Advertisement

ಮಾಚಿದೇವ ಜಯಂತಿ ಅದ್ಧೂರಿ ಆಚರಣೆಗೆ ನಿರ್ಧಾರ

11:16 AM Jan 29, 2018 | Team Udayavani |

ಚಿತ್ತಾಪುರ: ಶರಣ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದ ಅಂಗವಾಗಿ ಪಟ್ಟಣದ ತಹಶೀಲ್ದಾರ ಸಭಾಂಗಣದಲ್ಲಿ ಗ್ರೇಡ್‌-2 ತಹಶೀಲ್ದಾರ ರವೀಂದ್ರ ದಾಮಾ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.

Advertisement

ಮಡಿವಾಳ ಸಮಾಜದ ತಾಲೂಕು ಅಧ್ಯಕ್ಷ ದೇವಿಂದ್ರಪ್ಪ ಮಡಿವಾಳ ಮಾತನಾಡಿ, ಜಯಂತಿ ಕಾರ್ಯಕ್ರಮಕ್ಕೆ ಯಾವುದೇ ರೀತಿಯ ಅಡೆತಡೆ ಆಗದಂತೆ ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಹೇಳಿದರು.

ಗೌರವಾಧ್ಯಕ್ಷ ದೇವಿಂದ್ರಪ್ಪ ಅಲ್ಲೂರ(ಕೆ) ಮಾತನಾಡಿ, ತಾಲೂಕಿನ ಎಲ್ಲ ಶಾಲಾ ಕಾಲೇಜು, ಸರ್ಕಾರಿ ಕಚೇರಿ, ಪಂಚಾಯಿತ ಕಚೇರಿ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಕಡ್ಡಾಯವಾಗಿ ಜಯಂತಿ ಕಾರ್ಯಕ್ರಮ ಮಾಡಬೇಕು. ಒಂದು ವೇಳೆ ಎಲ್ಲಾದರೂ ಮಾಡದ ವರದಿ ಬಂದರೆ ಅಂತಹವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಗ್ರೇಡ್‌-2 ತಹಶೀಲ್ದಾರ ರವೀಂದ್ರ ದಾಮಾ ಮಾತನಾಡಿ, ರಾಜ್ಯ ಸರ್ಕಾರ ಜಯಂತಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಲು ನಿರ್ದೇಶನ ನೀಡಿದೆ. ಸಮಾಜದ ಮುಖಂಡರು ತಮ್ಮ ಸಮಾಜ ಬಾಂಧವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರೆತಂದು ಸಹಕಾರ ನೀಡಿದಾಗ ಮಾತ್ರ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಶರಣ ಮಡಿವಾಳ ಮಾಚಿದೇವರ ಜಯಂತಿ ಕಡ್ಡಾಯವಾಗಿ ಆಚರಿಸುವಂತೆ ಈಗಾಗಲೇ ಸೂತ್ತೋಲೆ ನೀಡಲಾಗಿದೆ. ಒಂದು ವೇಳೆ ಎಲ್ಲಾದರೂ ಜಯಂತಿ ಆಚರಿಸದ ವರದಿಗಳು ಬಂದರೇ ಶಿಸ್ತು ಕ್ರಮ ಕೈಗೊಳ್ಳುವಂತೆ ಮೇಲಾಧಿಕಾರಿಗಳಿಗೆ ವರದಿ ಕಳುಹಿಸಲಾಗುವುದು ಎಂದು ಹೇಳಿದರು.

Advertisement

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶರಣ ಮಡಿವಾಳ ಮಾಚಿದೇವರ ಭಾವಚಿತ್ರದ ಭವ್ಯ ಮೆರವಣಿಗೆ ಮಾಡುವುದು. ಮೆರವಣಿಗೆಯಲ್ಲಿ ಭಾಗವಹಿಸುವ ಜನರಿಗೆ ಉಪಹಾರ ವ್ಯವಸ್ಥೆ ಕಲ್ಪಿಸುವುದು. ಶರಣ ಮಡಿವಾಳ ಮಾಚಿದೇವರ
ಜೀವನಚರಿತ್ರೆ ಕುರಿತು ಉಪನ್ಯಾಸ. ಮೆರವಣಿಗೆ ಉದ್ದಕ್ಕೂ ಡೊಳ್ಳು ಭಾಜಾ ಭಜಂತ್ರಿ ಸಮೇತ ವಿವಿಧ ಸಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವುದು ಸೇರಿದಂತೆ ಅದ್ಧೂರಿಯಾಗಿ ಜಯಂತಿ ಕಾರ್ಯಕ್ರಮ ನಡೆಸಲು ನಿರ್ಧಾರ ತೆಗೆದುಕೊಳ್ಳಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡರಂಗಪ್ಪ, ಕಲಾವತಿ, ರುಕೊದ್ದಿನ್‌, ಪ್ರಕಾಶ, ಮಧುಸೂಧನ ಘಾಳೆ, ದಶರಥ, ಮಡಿವಾಳ ಸಮಾಜದ ಉಪಾಧ್ಯಕ್ಷ ಮಲ್ಲೇಶಾ ಮಡಿವಾಳ, ಬಾಬು ಮಡಿವಾಳ, ಅಶೋಕ ಮಡಿವಾಳ, ಮಲ್ಲೇಶಿ, ಮಹಾದೇವಪ್ಪ ಮಡಿವಾಳ, ಹೊಂಗಿರಣ ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಮಹ್ಮದ್‌ ಇಬ್ರಾಹಿಂ, ರವಿ ಇವಣಿ, ಶ್ರೀನಿವಾಸ ಜಗಲಿಮನಿ, ಮಲ್ಲಿನಾಥ ಕೊಲ್ಕುಂದಿ, ನಾಗಣ್ಣ ದಿಗ್ಗಾಂವ, ರಾಘವೇಂದ್ರ ಕೊಂಡಪಳ್ಳಿಕರ್‌, ಉದಯಕುಮಾರ, ಸೂರ್ಯಕಾಂತ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next