Advertisement

M Chinnaswamy Stadium; ಶಾಂತಾ ಹೆಸರಿಡಲು ಸಮಸ್ಯೆಯೇನಿದೆ? ಕೆಎಸ್‌ಸಿಎ ತಾರತಮ್ಯವೇಕೆ?

04:03 PM Dec 26, 2024 | Team Udayavani |

ಬೆಂಗಳೂರು: ಚಿನ್ನಸ್ವಾಮಿ ಮೈದಾನದಲ್ಲಿ ಮೊದಲ ಟೆಸ್ಟ್‌ ಪಂದ್ಯ ನಡೆದು 50 ವರ್ಷಗಳಾದ ಸಂಭ್ರಮದಲ್ಲಿ ಸ್ಟಾಂಡೊಂದಕ್ಕೆ ಶಾಂತಾ ರಂಗಸ್ವಾಮಿ ಹೆಸರಿಡಬೇಕೆಂಬ ಆಗ್ರಹ ಇನ್ನೂ ತೀವ್ರವಾಗಿದೆ.

Advertisement

ಇತ್ತೀಚೆಗಷ್ಟೇ ಮಾಧ್ಯಮ ಗಳಿಗೆ ಪತ್ರ ಬರೆದಿದ್ದ ರಾಜ್ಯದ ಮಾಜಿ ಆಟ ಗಾರ್ತಿಯರು ಮತ್ತೆ ಬಿಗು ನಿಲುವು ತಾಳಿದ್ದು, ಕೆಎಸ್‌ ಸಿಎ ಯಾಕೆ ಮಹಿಳಾ ಆಟಗಾರ್ತಿಯರನ್ನು ತಾರತಮ್ಯದ ದೃಷ್ಟಿಯಲ್ಲಿ ನೋಡುತ್ತಿದೆ ಎಂದು ಪ್ರಶ್ನಿಸಿದ್ದಾರೆ.

ಪುರುಷ ಆಟಗಾರರ ಹೆಸರನ್ನು ಚಿನ್ನಸ್ವಾಮಿ ಮೈದಾನಕ್ಕೆ ಇಡುವುದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ ಎಂಸಿಸಿ, ಬಿಸಿಸಿಐನಿಂದಲೇ ಗೌರವಿಸಲ್ಪಟ್ಟಿರುವ, ಭಾರತ ತಂಡದ ನಾಯಕಿಯೂ ಆಗಿದ್ದ, ಅರ್ಜುನ ಪ್ರಶಸ್ತಿ ಪಡೆದ ರಾಜ್ಯದ ಮೊದಲ ಕ್ರಿಕೆಟ್‌ ಆಟಗಾರ್ತಿಯಾಗಿರುವ ಶಾಂತಾ ರಂಗಸ್ವಾಮಿಗೆ ಏಕೆ ಗೌರವವಿಲ್ಲ? ಮಹಿಳಾ ಆಟಗಾರ್ತಿಯರ ಬಗ್ಗೆ ಇಂತಹ ಪೂರ್ವಗ್ರಹವೇಕೆ? ಎಂದು ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಟಗಾರ್ತಿ ವಿ.ಕಲ್ಪನಾ ಪ್ರಶ್ನಿಸಿದ್ದಾರೆ.

ಕೆಎಸ್‌ಸಿಎ ತನ್ನ ಹಠವನ್ನು ಹೀಗೆಯೇ ಮುಂದುವರಿಸಿದರೆ, ಸದ್ಯದಲ್ಲೇ ಪತ್ರಿಕಾಗೋಷ್ಠಿ ಕರೆಯುವುದಾಗಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next