Advertisement

ಮದ್ದಡ್ಕ-ಮುಡಿಪಿರೆ ರಸ್ತೆ ಮಂಜೂರಾದರೂ ಕಾಮಗಾರಿ ನಡೆದಿಲ್ಲ

04:46 AM Jan 24, 2019 | |

ಮಡಂತ್ಯಾರು: ಬೆಳ್ತಂಗಡಿ ತಾಲೂಕಿನ ಮದ್ದಡ್ಕ – ಮುಡಿಪಿರೆ ಸಂಪರ್ಕ ರಸ್ತೆಯ ಬೇಡಿಕೆ ಹಲವು ವರ್ಷಗಳಿಂದ ಹೋರಾಟದ ರೂಪದಲ್ಲಿಯೇ ಸಾಗುತ್ತಿದೆ.

Advertisement

2002ರಲ್ಲಿ ಸಡಕ್‌ ಯೋಜನೆಯಲ್ಲಿ 5 ಕಿ.ಮೀ. ರಸ್ತೆ ಮಂಜೂರುಗೊಂಡು ಮುಡಿಪಿರೆಯಲ್ಲಿ ಶಿಲಾನ್ಯಾಸ ಮಾಡ ಲಾಗಿದ್ದು ಮದ್ದಡ್ಕದಿಂದ ಕೇವಲ 1.4 ಕಿ.ಮೀ. ರಸ್ತೆಗೆ ಮಾತ್ರ ಡಾಮರು ಹಾಕಲಾಗಿತ್ತು. ಅನಂತರ ಈ ವರೆಗೂ ಸಂಪರ್ಕ ರಸ್ತೆಯ ಪ್ರಸ್ತಾವವೇ ಇಲ್ಲದಂತಾಗಿದ್ದು, ಜನರ ಆಕ್ರೊಶಕ್ಕೆ ಕಾರಣವಾಗಿದೆ. ನಾಗರಿಕ ಹಿತರಕ್ಷಣ ಸಮಿತಿ ರಚನೆ ಮಾಡಿ ಸಭೆ ನಡಸಿದ್ದು, ಮುಂದಿನ ಲೋಕಸಭಾ ಚುನಾ ವಣೆ ಬಹಿಷ್ಕಾರಕ್ಕೆ ಸಿದ್ಧತೆ ನಡೆಯುತ್ತಿದೆ.

2002ರಲ್ಲಿ ಶಂಕುಸ್ಥಾಪನೆ
2002ರಲ್ಲಿ ಪ್ರಭಾಕರ ಬಂಗೇರ ಬೆಳ್ತಂಗಡಿ ಶಾಸಕರಾಗಿದ್ದಾಗ ಚಿಕ್ಕಮಗ ಳೂರು ಸಂಸದ ಶ್ರೀಕಂಠಪ್ಪ ಈ ರಸ್ತೆಯನ್ನು ಸಡಕ್‌ ಯೋಜನೆ ಯಲ್ಲಿ ಡಾಮರು ಕಾಮಗಾರಿ ಯನ್ನು ಮಂಜೂರು ಮಾಡಿ ದ್ದರು. ಮದ್ದಡ್ಕದಿಂದ ಅದ್ದೂರಿ ಮೆರವಣಿಗೆಯಲ್ಲಿ ಸಾಗಿ ಮುಡಿಪಿರೆಯಲ್ಲಿ ಶಿಲಾನ್ಯಾಸ ನಡೆಸಲಾಗಿತ್ತು. ಶಿಲಾನ್ಯಾಸ ನಡೆದ ವರ್ಷದಲ್ಲಿ 4 ಕಡೆ ಮೋರಿ, 1.4 ಕಿ.ಮೀ. ರಸ್ತೆಗೆ ಡಾಮರು ಹಾಕಲಾಗಿತ್ತು. ಅನಂತರ 16 ವರ್ಷ ಕಳೆದರೂ ಮುಡಿಪಿರೆ ಸಂಪರ್ಕ ರಸ್ತೆಯ ಸುದ್ದಿಯಿಲ್ಲ.

