Advertisement

ಅನೇಕ ಯುವಕರನ್ನುಬೆಳೆಸಿದ ಸಮಾಧಾನವಿದೆ

06:45 AM Apr 02, 2018 | |

ಓರ್ವ ಸಾಮಾನ್ಯ ಕಾರ್ಯಕರ್ತ ಮತ್ತು ಅತ್ಯುನ್ನತ ನಾಯಕ – ಈ ಎರಡೂ ಕೆಲಸಗಳನ್ನು ಏಕಕಾಲದಲ್ಲಿ ನಿಭಾಯಿಸುವ ವಿಶಿಷ್ಟ ಸಾಮರ್ಥ್ಯದ ಬಿಜೆಪಿಯ ಹಿರಿಯ ಮುಖಂಡ (ಕಾರ್ಯಕರ್ತ) ಎಂ. ಸೋಮಶೇಖರ ಭಟ್‌. ಕಾರ್ಯಕರ್ತರೊಂದಿಗೆ ಬೆರೆಯುವ ಜತೆ ಜತೆಗೆ ಉನ್ನತ ಮಟ್ಟದ ನಿರ್ಣಯ ತೆಗೆದುಕೊಳ್ಳುವ ನಾಯಕರೊಂದಿಗೂ ವೇದಿಕೆ ಹಂಚಿಕೊಳ್ಳುವ ಭಟ್‌ ಅವರು ಕೆಳಗಿನಿಂದ ಮೇಲಿನವರೆಗೂ “ಸೋಮಣ್ಣ’. 1968ರಲ್ಲಿ ಇಡೀ ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಎಂಬಂತೆ ಉಡುಪಿ ಪುರಸಭೆಯಲ್ಲಿ ಜನಸಂಘ ಅಧಿಕಾರಕ್ಕೆ ಬಂದಾಗ ಸದಸ್ಯರಾಗಿ ಆಯ್ಕೆಯಾದವರು. ಬಳಿಕ ಅಧ್ಯಕ್ಷರೂ ಆದರು. ಆಗ ದಿಲ್ಲಿ ಮಹಾನಗರಪಾಲಿಕೆ ಮಾತ್ರ ಜನಸಂಘದ ಆಡಳಿತದಲ್ಲಿತ್ತು. 1984ರಲ್ಲಿ ಕರಂಬಳ್ಳಿ ಸಂಜೀವ ಶೆಟ್ಟಿ ಲೋಕಸಭೆ ಮತ್ತು ಸೋಮಶೇಖರ ಭಟ್‌ ಅವರು ವಿಧಾನಸಭೆಗೆ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಆಗಲೇ ಬಿಜೆಪಿ ಠೇವಣಿ ಉಳಿಸಿಕೊ ಳ್ಳುವಂತಹ ಸಾಧನೆಯನ್ನು ಈ ಇಬ್ಬರೂ ದಾಖಲಿಸಿದ್ದರು. 

Advertisement

ಆಗ ಮತ್ತು ಈಗಿನ ಪಕ್ಷ ನಿಷ್ಠೆ ಹೇಗಿದೆ?
       ಪಕ್ಷನಿಷ್ಠೆಯ ತೀವ್ರತೆ ಸ್ವಲ್ಪ ಕಡಿಮೆಯಾಗುತ್ತಿದೆ ಎಂದೆನಿ ಸುತ್ತದೆ. ಆದರೆ ಬೇರೆ ಪಕ್ಷಗಳಿಗೆ ಹೋಲಿಸಿದರೆ ಬಿಜೆಪಿಯಲ್ಲಿ ಪಕ್ಷ ನಿಷ್ಠೆ ಹೆಚ್ಚು. ಇಂದಿಗೂ ಅಂತಹ ಕಾರ್ಯಕರ್ತರ ದೊಡ್ಡ ಪಡೆ ನಮ್ಮೊಂದಿಗಿದೆ. ಅವರು ನಮ್ಮ ಸೊತ್ತು.

