Advertisement
ಸಾಧನೆ ಮಾಡಬೇಕೆಂಬ ಹಸಿವಿರುವ ವ್ಯಕ್ತಿ ತನ್ನ ಸಾಧನೆಗೆ ಅವಕಾಶಗಳಿಗಾಗಿ, ವಯಸ್ಸಿಗಾಗಿ ಕಾಯುವ ಆವಶ್ಯಕತೆ ಇಲ್ಲ. ಯಾಕೆಂದರೆ ಸಾಧನೆಗೆ ಇದಾವುದು ಮುಖ್ಯವಲ್ಲ.
Related Articles
Advertisement
ಅಷ್ಟಕ್ಕೂ ಈತ ಪಡೆದಿರುವದು ಸಾಮಾನ್ಯ ಪ್ರಶಸ್ತಿ ಅಲ್ಲ ಈ ಪ್ರಶಸ್ತಿ ಮೊತ್ತ 1 ಮಿ. ಯುಎಸ್ ಡಾಲರ್ (7,46,79,450 ಭಾರತೀಯ ರೂ. ಗಳಲ್ಲಿ).
ಶೋ ಪ್ರವೇಶಿಸಿದಾಗ ನೀನು ಯಾವ ನಿರೀಕ್ಷ ಇಟ್ಟುಕೊಂಡು ಬಂದಿರುವೆ ಎಂಬ ತೀಪುಗಾರರರ ಮಾತಿಗೆ ಲಿಡಿಯನ್ ಉತ್ತರ ಹೀಗಿತ್ತು. ನಾನು ಇಲ್ಲಿಗೆ ಬರುವ ಮುನ್ನ ಫ್ಲೈಟ್ ಆಪ್ ಬಂಬಲ್ಬೀ ಅಭ್ಯಸಿಸಿದ್ದೇನೆ ಎಂದಿದ್ದ. ಅಸ್ತವ್ಯಸ್ಥವಾದ ಮತ್ತು ವೇಗವಾಗಿ ಬದಲಾಗುವ ರಾಗ ಸಂಯೋಜನೆ ಅತ್ಯಂತ ಕಠಿನವಾದದ್ದು ಎಂದು ಬಂಬಲ್ಬೀ ಸಯೋಜನೆಕ ರಿಮಿಸ್ಕ್ ಕೊರ್ಸ್‌ಕೋವ್ ಅವರೇ ಒಮ್ಮೆ ಹೇಳಿಕೊಂಡಿದ್ದರು.
ಮೊದಲ ಸುತ್ತಿನಲ್ಲಿ ಬಂಬಲ್ಬೀ ಸಂಯೋಜನೆಯನ್ನು 160, 280 ಮತ್ತು 325 ಬಿಪಿಎಂ ಎಂಬ ಮೂರೂ ವೇಗದಲ್ಲೂ ನುಡಿಸಿ ಪ್ರೇಕ್ಷಕರೂ ಮತ್ತು ತೀರ್ಪುಗಾರರಾದ ಫೇತ್ ಹಿಲ್, ರುಪಾಲ್ ಚಾಲ್ಸ್ ಮತ್ತು ಡ್ರೂ ಬ್ಯಾರಿರ್ಮರ್ ಅವರಲ್ಲಿ ದಿಗ್ಭ್ರಮೆ ಮೂಡಿಸಿದ್ದ.
ಶೋದಲ್ಲಿ ನಡೆದ ಸ್ಪರ್ಧೆಯಲ್ಲಿ ಲಿಡಿಯನ್ ತನ್ನ ಪ್ರತಿಸ್ಪರ್ಧ ದ.ಕೊರಿಯದ ʼಪ್ಲೆ„ಯಿಂಗ್ ಟೆಕ್ವಂಡೋ ಮಾಸ್ಟರ್’ ಕುಕ್ಕಿವೊನ್ ಅವರನ್ನು ಹಿಂದಿಕ್ಕೆ, 84 ಪಾಂಯಿಂಟ್ಸ್ ಪಡೆದು ಪ್ರಶಸ್ತಿ ಎತ್ತಿ ಹಿಡಿದಿದ್ದಾರೆ. ಈ ಮೂಲಕ ಜಗತ್ತಿನೆದುರು ಭಾರತದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದಿದ್ದಾರೆ. ಬ್ಯಾಟಲ್ ರೌಂಡ್ ಎಂದೇ ಕರೆಯುವ ಎರಡನೇ ಸುತ್ತಿನಲ್ಲಿ ಲಿಡಿಯನ್ “ಟರ್ಕಿಶ್ ಮಾರ್ಚ್’ ನುಡಿಸಿ ತನ್ನ ಅಸಾಧಾರಣ ಪ್ರತಿಭೆಯ ಮೂಲಕ ನೆರದಿದ್ದವರನ್ನು ಬೆಕ್ಕಸ ಬೆರಗಾಗಿಸಿದ್ದ.
