Advertisement

“ಮಾ. 1ಕ್ಕೆ ಪುತ್ತೂರಿನಲ್ಲಿ ಮಹಿಳಾ ಕಾಂಗ್ರೆಸ್‌ ಸಮಾವೇಶ’

03:52 PM Feb 23, 2017 | Team Udayavani |

ನೆಟ್ಟಣಿಗೆಮುಟ್ನೂರು: ಪಕ್ಷದ ಕಾರ್ಯಕರ್ತರು  ಸಕ್ರಿಯವಾಗಿ ತೊಡಗಿಸಿಕೊಂಡರೂ ಬೇರೆ ಪಕ್ಷದವರು ಅಪಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಪಕ್ಷದ ಬಲವರ್ಧನೆ ಮತ್ತು ಸಂಘಟನೆಯನ್ನು ಬಲಪಡಿಸಲು ಮಹಿಳಾ ಕಾಂಗ್ರೆಸ್‌ ಸಮಾವೇಶವನ್ನು ಮಾ. 1ರಂದು ಪುತ್ತೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದು , ಕಾರ್ಯಕರ್ತರು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಶಾಸಕಿ ಶಕುಂತಳಾ ಟಿ. ಶೆಟ್ಟಿ ಹೇಳಿದರು.

Advertisement

ಅವರು ನೆಟ್ಟಣಿಗೆಮುಟ್ನೂರು ಗ್ರಾಮದ ಸಾಂತ್ಯ ಮಹಿಳ್ನಾಥ ಶೆಟ್ಟಿ ಅವರ ಮನೆಯಲ್ಲಿ ನಡೆದ ಶಾಸಕಿ ಶಕುಂತಳಾ ಶೆಟ್ಟಿ ಅವರ 70ರ ಸಂಭ್ರಮ, ಮಹಿಳಾ ಕಾಂಗ್ರೆಸ್‌ ಸಮಾವೇಶ ಹಾಗೂ ಯುವ ಕಾಂಗ್ರೆಸ್‌ನಿಂದ “ಶಕ್ಕು ಅಕ್ಕನವರ ಸಾಧನಾ ಕೈಪಿಡಿ’ ಬಿಡುಗಡೆ ಸಮಾರಂಭದ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಪುತ್ತೂರು ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ವಿಶಾಲಾಕ್ಷಿ ಮಾತನಾಡಿ, ಪಕ್ಷದಲ್ಲಿ ಒಳ್ಳೆಯ ಕೆಲಸಕಾರ್ಯಗಳನ್ನು ಮಾಡಿದವರಿಗೆ ಪಕ್ಷ ಗುರುತಿಸಿ ಸ್ಥಾನಮಾನ ನೀಡುತ್ತಿದೆ. ಮಾ. 1ರಂದು ಮಹಿಳಾ  ಮತ್ತು ಯುವ ಕಾಂಗ್ರೆಸ್‌ ಸಮಾವೇಶ ಮಾಡಿ ಪಕ್ಷಕ್ಕೆ, ಶಾಸಕರಿಗೆ ಬಲಗೊಟ್ಟು ಶಾಸಕರ 70ರ ಸಂಭ್ರಮವನ್ನು ಯಶಸ್ವಿಗೊಳಿಸಲಾಗುವುದು. ನಿರಂತರವಾಗಿ ಮಹಿಳೆಯರ ಸಮಾವೇಶವನ್ನು ಗ್ರಾಮ ಗ್ರಾಮಗಳಲ್ಲಿ ನಡೆಸಲಾಗುವುದು ಎಂದು ಹೇಳಿದರು.
ಪುತ್ತೂರು ಬ್ಲಾಕ್‌ ಕಾಂಗ್ರೆಸ್‌ ಕಾರ್ಯದರ್ಶಿ, ಕಾರ್ಯಕ್ರಮ ಸಂಯೋಜಕ ಕೃಷ್ಣಪ್ರಸಾದ್‌ ಆಳ್ವ ಮಾತನಾಡಿ, ಮಾ. 1ರಂದು ನಡೆಯಲಿರುವ ಕಾರ್ಯಕ್ರಮ ರೂಪುರೇಷೆಗಳ ಮಾಹಿತಿ ನೀಡಿದರು.

