಸಿಕೊಂಡರು. 

ಮೊದಲು ಬಿಜೆಪಿಯಿಂದ ಟಿಕೆಟ್‌ ಆಕಾಂಕ್ಷಿ ಯಾಗಿದ್ದ ಹರತಾಳು ಹಾಲಪ್ಪ ಅವರಿಗೆ ಸಾಗರ ದಲ್ಲಿ ಟಿಕೆಟ್‌ ನೀಡಿದ ಯಡಿಯೂರಪ್ಪನವರು ಸೊರಬದಲ್ಲಿ ಕುಮಾರ್‌ ಗೆಲ್ಲುವಂತೆ ಕೆಲಸ ಮಾಡ ಬೇಕೆಂಬ ನಿಬಂಧನೆ ವಿಧಿಸಿದ್ದರು. ಹೀಗಾಗಿ ಕುಮಾರ್‌ ಬೆಂಬಲಿಗರ ಪಡೆಯ ಜತೆಗೆ ಹರತಾಳು ಬೆಂಬಲಿಗರು ಮತ್ತು ಕಾರ್ಯಕರ್ತರು ಒಟ್ಟಾಗಿ ಬಿಜೆಪಿ ಗೆಲುವಿಗೆ ಯತ್ನ ನಡೆಸುತ್ತಿದ್ದಾರೆ. 

ಈಡಿಗ ಮತದಾರರು ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ಈ ಕ್ಷೇತ್ರದಲ್ಲಿ ಬಳಿಕದ ಸ್ಥಾನದಲ್ಲಿ ಲಿಂಗಾಯತರು, ಎಸ್‌ಸಿ, ಎಸ್ಟಿ, ಮಡಿವಾಳರು, ಬ್ರಾಹ್ಮಣರು, ಬೆಸ್ತರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಈಡಿಗ ಮತಗಳನ್ನು ಮಧು ಮತ್ತು ಕುಮಾರ್‌ ಹಂಚಿಕೊಂಡರೆ, ಲಿಂಗಾಯತರು, ಬ್ರಾಹ್ಮಣರು ಮತ್ತು ಮಡಿವಾಳರು ಲಾಗಾಯ್ತಿನಿಂದಲೂ ಬಿಜೆಪಿ ಬೆಂಬಲಿಸುತ್ತಾ ಬಂದಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ರಾಜು ತಲ್ಲೂರು ಮಡಿವಾಳ ಸಮುದಾ ಯದವ ರಾದ್ದರಿಂದ ಆ ಸಮು ದಾಯದ ಮತಗಳು ವಿಭಜನೆಗೊಳ್ಳುವುದು ಶತಸಿದ್ಧ. ಬೆಸ್ತರು ಮತ್ತು ದಲಿತರ ಮತಗಳು ಎಲ್ಲ ಪಕ್ಷಗಳಿಗೂ ಹೋಗುವ ಸೂಚನೆ ಇದೆ.

Advertisement

ಸೊರಬ ಶಾಸಕರ ಈ ಹಿಂದಿನ ಆದಾಯ 5 ಕೋಟಿ ರೂ. ಇತ್ತು. ಈ ಬಾರಿ 16 ಕೋಟಿ ರೂ.ಗೆ ಏರಿಕೆಯಾಗಿದೆ ಎಂದರೆ ತಾಲೂಕಿನ ಅಭಿವೃದ್ಧಿಯನ್ನು ಬಿಟ್ಟು ಶಾಸಕರು ತಮ್ಮನ್ನು ತಾವು ಅಭಿವೃದ್ಧಿ ಮಾಡಿಕೊಂಡಿದ್ದಾರೆ.
– ಕುಮಾರ್‌ ಬಂಗಾರಪ್ಪ, ಬಿಜೆಪಿ ಅಭ್ಯರ್ಥಿ

ನೀರಾವರಿ ಯೋಜನೆಗ ಳಿಗೆ ಅನುದಾನ ಬಿಡುಗಡೆಗೆ  ಪಾದಯಾತ್ರೆ ಮೂಲಕ ಒತ್ತಾಯಿಸಿದ್ದು, ಇದರ ಫಲವಾಗಿ 16 ಕೋಟಿ ರೂ. ವೆಚ್ಚದಲ್ಲಿ ಕಚವಿ ಏತ ನೀರಾವರಿ ಯೋಜನೆಗೆ ಅನುದಾನ ಬಿಡುಗಡೆ ಮಾಡಿದೆ. 
– ಮಧು ಬಂಗಾರಪ್ಪ, ಜೆಡಿಎಸ್‌ ಅಭ್ಯರ್ಥಿ

40-50 ವರ್ಷದಿಂದ ಅಧಿಕಾರ ನಡೆಸಿದ ಅಪ್ಪ-ಮಕ್ಕಳು ತಾಲೂಕಿಗೆ ನೀರಾವರಿ ಯೋಜನೆ, ಕ್ರೀಡಾಂಗಣ, ರೈತರಿಗೆ  ಯೋಜನೆ ರೂಪಿಸದ ಕಾರಣ ಸೊರಬ  ಹಿಂದುಳಿದ ತಾಲೂಕು ಎಂದು  ಗುರುತಿಸಿಕೊಂಡಿದೆ.
– ರಾಜು ತಲ್ಲೂರು, ಕಾಂಗ್ರೆಸ್‌ ಅಭ್ಯರ್ಥಿ

ಮತದಾರರ ಸಂಖ್ಯೆ
ಒಟ್ಟು ಮತದದಾರರು: 1,82,002
ಪುರುಷರು: 92764
ಮಹಿಳೆಯರು: 89238

ಜಾತಿವಾರು
ಡಿಗರು:58000
ಎಸ್‌ಸಿ:30000
ಮಡಿವಾಳರು:12000
ಲಿಂಗಾಯತರು:34000
ಬ್ರಾಹ್ಮಣರು:12000
ಬೆಸ್ತರು:6000
ಮುಸ್ಲಿಮರು: 9000

– ಗೋಪಾಲ್‌ ಯಡಗೆರೆ

Advertisement

Udayavani is now on Telegram. Click here to join our channel and stay updated with the latest news.

Next