Advertisement

LRA: ಚಂದ್ರನಲ್ಲಿ ಲೇಸರ್‌ ರೆಟ್ರೋರಿಫ್ಲೆಕ್ಟರ್‌ ಅರ್ರೆ (ಎಲ್‌ಆರ್‌ಎ) ಕಾರ್ಯಾರಂಭ

12:36 AM Jan 20, 2024 | Team Udayavani |

ಹೊಸದಿಲ್ಲಿ: ಚಂದ್ರಯಾನ-3 ಲ್ಯಾಂಡರ್‌ನಲ್ಲಿದ್ದ ಲೇಸರ್‌ ರೆಟ್ರೋರಿಫ್ಲೆಕ್ಟರ್‌ ಅರ್ರೆ (ಎಲ್‌ಆರ್‌ಎ) ಎಂಬ ಸಾಧನವು ಚಂದಿರನ ದಕ್ಷಿಣ ಧ್ರುವದ ಸಮೀಪ “ಲೊಕೇಶನ್‌ ಮಾರ್ಕರ್‌'(ಸ್ಥಳ ಗುರುತಿಸುವ ಸಾಧನ) ಆಗಿ ಕಾರ್ಯನಿರ್ವಹಿಸಲು ಆರಂಭಿಸಿದೆ ಎಂದು ಇಸ್ರೋ ತಿಳಿಸಿದೆ. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಲೂನಾರ್‌ ರಿಕನಯಸೆನ್ಸ್‌ ಆರ್ಬಿಟರ್‌ ಕಳೆದ ವರ್ಷದ ಡಿ.12ರಂದು ಎಲ್‌ಆರ್‌ಎಯನ್ನು ಬಳಸಿಕೊಂಡು ಸ್ಥಳವೊಂದರ ಅಳತೆ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಿದೆ.

Advertisement

ಅಂತಾರಾಷ್ಟ್ರೀಯ ಸಹಭಾಗಿತ್ವದ ಅನ್ವಯ ನಾಸಾವು ಎಲ್‌ಆರ್‌ಎ ಸಾಧನವನ್ನು ಭಾರತದ ವಿಕ್ರಂ ಲ್ಯಾಂಡರ್‌ನಲ್ಲಿ ಅಳವಡಿಸಿತ್ತು. 20 ಗ್ರಾಂ ತೂಕದ ಈ ಆಪ್ಟಿಕಲ್‌ ಸಾಧನವು ಚಂದ್ರನ ಮೇಲ್ಮೆ„ಯಲ್ಲಿ ಹಲವು ದಶಕಗಳ ಕಾಲ ಇರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next