ಮುದಲಡ್ಕದಲ್ಲಿ ಮೋರಿ ಇಲ್ಲ
ಮದ್ದಡ್ಕ – ಮುಡಿಪಿರೆ ಸಂಪರ್ಕ ರಸ್ತೆಯಾಗಬೇಕಾದರೆ ಮುದಲಡ್ಕ ದಲ್ಲಿ ಮೋರಿ ರಚನೆಯಾಗಬೇಕಿದೆ. ಇಲ್ಲಿ ತಾರ್‌ ಇರುವುದರಿಂದ ಮಳೆಗಾಲದಲ್ಲಿ ತಾರ್‌ ದಾಟುವುದೇ ಸಮಸ್ಯೆಯಾಗಿದೆ. ಸುಮಾರು 100ಕ್ಕೂ ಹೆಚ್ಚು ಕುಟುಂಬಗಳು ವಾಸಿಸುವ ಸ್ಥಳವಾಗಿದ್ದು, ಶಾಲಾಮಕ್ಕಳು ಅತೀ ಹೆಚ್ಚು ಇದ್ದಾರೆ.

ಎರಡು ಗ್ರಾಮಗಳ ಸಂಪರ್ಕ
ಈ ರಸ್ತೆ ಸಂಪರ್ಕವಾದರೆ ಎರಡು ಗ್ರಾಮಗಳ ಸಂಪರ್ಕವಾಗುತ್ತದೆ. ಕುವೆಟ್ಟು ಮತ್ತು ಮಚ್ಚಿನ ಗ್ರಾಮದ ನಡುವೆ ಬರುವ ರಸ್ತೆಯಾಗಿದ್ದು, 2 ಪಂ.ಗಳಲ್ಲಿಯೂ ಹೆಚ್ಚಿನ ಬೇಡಿಕೆ ಇದೆ. ಸಂಪರ್ಕ ರಸ್ತೆಯಾದರೆ ಮದ್ದಡ್ಕ ಜನರಿಗೆ ಮಚ್ಚಿನಕ್ಕೆ ತೆರಳಲು ಸಮೀಪವಾಗುತ್ತದೆ. ಮಚ್ಚಿನ ಜನತೆಗೆ ಮುಡಿಪಿರೆ ಮೂಲಕ ಮದ್ದಡ್ಕ ಬೆಳ್ತಂಗಡಿ ತಲುಪಲು ಸಹಾಯವಾಗುತ್ತದೆ.

Advertisement

ಸಂಸದರಿಗೆ ಮನವಿ
ಸಂಸದರಿಗೆ 5 ಸಲ ಮನವಿ ನೀಡಲಾ ಗಿದ್ದರೂ ಭರವಸೆ ಮಾತ್ರ ನೀಡುತ್ತಿದ್ದಾರೆ. ಕಳೆದ ವರ್ಷ ಪ್ರಧಾನಿಗೂ ಪತ್ರ ಬರೆದಿದ್ದು, ಪ್ರಧಾನಿಯಿಂದ ಪತ್ರ ಬಂದ ತತ್‌ಕ್ಷಣ ಸರ್ವೆ ಮಾಡಿ ಹೋಗಿದ್ದಾರೆ. ಬಳಿಕ ಸುದ್ದಿಯಿಲ್ಲ. ಗ್ರಾಮಸಭೆಯಲ್ಲಿ ಪ್ರತಿ ಬಾರಿ ಪ್ರಸ್ತಾವ ಮಾಡಿದರೂ ಪ್ರಯೋಜನವಾಗಿಲ್ಲ. ಶಾಸಕರಿಗೆ, ಪಂ.ಗಳಿಗೆ, ಜಿ.ಪಂ., ತಾ.ಪಂ.ಗಳಿಗೂ ಅನೇಕ ಸಲ ಮನವಿ ನೀಡಲಾಗಿದೆ ಎನ್ನುತ್ತಾರೆ ಸ್ಥಳಿಯರು.

