ಮಾಸ್ಕೋ : ರೋಬೋಟ್ ಲ್ಯಾಂಡರ್ ಲೂನಾ -25 ಬಾಹ್ಯಾಕಾಶ ನೌಕೆಯು ಅನಿಯಂತ್ರಿತ ಕಕ್ಷೆಗೆ ತಿರುಗಿದ ನಂತರ ಚಂದ್ರನಿಗೆ ಅಪ್ಪಳಿಸಿತು ಎಂದು ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೋಸ್ಮಾಸ್ ಭಾನುವಾರ ವರದಿ ಮಾಡಿದೆ.ಈ ವಿದ್ಯಮಾನ ಸುಮಾರು ಅರ್ಧ ಶತಮಾನದಲ್ಲಿ ರಷ್ಯಾದ ಮೊದಲ ಚಂದ್ರನ ಕಾರ್ಯಾಚರಣೆಗೆ ನಿರಾಶಾದಾಯಕ ಫಲಿತಾಂಶ ನೀಡಿದೆ.
“ನೌಕೆಯು ಅನಿರೀಕ್ಷಿತ ಕಕ್ಷೆಗೆ ಸ್ಥಳಾಂತರಗೊಂಡು ಚಂದ್ರನ ಮೇಲ್ಮೈಯೊಂದಿಗೆ ಘರ್ಷಣೆಯಾಗಿದ್ದು ಈಗ ಅಸ್ತಿತ್ವದಲ್ಲಿಲ್ಲ” ಎಂದು ಏಜೆನ್ಸಿಯ ಹೇಳಿಕೆ ಬಿಡುಗಡೆ ಮಾಡಿದೆ. ವಿಶೇಷವಾಗಿ ರಚಿಸಲಾದ ಅಂತರ ವಿಭಾಗೀಯ ಆಯೋಗವು ವೈಫಲಕ್ಕೆ ಕಾರಣಗಳನ್ನು ತಿಳಿಯುವಲ್ಲಿ ವ್ಯವಹರಿಸುತ್ತದೆ ”ಎಂದು ಸೇರಿಸಲಾಗಿದೆ.
ಇದನ್ನೂ ಓದಿ: Chandrayaan-3: ಕೊನೆಯ ಹಂತದ ಡಿಬೂಸ್ಟಿಂಗ್ ಯಶಸ್ವಿ, ಎಲ್ಲರ ಚಿತ್ತ 23ರ ಲ್ಯಾಂಡಿಂಗ್ ನತ್ತ
ಈ ಹಠಾತ್ ಮತ್ತು ಅನಿರೀಕ್ಷಿತ ವೈಫಲ್ಯವು ರಷ್ಯಾದ ಬಾಹ್ಯಾಕಾಶ ಪರಿಶೋಧನೆಯ ಮಹತ್ವಾಕಾಂಕ್ಷೆಗಳಿಗೆ ಗಮನಾರ್ಹ ಹಿನ್ನಡೆಯಾಗಿದೆ. ವಿಶ್ವಾದ್ಯಂತ ವೈಜ್ಞಾನಿಕ ಮತ್ತು ಬಾಹ್ಯಾಕಾಶ ಸಂಶೋಧಕರನ್ನು ಆಘಾತಕ್ಕೀಡು ಮಾಡಿದೆ.
ಭಾರತದ ಚಂದ್ರಯಾನ-3 ನೌಕೆ ನಭಕ್ಕೆ ಚಿಮ್ಮಿದ (ಜುಲೈ 14) ಒಂದು ತಿಂಗಳ ಬಳಿಕ ಲೂನಾ 25ರ ಉಡಾವಣೆ ಆಗಸ್ಟ್ 11ರಂದು ಆಗಿತ್ತು.