Advertisement

LS Election ಹಂತ 2: ಇಂದಿನಿಂದ ನಾಮಪತ್ರ ಸಲ್ಲಿಕೆ

01:04 AM Apr 12, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ 2ನೇ ಹಂತದಲ್ಲಿ ಮೇ 7ರಂದು 14 ಕ್ಷೇತ್ರಗಳಲ್ಲಿ ಚುನಾವಣೆ ನಡೆಯ ಲಿದ್ದು, ಶುಕ್ರವಾರ ಅಧಿಸೂಚನೆ ಹೊರ ಬೀಳಲಿದೆ. ಇದರೊಂದಿಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಚಾಲನೆ ಪಡೆಯಲಿದೆ.

Advertisement

ಮೊದಲ ಹಂತದಲ್ಲಿ ಎ. 26ರಂದು ಮತದಾನ ನಡೆಯಲಿರುವ 14 ಕ್ಷೇತ್ರಗಳಲ್ಲಿ ಪ್ರಚಾರ ಕಾವೇರುತ್ತಿದೆ. ಇನ್ನುಳಿದ 14 ಕ್ಷೇತ್ರಗಳಲ್ಲಿ ಶುಕ್ರ ವಾರದಿಂದ ಪ್ರಚಾರ ವೇಗ ಪಡೆದುಕೊಳ್ಳುವ ನಿರೀಕ್ಷೆ ಇದೆ. ಜತೆಗೆ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ನಿಧನ ಹೊಂದಿದ್ದರಿಂದ ತೆರವಾಗಿರುವ ಸುರಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೂ ಶುಕ್ರವಾರ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ.

ಗುಲ್ಬರ್ಗ ಕ್ಷೇತ್ರದಿಂದ ಎಐಸಿಸಿ ಅಧ್ಯಕ್ಷ ಮಲ್ಲಿ ಕಾರ್ಜುನ ಖರ್ಗೆ ಅವರ ಅಳಿಯ ರಾಧಾ ಕೃಷ್ಣ, ಧಾರ ವಾಡ ದಿಂದ ಪ್ರಹ್ಲಾದ್‌ ಜೋಷಿ, ಬೀದರ್‌ನಿಂದ ಭಗವಂತ ಖೂಬಾ ಹಾಗೂ ಶಿವಮೊಗ್ಗದಿಂದ ಬಿ.ವೈ. ರಾಘವೇಂದ್ರ 2ನೇ ಹಂತದ ಕಣದಲ್ಲಿರುವ ಪ್ರಮುಖರು.

ಶುಕ್ರವಾರ ಖರ್ಗೆ ಅವರ ಅಳಿಯ ನಾಮಪತ್ರ ಸಲ್ಲಿಸಲಿದ್ದು, ಡಿಕೆಶಿ, ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಲಿದ್ದಾರೆ. ಉತ್ತರ ಕನ್ನಡ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಶುಕ್ರವಾರ ನಾಮಪತ್ರ ಸಲ್ಲಿಸಲಿದ್ದಾರೆ. ಗೋವಾ ಸಿಎಂ ಪ್ರಮೋದ್‌ ಸಾವಂತ್‌ ಉಪಸ್ಥಿತರಿರಲಿದ್ದಾರೆ.

2ನೇ ಹಂತದ ವೇಳಾಪಟ್ಟಿ
ಎ. 12 2ನೇ ಹಂತ ಮತದಾನಕ್ಕೆ ಅಧಿ  ಸೂಚನೆ, ನಾಮಪತ್ರ ಸಲ್ಲಿಕೆ ಆರಂಭ
ಎ. 19 ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನ
ಎ. 20 ನಾಮಪತ್ರಗಳ ಪರಿಶೀಲನೆ ನಡೆಯುವ ದಿನ
ಎ. 22 ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ಕೊನೆಯ ದಿನ
ಮೇ 7 ದ್ವಿತೀಯ ಹಂತದಲ್ಲಿ ಮತದಾನ ನಡೆಯುವ ದಿನ

Advertisement

ಹಂತ 2: ಎಲ್ಲೆಲ್ಲಿ ಮತದಾನ?
ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಗುಲ್ಬರ್ಗ, ರಾಯಚೂರು, ಬೀದರ್‌, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರಕನ್ನಡ, ದಾವಣಗೆರೆ ಮತ್ತು ಶಿವಮೊಗ್ಗ

Advertisement

Udayavani is now on Telegram. Click here to join our channel and stay updated with the latest news.

Next