Advertisement

ಬಂಗಾಲದಲ್ಲಿ ಬಾಳೆಲೆ ಊಟ ಸವಿದ ಅಮಿತ್‌ ಶಾ

11:53 AM Apr 26, 2017 | Karthik A |

ಸಿಲಿಗುರಿ: ಪಶ್ಚಿಮ ಬಂಗಾಲದಲ್ಲಿ ಬಿಜೆಪಿ ಬಲಪಡಿಸುವ ನಿಟ್ಟಿನಲ್ಲಿ ಅಧ್ಯಕ್ಷ ಅಮಿತ್‌ ಶಾ ಕಾರ್ಯನಿರತರಾಗಿದ್ದಾರೆ. ಅದಕ್ಕೆ ಪೂರಕವಾಗಿ ಸಿಲಿಗುರಿಯಲ್ಲಿರುವ ದಿನಗೂಲಿ ನೌಕರನೊಬ್ಬನ ಮನೆಯಲ್ಲಿ ಬಾಳೆ ಎಲೆಯಲ್ಲಿ ಸಾಂಪ್ರದಾಯಿಕ ಬಂಗಾಲಿ ಸಸ್ಯಾಹಾರದ ಊಟ ಸೇವಿಸಿದ್ದಾರೆ. ಮನೆಯಲ್ಲಿ ಹಾಸಿದ ಚಾಪೆಯ ಮೇಲೆ ಕುಳಿತು, ಕುಟುಂಬ ಸದಸ್ಯರು, ಪಕ್ಷದ ನಾಯಕರೊಂದಿಗೆ ಊಟ ಮಾಡಿದರು. ಬಂಗಾಲದಲ್ಲಿ ಮೀನಿನ ಖಾದ್ಯ ಜನಪ್ರಿಯವಾಗಿದ್ದರೂ ಮನೆಯೊಡತಿ ಗೀತಾ ಮಹಾಲಿ, ಅಮಿತ್‌ ಶಾರಿಗೆ, ಸಾಧಾರಣ ದಾಲ್‌ ಮತ್ತು ಅನ್ನ, ಪಾಪಡ್‌ ಒಳಗೊಂಡ ಸಾಧಾರಣ ಸಸ್ಯಾಹಾರ ಉಣಬಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next