Advertisement
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆತನ ನಿಜವಾದ ಹೆಸರು ರಾಮಪ್ಪ ಲಕ್ಕಪ್ಪ ಜಾರಕಿಹೊಳಿ. ಶಾಲಾ ದಾಖಲಾತಿ ಪ್ರಕಾರ ರಾಮಪ್ಪಲಕ್ಕಪ್ಪ ಜಾರಕಿಹೊಳಿ ಎಂದಿದೆ. ಆದರೆ, ಹೆಸರು ಬದಲಾವಣೆ ಬಗ್ಗೆ ರಮೇಶ್ ಜಾರಕಿಹೊಳಿ ಎಲ್ಲಿಯೂ ಉಲ್ಲೇಖಿಸಿಲ್ಲ. ಹೆಸರು ಬದಲಾವಣೆ ಬಗ್ಗೆ ಸೂಕ್ತ ದಾಖಲೆ ನೀಡಿಲ್ಲ. ಇದು ಇವರು ಮಾಡಿರುವ ಬಹುದೊಡ್ಡ ಮೋಸ. ನ್ಯಾಯಾಲಯದಲ್ಲಿ ಹೆಸರು ಬದಲಾವಣೆ ಮಾಡಿಕೊಳ್ಳದೆ ತಾನೇ ತಿದ್ದಿಕೊಂಡಿದ್ದಾರೆ ಎಂದು ದೂರಿದರು.
ವಿವಿಧ ಬ್ಯಾಂಕ್‌ಗಳಲ್ಲಿ 850 ಕೋಟಿ ರೂ. ಸಾಲ ಮಾಡಿ ತನ್ನ ಸಂಸ್ಥೆಯನ್ನು ದಿವಾಳಿ ಎಂದು ಘೋಷಿಸಿಕೊಂಡಿದ್ದಾರೆ. ಆದರೆ, ಸದಾಶಿವನಗರದಲ್ಲಿರುವ ಕೋಟ್ಯಂತರ ರೂ. ಬೆಲೆಬಾಳುವ ಮನೆ ಯಾರದ್ದು? ಜಲಸಂಪನ್ಮೂಲ ಸಚಿವನಾಗಿದ್ದಾಗ ಗುತ್ತಿಗೆದಾರನಿಗೆ ಟೆಂಡರ್ ನೀಡಲು ಮುಂಬಯಿಯಲ್ಲಿ 100 ಕೋಟಿ ರೂ. ಬೆಲೆಯ ನಿವೇಶನ ಪಡೆದುಕೊಂಡಿದ್ದಾರೆ. ನಿವೇಶನ ನೀಡಿದ ಗುತ್ತಿಗೆದಾರ ಯಾರು? ಖಾನಾಪುರದಲ್ಲಿ 500 ಎಕರೆ ಜಾಗ ಬೇನಾಮಿ ಹೆಸರಲ್ಲಿದೆ. ಗೋಕಾಕ್‌ನಲ್ಲಿ 30 ಕೋಟಿ ರೂ. ವೆಚ್ಚದಲ್ಲಿ ಮನೆ ಕಟ್ಟುತ್ತಿದ್ದಾರೆ. ಕೆಲವು ದಿನಗಳ ಹಿಂದೆ 4 ಕೋಟಿ ರೂ. ಬೆಲೆಬಾಳುವ ಕಾರು ಕೊಂಡುಕೊಂಡಿದ್ದಾರೆ. ದಿವಾಳಿಯಾಗಿರುವ ವ್ಯಕ್ತಿಯ ಬಳಿ ಇಷ್ಟೆಲ್ಲಾ ಆಸ್ತಿ ಇರಲು ಹೇಗೆ ಸಾಧ್ಯ? ಹೀಗಾಗಿ ಡಿ.ಕೆ. ಶಿವಕುಮಾರ್ ಹಾಗೂ ರಮೇಶ್ ಜಾರಕಿಹೊಳಿ ಬಳಿ ಇರುವ ಬೇನಾಮಿ ಆಸ್ತಿಯ ಕುರಿತು ತನಿಖೆ ಮಾಡಿಸಲಿ. ನಾನು ಡಿಕೆ ಶಿವಕುಮಾರ್ ಅವರನ್ನು ಒಪ್ಪಿಸುತ್ತೇನೆ. ರಮೇಶ್ ಜಾರಕಿಹೊಳಿ ಸಿದ್ಧರಿದ್ದಾರೆಯೇ ಎಂದು ಸವಾಲು ಹಾಕಿದರು.