ಈ ಬಾರಿ ಬಿಜೆಪಿ ಗೆಲುವು ಖಾತರಿಯೇ?
      ಹೌದು. ಕಳೆದ ಬಾರಿ ನಮ್ಮದೇ ತಪ್ಪುಗಳಿಂದ ಸೋಲ ಬೇಕಾಯಿತು. ಈ ಬಾರಿ ಕಾಂಗ್ರೆಸ್‌ ಮುಕ್ತ ಭಾರತವಾಗುತ್ತಿದೆ. ಕರ್ನಾಟಕದಲ್ಲಿಯೂ ಬಿಜೆಪಿ ಜಯ ಸಾಧಿಸುತ್ತದೆ. ಜಿಲ್ಲೆಯ ಎಲ್ಲ 5 ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸುವ ವಿಶ್ವಾಸವಿದೆ.

ನೀವು ಸಕ್ರಿಯ ರಾಜಕಾರಣದಲ್ಲಿದ್ದೀರಾ?
      ನಾನು ಚುನಾವಣೆಗೆ ನಿಲ್ಲುವುದಿಲ್ಲ ಎಂದು 1980ರ ದಶಕದಲ್ಲೇ ಘೋಷಿಸಿದ್ದೇನೆ. ಅನಂತರ ಅನೇಕ ಮಂದಿ ಯುವಕರನ್ನು ಬೆಳೆಸಿದ ಸಮಾಧಾನ ನನಗಿದೆ. ಈಗಲೂ ಅದೇ ರೀತಿಯ ಕೆಲಸದಲ್ಲಿ ತೊಡಗಿಕೊಂಡಿದ್ದೇನೆ. ಮೋದಿ ಅವರ ಉತ್ತಮ ಆಡಳಿತ, ಅವರನ್ನು ಬೆಂಬಲಿಸುತ್ತಿರುವ ಹಿರಿಯ – ಕಿರಿಯರನ್ನು ನೋಡುವಾಗ ಖುಷಿಯಾಗುತ್ತಿದೆ.

ಉಡುಪಿಯ ಪ್ರಸ್ತುತ ಸ್ಥಿತಿ ಹೇಗಿದೆ?
      ಹೇಳಿಕೊಳ್ಳುವಂತಹ ಅಭಿವೃದ್ಧಿ ಕೆಲಸಗಳಾಗಿಲ್ಲ. ಶಿಲಾನ್ಯಾಸ ನಡೆದ ಮಾತ್ರಕ್ಕೆ ಅಭಿವೃದ್ಧಿ ಎಂದಲ್ಲ. ಪ್ರಮೋದ್‌ ಬಿಜೆಪಿ ಸೇರ್ಪಡೆ ಕುರಿತು ನನಗೆ ಹೊಸದಿಲ್ಲಿಯ ಬಿಜೆಪಿ ಮುಖಂಡರಿಂದ ಕರೆ ಬಂದಾಗ ನಾನು ಸಮ್ಮತಿಸಿಲ್ಲ. 

Advertisement

ಯುವಕರಿಗೆ ಸಂದೇಶ…
      ಯುವಕರು ರಾಜಕೀಯವಾಗಿಯೂ ಬೆಳೆಯಬೇಕು. ಗ್ರಾ.ಪಂ., ತಾ.ಪಂ. ನಗರಸಭೆ ಮೊದಲಾದ ಸ್ಥಳೀಯ ಸಂಸ್ಥೆಗಳಲ್ಲೂ ಅಧಿಕಾರ ನಡೆಸಿ ಅನುಭವ ಪಡೆಯುವಂತಾಗಬೇಕು. ಬಿಜೆಪಿಯಲ್ಲಿ ಈ ಬಾರಿಯೂ 40ರಿಂದ 50 ವರ್ಷ ವಯಸ್ಸಿನವರು ಹೆಚ್ಚಿನ ಸಂಖ್ಯೆಯಲ್ಲಿ ಅವಕಾಶ ಪಡೆಯುವ ವಿಶ್ವಾಸವಿದೆ.

– ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next