Advertisement

ಸಾಹಿತಿಗಳು ಸರ್ವಜ್ಞರೆಂಬುದು ಸುಳ್ಳು 

12:41 PM May 22, 2017 | |

ಬೆಂಗಳೂರು: ಸಾಹಿತಿಗಳು ಸರ್ವಜ್ಞರಲ್ಲ ಅವರು ತಾವು ಸ್ವಯಂ ಧೀಮಂತ ಎಂದು ತಿಳಿದುಕೊಳ್ಳುವುದು ಬೋಗಸ್‌ ಕಲ್ಪನೆ. ಪ್ರತಿಯೊಂದಕ್ಕೂ ಸಲಹೆ ಕೊಡುವವರು ನಾವೇ ಎನ್ನುವ ಕಲ್ಪನೆಯೂ ತಪ್ಪು ಎಂದು ಕಥೆಗಾರ ಎಸ್‌.ದಿವಾಕರ ಅಭಿಪ್ರಾಯಪಟ್ಟರು.

Advertisement

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕನ್ನಡ ಭವನದ ನಯನ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ “ಮನೆಯಂಗಳದಲ್ಲಿ ಮಾತುಕತೆ’ ಕಾರ್ಯಕ್ರಮದ ಅತಿಥಿಯಾಗಿ ಮಾತನಾಡಿದ ಅವರು, “ಹಿಂದೆ ಲೇಖಕರು ಸರ್ಕಾರಕ್ಕೆ ಹತ್ತಿರವಾಗಿರಲಿಲ್ಲ. ಈಗ ಪರಿಸ್ಥಿತಿ ಭಿನ್ನವಾಗಿದೆ.

ಸಾಹಿತಿ, ಲೇಖಕರು ಸರ್ಕಾರಗಳ ಜತೆಗೆ ಸಂಬಂಧವಿಟ್ಟುಕೊಂಡರೆ ಬಹಳಷ್ಟು ಸಮಸ್ಯೆಗಳು ಉದ್ಭವಿಸುತ್ತವೆ. ಸಾಹಿತಿಯು ಸ್ವತಂತ್ರವಾಗಿ ತನ್ನ ಅಭಿಪ್ರಾಯವನ್ನು, ಕಲ್ಪನೆಯನ್ನು ವ್ಯಕ್ತಪಡಿಸುವ ಹಕ್ಕುಳ್ಳವನು. ಆತನಿಗೂ ಸಾಮಾಜಿಕ ಜವಾಬ್ದಾರಿ ಇರುತ್ತದೆ. ನಿಜ, ಹಾಗೆಂದ ಮಾತ್ರಕ್ಕೆ ಪ್ರತಿಯೊಂದಕ್ಕೂ ಸಲಹೆ ಕೊಡಲು ಹೋಗುವುದು ಸರಿಯಲ್ಲ. ಸಾಹಿತ್ಯ ಕ್ಷೇತ್ರದಲ್ಲಿ ಎಡ-ಬಲ ಪಂಥಗಳ ನಡುವೆ ಮಧ್ಯಮ ಮಾರ್ಗದ ಗುಂಪು ಉದ್ಭವಿಸುವ ಅಗತ್ಯತೆ ಇದೆ,’ಎಂದರು.

ಹಿರಿಯ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಹತ್ಯೆಗೆ ಸಹಿಷ್ಣುತೆ-ಅಸಹಿಷ್ಣುತೆ ಕಾರಣವೋ ಗೊತ್ತಿಲ್ಲ. ಅಭಿವ್ಯಕ್ತಿ ಸ್ವಾತಂತ್ರÂ ಇರಲೇಬೇಕು. ಅದು ಕ್ಷೀಣಿಸಿದಾಗ ಹತ್ಯೆ ಯಂತಹ ಘಟನೆಗಳು ನಡೆಯುತ್ತವೆ. ಕೆಲ ವೊಂದು ನಿಜ ಸಂಗತಿಗಳನ್ನು ಒಪ್ಪಿಕೊಳ್ಳುವಂತಹ ಮನಸ್ಥಿತಿಗಳ ಸಂಖ್ಯೆ ಕಡಿಮೆಯಾಗುತ್ತಿದೆ.

ಜತೆಗೆ ಸೂಕ್ಷ್ಮ ಪ್ರಭಾವ ಬೀರುವ ಚಳವಳಿಗಳು ಕ್ಷೀಣಿಸುತ್ತಿರುವುದು ವಿಷಾದನೀಯ. ಪ್ರಸ್ತುತ ದಿನಗಳಲ್ಲಿ ಹೋರಾಟಗಳು ಹೊಸ ರೂಪವನ್ನು ಪಡೆದುಕೊಳ್ಳಬೇಕಿದೆ. ಸಾಮಾಜಿಕ, ರಾಜಕೀಯ, ಆರ್ಥಿಕ ಪ್ರಗತಿಗೆ ಅದು ಅನಿವಾರ್ಯ ಎಂದು ಹೇಳಿದರು. ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕಿ ಎಂ.ಎಸ್‌. ಅರ್ಚನಾ ಮತ್ತಿತರರು ಕಾರ್ಯಕ್ರಮದಲ್ಲಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next