ಲಿಡಿಯನ್ ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಅವರ ಕೆ.ಎಮ್. ಮ್ಯೂಸಿಕ್ ಕನ್ಸರ್‌ವೆಂಟ್ರಿಯಲ್ಲಿ ಪೂರ್ಣ ಪ್ರಮಾಣದ ಸ್ಕಾಲರ್‌ಶಿಪ್‌ನೊಂದಿಗೆ ಸಂಗೀತಾಭ್ಯಾಸ ನಡೆಸುತ್ತಿದ್ದಾನೆ. ಈ ಸಾಧನೆ ಬಗ್ಗೆ ತಿಳಿದ ಎ.ಆರ್. ರೆಹಮಾನ್ ಅವರು ಚೆನ್ನೈಯ ಸಾಲಿಗ್ರಾಮಂನಲ್ಲಿರುವ ಲಿಡಿಯನ್ ಮನೆಗೆ ಭೇಟಿ ನೀಡಿ ಅಭಿನಂದಿಸಿದ್ದಾರೆ.
ಲಿಡಿಯನ್ ತಂದೆ ಸ್ವತಃ ಸಂಗೀತಗಾರರಾಗಿದ್ದು ಮಗನ ಈ ಸಾಧನೆಗೆ ಬೆನ್ನುಲುಬಾಗಿದ್ದಾರೆ. ಹೆಚ್ಚಿನ ಸಮಯವನ್ನು ಯೂಟ್ಯೂಬ್‌ನಲ್ಲಿ ಸಂಗೀತ ಕೇಳುವುದಕ್ಕೆ ಮೀಸಲಿಡುವ ಈತನಿಗೆ ಟಿವಿ ವೀಕ್ಷಣೆಗಿಂತ ಯೂಟ್ಯೂಬ್‌ನಲ್ಲಿ ಹಾಲಿವುಡ್ ಚಿತ್ರಗಳ ವೀಕ್ಷಣೆಯೇ ಹೆಚ್ಚು ಇಷ್ಟವಂತೆ. ಆಗಾಗ ಹೊಸ ಬಗೆಯ ಸಂಗೀತ ಸಂಯೋಜನೆಯ ಪ್ರಯೋಗಕ್ಕೆ ತನ್ನು ಒಡ್ಡಿಕೊಳ್ಳುತ್ತಾನೆ. ಇತ್ತೀಚೆಗೆ ಹಾಲಿವುಡ್ ಚಿತ್ರವೊಂದನ್ನು ವೀಕ್ಷೀಸುವಾಗ ಅದರ ಸೌಂಡ್ ಮ್ಯೂಟ್ ಮಾಡಿ ನನ್ನದೇ ಸ್ವಂತ ಸಂಯೋಜನೆ ನೀಡಿದೆ. ತುಂಬ ಮಜವಾಗಿತ್ತು ಎಂದು ಲಿಡಿಯನ್ ಹೇಳಿಕೊಂಡಿದ್ದ.
ಸದ್ಯ ಸೌಂಡ್ ಮಿಕ್ಸಿಂಗ್, ತನ್ನದೇ ಸಂತ ಆಲ್ಬಂವೊಂದನ್ನು ಬಿಡುಗಡೆ ಮಾಡುವ ತಯಾರಿಯಲ್ಲಿ ತೊಡಗಿದ್ದಾನೆ. ಅಲ್ಲದೇ ಹಾಲಿವುಡ್‌ನಲ್ಲಿ ಸಂಗೀತ ಸಂಯೋಜಕನಾಗುವ ತನ್ನ ಕನಸನ್ನು ಸಾಕಾರಗೊಳಿಸುವತ್ತ ಹೆಜ್ಜೆ ಹಾಕುತ್ತಿದ್ದಾನೆ.
ಶಿವಾನಂದ ಎಚ್.