ಖರ್ಚು ಅಧಿಕ 
ಕುತ್ತಿನ, ದೇವರಗುಂಡಿ, ಕೊಂಬೊಟ್ಟು, ಬೆಂಕಿರೊಟ್ಟು, ನೆಕ್ಕಿಲಾಜೆ ಪ್ರದೇಶದವರು ಬೆಳ್ತಂಗಡಿಗೆ ಮಡಂತ್ಯಾರು ಮೂಲಕವೇ ತೆರಳಬೇಕು. ದಿನಕ್ಕೆ 80 ರೂ. ತಗಲುತ್ತದೆ. ಸಂಪರ್ಕ ರಸ್ತೆಯಾದರೆ ಮದ್ದಡ್ಕ ಮೂಲಕ ಕೇವಲ 30 ರೂ.ನಲ್ಲಿ ಬೆಳ್ತಂಗಡಿ ತಲುಪಬಹುದು. ಮದ್ದಡ್ಕದಿಂದ ನಾಳ ಕ್ಷೇತ್ರ, ಬಳ್ಳಮಂಜ ಕ್ಷೇತ್ರ, ಬಳ್ಳಮಂಜ ಹಾಲಿನ ಡಿಪೊ, ಬ್ಯಾಂಕ್‌ಗಳಿಗೆ ತೆರಳಬೇಕಾದರೆ ಮಡಂತ್ಯಾರು ಮೂಲಕ 9 ಕಿ.ಮೀ., ಸಂಪರ್ಕ ರಸ್ತೆಯಾದರೆ ಕೇವಲ 5 ಕಿ.ಮೀ. ಕ್ರಮಿಸಬೇಕು.

ಚುನಾವಣೆ ಬಹಿಷ್ಕಾರ
18 ವರ್ಷಗಳಿಂದ ಈ ರಸ್ತೆಗಾಗಿ ಹೋರಾಟ ನಡೆಸುತ್ತಿದ್ದೇವೆ. 5 ಬಾರಿ ಸಂಸದರಿಗೆ ಮನವಿ ನೀಡಿದ್ದೇವೆ. ಜನಪ್ರತಿನಿಧಿಗಳು ಮನವಿಗೆ ಸ್ಪಂದಿಸುತ್ತಿಲ್ಲ. ಸಂಪರ್ಕ ರಸ್ತೆಯಿಲ್ಲದೆ ಪರದಾಡುವಂತಾಗಿದೆ. ಸಂಪರ್ಕ ರಸ್ತೆ ಆಗದಿದ್ದರೆ ಹೋರಾಟ, ಮುಂಬರುವ ಲೋಕಸಭಾ ಚುನಾವಣೆ ಬಹಿಷ್ಕಾರ ಮಾಡುತ್ತೇವೆ. ಈಗಾಗಲೇ 130 ಮನೆಗಳಿಗೆ ಕರಪತ್ರ ಹಂಚಲಾಗಿದೆ.
ಪ್ರಭಾಕರ ಪೂಜಾರಿ ಮುದಲಡ್ಕ,
  ಅಧ್ಯಕ್ಷ, ನಾಗರಿಕ ಹೋರಾಟ ಸಮಿತಿ, ಮುಡಿಪಿರೆ

ಶಾಸಕರಿಂದ ಭರವಸೆ
ಸಂಪರ್ಕ ರಸ್ತೆಗೆ ಎರಡು ಗ್ರಾಮಗಳ ಜನರಿಂದಲೂ ಬೇಡಿಕೆ ಇದೆ. 2002ರಲ್ಲಿ ಸಡಕ್‌ ಯೋಜನೆಯಲ್ಲಿ ರಸ್ತೆ ಮಂಜೂರುಗೊಂಡಿದ್ದು , ಮನಮೋಹನ ಸಿಂಗ್‌ ಪ್ರಧಾನಿ ಸಂದರ್ಭ ಸಡಕ್‌ ಯೋಜನೆ ರದ್ದಾಗಿದೆ. ಸಂಪರ್ಕ ರಸ್ತೆ ಆದರೆ ಮಚ್ಚಿನಕ್ಕೆ ತೆರಳಲು ಹೆಚ್ಚು ಅನುಕೂಲ ವಾಗುತ್ತದೆ. ಈ ಬಗ್ಗೆ ಶಾಸಕರಿಗೆ ಮನವಿ ನೀಡಲಾಗಿದ್ದು, ನಮ್ಮ ಗ್ರಾಮ ನಮ್ಮ ರಸ್ತೆಯಲ್ಲಿ ಮಾಡುವ ಭರವಸೆ ನೀಡಿದ್ದಾರೆ.
ಅಶೋಕ್‌ ಕೋಟ್ಯಾನ್‌
  ಅಧ್ಯಕ್ಷರು, ಕುವೆಟ್ಟು ಗ್ರಾ.ಪಂ

ಪ್ರಮೋದ್‌ ಬಳ್ಳಮಂಜ

Advertisement

Udayavani is now on Telegram. Click here to join our channel and stay updated with the latest news.

Next