Advertisement

ಪರಿಸರ ರಕ್ಷಣೆ ಜಾಗೃತಿಗೆ ಸೈಕಲ್‌ ಯಾನ: ಮಾನ

05:39 PM Dec 15, 2018 | |

ಧಾರವಾಡ: ಸ್ವಾಮಿ ವಿವೇಕಾನಂದರು ಷಿಕಾಗೋದಲ್ಲಿ ಭಾಷಣ ಮಾಡಿ 125 ವಸಂತಗಳು ತುಂಬಿದ ಹಿನ್ನೆಲೆಯಲ್ಲಿ ಸ್ವಾಮಿ ವಿವೇಕಾನಂದ ವಿಚಾರ ಸೈಕಲ್‌ ಯಾತ್ರಾ ಸದಸ್ಯರು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ನಡೆಸುತ್ತಿರುವ ಸೈಕಲ್‌ ಯಾತ್ರೆ ನಗರಕ್ಕೆ ಶುಕ್ರವಾರ ಆಗಮಿಸಿತು.

Advertisement

ಈ ವೇಳೆ ಯಾತ್ರೆಯ ವಿವರ ನೀಡಿದ ಪುಣೆಯ ಸೈಕಲ್‌ ಯಾತ್ರಿಕ ಸುರೇಶ ಮಾನೆ, ಸೈಕಲ್‌ ಚಲಾಯಿಸುವುದರಿಂದ ಆಗುವ ಉಪಯೋಗಗಳನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಈ ಯಾತ್ರೆ ಹಮ್ಮಿಕೊಂಡಿದ್ದೇವೆ. ವಾಹನಗಳ ಹೆಚ್ಚಳದಿಂದ ಉಂಟಾಗುವ ವಾತಾವರಣ ಬದಲಾವಣೆ ಜನರ ಆರೋಗ್ಯಕ್ಕೆ ಕುಂದು ತರುತ್ತಿದೆ. ಸಾಧ್ಯವಾದಷ್ಟು ವಿದ್ಯಾರ್ಥಿಗಳು ಮತ್ತು ನೌಕರರು ಸೈಕಲ್‌ ಬಳಕೆ ಮಾಡಬೇಕು. ಇದರಿಂದ ಪರಿಸರಕ್ಕೂ, ವಾತಾವರಣಕ್ಕೂ ಒಳಿತು ಎಂಬ ಸಂದೇಶವನ್ನು ಈ ಸೈಕಲ್‌ ಯಾತ್ರೆ ಮೂಲಕ ಸಾರಲಾಗುತ್ತಿದೆ ಎಂದರು.

ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಈ ಯಾತ್ರೆ ಇದ್ದು, ದೇಶದ ವಿವಿಧ ರಾಜ್ಯಗಳ 31ರಿಂದ 63 ವಯೋಮಾನದ 9 ಸೈಕಲ್‌ ಯಾತ್ರಿಕರು ಭಾಗವಹಿಸಿದ್ದೇವೆ. ನ. 24ರಿಂದ ಆರಂಭಗೊಂಡ ಯಾತ್ರೆ ಡಿ. 21ರಂದು ಕನ್ಯಾಕುಮಾರಿ ತಲುಪಲಿದೆ. ಬರೋಬ್ಬರಿ 3921 ಕಿ.ಮೀ ಪ್ರಯಾಣಿಸಿ ಕನ್ಯಾಕುಮಾರಿಗೆ ಭೇಟಿ ನೀಡಲಿದ್ದೇವೆ. ಜಮ್ಮು ಕಾಶ್ಮೀರ, ನಾಗ್ಪುರ, ಭೂಪಾಲ್‌, ದೆಹಲಿ, ಚಂಢೀಗಡ, ಮನಾಲಿ, ಲಡಾಕ್‌, ಕಾರ್ಗಿಲ್‌, ಅಮೃತಸರ, ಜೈಪುರ, ಅಹ್ಮದಾಬಾದ್‌, ಬರೋಡ, ಮುಂಬೈ, ಬೆಂಗಳೂರಿನಿಂದ ಕನ್ಯಾಕುಮಾರಿ ತಲುಪಲಿದ್ದೇವೆ. ದಿನಕ್ಕೆ ಅಂದಾಜು 150 ಕಿಮೀ ಸೈಕಲ್‌ ಚಲಾಯಿಸುತ್ತೇವೆ ಎಂದು ತಿಳಿಸಿದರು. 

ಸೈಕಲ್‌ ಯಾತ್ರಿಕರನ್ನು ಧಾರವಾಡಕ್ಕೆ ಸ್ವಾಗತಿಸಿದ ರವೀಂದ್ರ ವರ್ಮ ಮಾತನಾಡಿ, ಬ್ಯಾಕ್‌ ಆನ್‌ ಬೈಕ್‌ ಸಂಘಟನೆಯ ನಾಲ್ಕು ಜನ ಸದಸ್ಯರು ಯಾತ್ರಿಕರನ್ನು ಶಿಗ್ಗಾವಿವರೆಗೆ ಸೈಕಲ್‌ ಮೂಲಕ ಸಾಗಿ ಬೀಳ್ಕೊಡಲಾಗುತ್ತದೆ. ಯಾತ್ರಿಗಳಿಗೆ ಪ್ರತಿಯೊಂದು ರಾಮಕೃಷ್ಣ ಆಶ್ರಮದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next