Advertisement

Mackerel Fish ; ಹೊಸ ದಾಖಲೆ‌: 48 ಸೆಂಟಿಮೀಟರ್ ಉದ್ದದ ಬಂಗುಡೆ ಪತ್ತೆ!

11:02 PM Aug 27, 2023 | Team Udayavani |

ಕಾರವಾರ: ದೇಶದಲ್ಲೇ ಅತೀ ದೊಡ್ಡದು ಎನ್ನಬಹುದಾದ ಬಂಗುಡೆ ಕಾರವಾರದಲ್ಲಿ ರವಿವಾರ ಪತ್ತೆಯಾಗಿದೆ. ಮೀನುಗಾರರು ಬೀಸಿದ ಬಲೆಗೆ 48 ಸೆಂಟಿ ಮೀಟರ್ ಉದ್ದದ ಬಂಗಡೆ ಮೀನು ಸಿಕ್ಕಿದ್ದು, ಅದರ ತೂಕ ಒಂದು ಕೆ.ಜಿ. ಇದೆ.

Advertisement

ಇದು ಈವರೆಗೆ ಸಿಕ್ಕ ಅತೀ ದೊಡ್ಡ ಬಂಗಡೆ ಮೀನು. ಭಾರತದಲ್ಲಿ ಈತನಕ 32 ಸೆಂಮೀ, 42 ಸೆಂಮೀ ಉದ್ದದ ಬಂಗುಡೆ ಸಿಕ್ಕಿತ್ತು ಎಂದು ದಾಖಲಾಗಿದೆ. ಇಂದು ಸಿಕ್ಕ ಬಂಗುಡೆ ಈ ದಾಖಲೆ ಮುರಿದು, ಹೊಸ ದಾಖಲೆ‌ ಸ್ಥಾಪಿಸಿದೆ. ಇದು ನವೀನ್ ಹರಿಕಂತ್ರ ಎಂಬುವವರರಿಗೆ ಸಿಕ್ಕಿತ್ತು. ಇದನ್ನು ಕಡಲಜೀವಶಾಸ್ತ್ರ ವಿಭಾಗದ ಶಿವಕುಮಾರ್ ಹರಗಿ ಎಂಬ ಉಪನ್ಯಾಸಕರಿಗೆ ನೀಡಲಾಗಿದೆ. ಅವರು ಈ ದೊಡ್ಡ ಬಂಗುಡೆ ರಕ್ಷಿಸಿ ಇಡುವುದಾಗಿ ತಿಳಿಸಿದ್ದಾರೆ.

ಈ ಬಂಗಡೆ 19 ಇಂಚು ಉದ್ದ, 4.5 ಇಂಚು ಅಗಲ ಇದೆ. ತೂಕ ಒಂದು ಕೆಜಿ ಯಷ್ಟಿದೆ. ಕಾರವಾರದಲ್ಲಿ ಸಿಕ್ಕ ಅತೀ ದೊಡ್ಡ ಬಂಗಡೆ ಮೀನು ಎನಿಸಿ ದಾಖಲೆ ಬರೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next