Advertisement

Lok Sabha ಕರಾವಳಿ ಜಲಕೃಷಿ ಪ್ರಾಧಿಕಾರ ಮಸೂದೆ ಅಂಗೀಕಾರ

01:17 AM Aug 08, 2023 | Team Udayavani |

ಹೊಸದಿಲ್ಲಿ: ಲೋಕಸಭೆಯಲ್ಲಿ ಸೋಮವಾರ ಕರಾವಳಿ ಜಲಕೃಷಿ ಪ್ರಾಧಿಕಾರ (ತಿದ್ದು ಪಡಿ) ಮಸೂದೆ-2023ನ್ನು ಧ್ವನಿ ಮತದ ಮೂಲಕ ಅಂಗೀ ಕರಿಸಲಾಯಿತು.

Advertisement

ಈ ಕುರಿತು ಮಾಹಿತಿ ನೀಡಿದ ಕೇಂದ್ರ ಮೀನುಗಾರಿಕೆ ಸಚಿವ ಪರಷೋತ್ತಮ್‌ ಕೆ. ರೂಪಾಲ, “ಈ ಮಸೂದೆಯನ್ನು ದೇಶಾದ್ಯಂತ ಇರುವ ಮೀನುಗಾರರು ಸ್ವಾಗತಿಸಲಿದ್ದಾರೆ.

ಇದರಿಂದ ಅವರ ಪರವಾಗಿ ದೇಶವಿದೆ ಎಂಬ ಸಂದೇಶ ರವಾನೆ ಯಾಗಲಿದೆ’ ಎಂದು ಹೇಳಿದರು. ಈ ಮಸೂದೆಯನ್ನು ಎ. 5ರಂದು ಲೋಕಸಭೆ ಯಲ್ಲಿ ಮಂಡಿಸಲಾಗಿತ್ತು.

ಮಸೂದೆಯ ಪ್ರಮುಖ ಅಂಶಗಳು
-ಕರಾವಳಿ ಜಲಕೃಷಿ ಚಟುವಟಿಕೆಗಳ ಸಂದರ್ಭದಲ್ಲಿ ಪರಿಸರಕ್ಕೆ ಸಂಬಂಧಿಸಿ ಎಸಗುವ ಅಪರಾಧಗಳನ್ನು ಮಾಫಿ ಮಾಡಲಿದೆ.
-ಇದರಿಂದ ಮೀನುಗಾರಿಕೆ ಸೇರಿದಂತೆ ಜಲಕೃಷಿ ಉದ್ಯಮವು ಯಾವುದೇ ತೊಡಕಿಲ್ಲದಂತೆ ನಡೆಯಲು ಅನುವು ಮಾಡಿಕೊಡಲಿದೆ.
– ಈ ಹಿಂದೆ ಕರಾವಳಿ ಪ್ರದೇಶಗಳಲ್ಲಿ ಪರಿಸರಕ್ಕೆ ಸಂಬಂಧಿಸಿ ಕಾನೂನು ಉಲ್ಲಂಘಿ ಸಿದರೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ.ವರೆಗೆ ದಂಡ ವಿಧಿಸಲು ಅವಕಾಶವಿತ್ತು. ಇನ್ನು ಮುಂದೆ ಈ ಶಿಕ್ಷೆಯನ್ನು ರದ್ದುಪಡಿಸಲಾಗುತ್ತದೆ.
– ಈ ಮಸೂದೆಯು ಕರಾವಳಿ ಜಲಕೃಷಿ ಪ್ರಾಧಿಕಾರದ ಕಾರ್ಯ ಚಟುವಟಿಕೆಗಳನ್ನು ಸರಾಗಗೊಳಿಸಲಿದೆ. ಜತೆಗೆ ಕರಾವಳಿ ಜಲಕೃಷಿಯ ಹೊಸ ರೂಪಗಳನ್ನು ಉತ್ತೇಜಿಸಲಿದೆ.
– ಮಸೂದೆಯ ಅಡಿಯಲ್ಲಿ ಹಳೆಯ ಕಾನೂನಿಗೆ ತಿದ್ದುಪಡಿ ತರಲು ಸ್ಥಾಯಿ ಸಮಿತಿ ಸೂಚಿಸಿದ್ದ 56 ತಿದ್ದುಪಡಿಗಳ ಪೈಕಿ 45 ತಿದ್ದುಪಡಿಗಳನ್ನು ಮೀನುಗಾರಿಕೆ ಸಚಿವಾಲಯ ಅಂಗೀಕರಿಸಿದೆ.
– ಈ ಮಸೂದೆಯಿಂದ ಮೀನುಗಾರಿಕೆ ಸಮುದಾಯಕ್ಕೆ ಉಪಯೋಗವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next