Advertisement

ಸೂರ್ಯಕಾಂತ್‌ ಪಂಡಾ ; ದಿನಸಿ ಅಂಗಡಿಯಿಂದ ಐಪಿಎಲ್‌ನತ್ತ…

03:21 AM Aug 20, 2020 | Hari Prasad |

ಕೋಲ್ಕತಾ: ಅದೆಷ್ಟೋ ಮಂದಿ ಅನಾಮಧೇಯರ ಪಾಲಿಗೆ ಭರವಸೆಯ ಬೆಳಕು ಮೂಡಿಸಿದ ಕೂಟವೆಂದರೆ ಐಪಿಎಲ್‌.

Advertisement

ಇದೀಗ ಪಶ್ಚಿಮ ಬಂಗಾಲದ ಹೂಗ್ಲಿ ಜಿಲ್ಲೆಯ ಚಿನ್ಸುರಾಹ್‌ನ ದಿನಸಿ ಅಂಗಡಿಯಲ್ಲಿ ದಿನಗೂಲಿ ನೌಕರನಾಗಿ ದುಡಿಯುತ್ತಿದ್ದ ಸೂರ್ಯಕಾಂತ್‌ ಪಂಡಾ ಪಾಲಿಗೆ ಐಪಿಎಲ್‌ ಅದೃಷ್ಟದ ಬಾಗಿಲು ತೆರೆದಿದೆ.

ಪಂಡಾ ಈ ಬಾರಿಯ ಲೀಗ್‌ನಲ್ಲಿ ಎಲೆಕ್ಟ್ರಾನಿಕ್‌ ಸ್ಕೋರರ್‌ ಆಗಿ ಕರ್ತವ್ಯ ನಿಭಾಯಿಸಲು ಆಹ್ವಾನ ಪಡೆದಿದ್ದಾರೆ.

ಮೂಲತಃ ಒಡಿಶಾದವರಾದ ಪಾಂಡಾಗೆ 32 ವರ್ಷ. ಓದಿದ್ದು 10ನೇ ತರಗತಿ ಮಾತ್ರ. ಕ್ರಿಕೆಟಿಗನಾಗಬೇಕೆಂಬುದು ಆಸೆಯಾಗಿತ್ತು. ಕನಸು ಕಟ್ಟಿಕೊಂಡು ಕೋಲ್ಕತಾಕ್ಕೆ ಹೋದವನಿಗೆ ಕ್ರಿಕೆಟಿಗನಾಗುವುದು ಅಷ್ಟು ಸುಲಭವಲ್ಲ ಎಂಬುದು ಮನವರಿಕೆಯಾಯಿತು. ಜತೆಗೆ ಎಳೆವೆ ಯಲ್ಲೇ ಹೆತ್ತವರನ್ನು ಕಳೆದುಕೊಳ್ಳಬೇಕಾಯಿತು.

ಹೊಟ್ಟೆಪಾಡಿಗಾಗಿ ದಿನಸಿ ಅಂಗಡಿಯೊಂದರಲ್ಲಿ ದುಡಿಯತೊಡಗಿದರು. ಆದರೆ ಹೂಗ್ಲಿ ಜಿಲ್ಲಾ ನ್ಪೋರ್ಟ್ಸ್ ಅಸೋಸಿಯೇಶನ್‌ (ಎಚ್‌ಡಿಎಸ್‌ಎ) ನಂಟು ಬಿಡಲಿಲ್ಲ.

Advertisement


ಕ್ಯಾಬ್‌ ಪರೀಕ್ಷೆಯಲ್ಲಿ ತೇರ್ಗಡೆ

ಕೊನೆಗೆ ಸ್ಕೋರರ್‌ ಆಗಲು ನಿರ್ಧರಿಸಿದರು. 2015ರಲ್ಲಿ ‘ಕ್ಯಾಬ್‌’ ಪರೀಕ್ಷೆ ಕಟ್ಟಿ ತೇರ್ಗಡೆಯಾದರು. 2018ರಲ್ಲಿ ‘ಬೆಸ್ಟ್‌ ಸ್ಕೋರರ್‌’ ಪ್ರಶಸ್ತಿ ಕೂಡ ಒಲಿದು ಬಂತು. ಕ್ಯಾಬ್‌ ಕಾರ್ಯದರ್ಶಿ ಅವಿಷೇಕ್‌ ದಾಲ್ಮಿಯಾ ಅವರಿಂದ ಇದನ್ನು ಸ್ವೀಕರಿಸಿದ್ದು ಪಂಡಾ ಬದುಕಿನ ಸ್ಮರಣೀಯ ಕ್ಷಣವಾಗಿದೆ. ಕೌಶಿಕ್‌ ಸಾಹಾ, ರಕ್ತಿಮ್‌ ಸಾಧು ಅವರು ಪಂಡಾಗೆ ಮೆಂಟರ್‌ ಆಗಿದ್ದರು.

ದಿನಸಿ ಅಂಗಡಿ ಮಾಲಕ ಬಿಸ್ವನಾಥ್‌ ಸಂಪೂರ್ಣ ಬೆಂಬಲ ನೀಡಿದರು. ಫ‌ುಟ್‌ಬಾಲ್‌ ಆಗಬೇಕೆಂದು ಬಯಸಿದ್ದ ಬಿಸ್ವನಾಥ್‌ ಅನಿವಾರ್ಯವಾಗಿ ತಂದೆಯ ಅಂಗಡಿ ವ್ಯವಹಾರವನ್ನು ಮುಂದುವರಿಸಿಕೊಂಡು ಹೋಗಿದ್ದರು. ಪಂಡಾ ಬದುಕಿಗೆ ಕ್ರೀಡೆ ಅದೆಷ್ಟು ಮಹತ್ವದ್ದಾಗಿದೆ ಎಂಬುದನ್ನು ಅರಿತ ಬಿಸ್ವನಾಥ್‌, ತಮ್ಮ ಕುಟುಂಬದ ಸದಸ್ಯನಂತಿರುವ ‘ಸ್ಕೋರರ್‌’ಗೆ ಶುಭ ಹಾರೈಸಿದ್ದಾರೆ. ಎಚ್‌ಡಿಎಸ್‌ಎ ಕೂಡ ಬೆಸ್ಟ್‌ ಆಫ್ ಲಕ್‌ ಹೇಳಿದೆ.

ದುಬಾೖಗೆ ಹೋಗಿ ಆಟಗಾರರ ಆಟೊಗ್ರಾಫ್ ಪಡೆಯುವುದು ನನ್ನ ಕೆಲಸವಲ್ಲ. ಸ್ಕೋರಿಂಗ್‌ ವಿಧಾನವನ್ನು ಕೂಲಂಕಷವಾಗಿ ಗಮನಿಸಿ ಕರ್ತವ್ಯಕ್ಕೆ ನ್ಯಾಯ ಒದಗಿಸಬೇಕಿದೆ.
– ಸೂರ್ಯಕಾಂತ್‌ ಪಂಡಾ

Advertisement

Udayavani is now on Telegram. Click here to join our channel and stay updated with the latest news.

Next