ಬ್ಲಾಕ್‌ ಕಾಂಗ್ರೆಸ್‌ ಕಾರ್ಯದರ್ಶಿ ಅಮಲಾ ರಾಮಚಂದ್ರ ಭಟ್‌ ಮಾತನಾಡಿ, ಮಹಿಳಾ ಸಮಾವೇಶ ಮತ್ತು ಶಾಸಕರ ಸಾಧನಾ ಕೈಪಿಡಿ ಬಿಡುಗಡೆ ಮಾಡುತ್ತಿರುವ ಇಂತಹ ಕಾರ್ಯಕ್ರಮಗಳ ಮೂಲಕ ಬಿಜೆಪಿಯಲ್ಲಿ ನಡುಕ ಮತ್ತು ಕಾರ್ಯಕರ್ತರಲ್ಲಿ ವಿಶ್ವಾಸ ಮೂಡಿಸುವಂತಹ ಕಾರ್ಯಗಳಾಗುತ್ತಿರಲಿ ಎಂದು ಹೇಳಿದರು.

ನೆಟ್ಟಣಿಗೆ ಗ್ರಾಮ ಪಂಚಾಯತ್‌ ಅಧ್ಯಕ್ಷೆ ಶಂಕರಿ ಭಂಡಾರಿ, ಗ್ರಾಮ ವಲಯ ಕಾಂಗ್ರೆಸ್‌ ಅಧ್ಯಕ್ಷೆ ಮಹಮ್ಮದ್‌ ಕೆ., ಮಹಿಳ್ನಾಥ ಶೆಟ್ಟಿ  ಸಾಂತ್ಯ, ಶೋಭಾ ಮಾಲಿನಿ, ಹರಿಣಾಕ್ಷಿ ಜಗದೀಶ್‌ ಶೆಟ್ಟಿ, ಶಾರದಾ ಅರಸು, ಪವಿತ್ರಾಬಾಬು, ಕೆಡಿಪಿ ಸದಸ್ಯ ಅಶೋಕ ಸಂಪ್ಯ, ರೋಶನ್‌ ರೈ, ಹನೀಫ್‌ ಮಾಡಾವು, ಗ್ರಾ.ಪಂ.ಸದಸ್ಯರು ಉಪಸ್ಥಿತರಿದ್ದರು.ನೆ.ಮು. ಗ್ರಾ. ಪಂ.ಉಪಾಧ್ಯಕ್ಷ  ಶ್ರೀರಾಮ ಪಕ್ಕಳ ಸ್ವಾಗತಿಸಿದರು. ಮಾಜಿ ಗ್ರಾಮ ಪಂಚಾಯತ್‌ ಅಧ್ಯಕ್ಷ ರಾಮ ಮೇನಾಲ ವಂದಿಸಿದರು.

Advertisement

ನಂಬರ್‌ ವನ್‌ ಶಾಸಕರು
ಶಾಸಕರ 4 ವರ್ಷದ ಸಾಧನೆಗಳನ್ನು ದಾಖಲೆ ಸಹಿತ ಕೈಪಿಡಿಯ ಮೂಲಕ ಜನರಿಗೆ ತಲುಪಿಸುವ ಕೆಲಸ ಯುವ ಕಾಂಗ್ರೆಸ್‌ ಕಾರ್ಯಕರ್ತರಿಂದ ನಡೆಯಲಿದೆ. ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸುಮಾರು 500 ಕೋಟಿ ಆನುದಾನ ನೀಡುವ ಮೂಲಕ ರಾಜ್ಯದ ನಂಬರ್‌ ವನ್‌ ಶಾಸಕರಾಗಿದ್ದಾರೆ. ಅವರು ಸಚಿವರಾಗಬೇಕು ಎಂಬುದು ನಮ್ಮ ಆಶಯ ಎಂದು ಪುತ್ತೂರು ಯುವ ಕಾಂಗ್ರೆಸ್‌ ಅಧ್ಯಕ್ಷ ಅರ್ಷದ್‌ ದರ್ಬೆ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next