Advertisement

ವರ್ಚಸ್ಸು ಕಡಿಮೆಯಾಗಿ ಕೈ ಕಸಿವಿಸಿ

06:33 AM Mar 16, 2019 | |

ಕ್ಷೇತ್ರದ ವಸ್ತುಸ್ಥಿತಿ: ವಿಜಯನಗರವು ಎಂಟು ಬಿಬಿಎಂಪಿ ವಾರ್ಡ್‌ಗಳಲ್ಲಿ ಏಕೈಕ ಕಾಂಗ್ರೆಸ್‌ ಸದಸ್ಯರನ್ನು ಹೊಂದಿದೆ. ಆದರೂ ವಿಧಾನಸಭೆ ಚುನಾವಣೆಯಲ್ಲಿ ಇಲ್ಲಿನ ಮತದಾರರ ಆಯ್ಕೆ ಕಾಂಗ್ರೆಸ್‌. ಸತತ ಎರಡು ಬಾರಿ ಎಂ.ಕೃಷ್ಣಪ್ಪ ಇಲ್ಲಿಂದ ಆಯ್ಕೆಯಾಗಿದ್ದಾರೆ. ಆದರೆ, ಗೆಲುವಿನ ಅಂತರ ತುಂಬಾ ಕಡಿಮೆ ಆಗಿರುವುದು ಕಾಂಗ್ರೆಸ್‌ ವರ್ಚಸ್ಸು ಕಡಿಮೆ ಆಗುತ್ತಿರುವುದಕ್ಕೆ ಸಾಕ್ಷಿ. ಅದೇ ಲೋಕಸಭೆ ವಿಚಾರಕ್ಕೆ ಬಂದರೆ, ಮತದಾರರು ಬಿಜೆಪಿ ಕೈಹಿಡಿದಿರುವುದನ್ನು ಕಾಣಬಹುದು.

Advertisement

ಲೋಕಸಭೆಗೆ ಈ ಬಾರಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿವೆ. 8 ವಾರ್ಡ್‌ಗಳ ಪೈಕಿ ಮೂರರಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಸದಸ್ಯರಿದ್ದು, ತಳಮಟ್ಟದಲ್ಲಿ ಈ ಸದಸ್ಯರು ಮತ್ತು ಕಾರ್ಯಕರ್ತರು ಕೆಲಸ ಮಾಡಿದರೆ, ಕಾಂಗ್ರೆಸ್‌ ಅಭ್ಯರ್ಥಿ ಗೆಲುವಿಗೆ ವಿಜಯನಗರ ಪ್ರಮುಖ ಕೊಡುಗೆ ನೀಡಬಹುದು ಎಂಬ ಲೆಕ್ಕಾಚಾರ ಆ ಪಕ್ಷಗಳದ್ದಾಗಿದೆ. 

ಕ್ಷೇತ್ರದಲ್ಲಿ ಬಿಜೆಪಿಯ ಐವರು ಪಾಲಿಕೆ ಸದಸ್ಯರಿದ್ದು, ವಿಧಾನಸಭೆಯಲ್ಲೂ ಪಕ್ಷದ ಅಭ್ಯರ್ಥಿ ಶೇ.45.7 ಮತಗಳನ್ನು ಪಡೆದಿದ್ದಾರೆ (ಕಾಂಗ್ರೆಸ್‌ ಶೇ.47.5). 2014ರ ಲೋಕಸಭಾ ಚುನಾವಣೆಯಲ್ಲಿ ವಿಜಯನಗರದಿಂದ ಚಲಾವಣೆಯಾದ ಒಟ್ಟು ಮತಗಳ ಪೂಕಿ ಶೇ.53.95 ಮತಗಳನ್ನು ಬಿಜೆಪಿ ಅಭ್ಯರ್ಥಿ ಪಡೆದಿದ್ದರು. ಕಾಂಗ್ರೆಸ್‌ ಅಭ್ಯರ್ಥಿಗೆ ಶೇ.39.3 ಮತ ನೀಡಿದ್ದರು.

ವಿಜಯನಗರದ ವಾರ್ಡ್‌ಗಳು ಈ ಮೊದಲೇ ಬಿಬಿಎಂಪಿ ವ್ಯಾಪ್ತಿಯಲ್ಲಿ ಇದ್ದವು. ಹಾಗಾಗಿ ಪಕ್ಕದ ಗೋವಿಂದರಾಜನಗರಕ್ಕೆ ಹೋಲಿಸಿದರೆ, ಅಭಿವೃದ್ಧಿಯಲ್ಲಿ ಈ ಕ್ಷೇತ್ರ ತುಸು ಮುಂದಿದೆ. ಕ್ಷೇತ್ರದಲ್ಲಿ ಲಿಂಗಾಯತ, ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಉತ್ತರ ಕರ್ನಾಟಕದಿಂದ ವಲಸೆ ಬಂದ ಜನ ಇಲ್ಲಿಯೇ ನೆಲೆಯೂರಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ಷೇತ್ರವು ಉತ್ತರ-ದಕ್ಷಿಣ ಸಂಸ್ಕೃತಿಯ ಸಮ್ಮಿಲನವಾಗಿದೆ.

ಸಂಸದರಿಂದ ಬಂದ ಪ್ರಮುಖ ಕೊಡುಗೆಗಳು
ಒಟ್ಟಾರೆ ನೀಡಿದ ಅನುದಾನ 3.3 ಕೋಟಿ 

-28 ಕುಡಿಯುವ ನೀರಿನ ಯೋಜನೆಗಳು
-1 ಜನೌಷಧ ಕೇಂದ್ರ
-ಕೃಷ್ಣದೇವರಾಯ ಹಾಲ್ಟ್ ಸ್ಟೇಷನ್‌ಕ್ಕೆ 70 ಲಕ್ಷ ಅನುದಾನ
-ಶಿಕ್ಷಣಕ್ಕೆ ಸಂಬಂಧಿಸಿದಂತೆ ಒಂದು ಯೋಜನೆ 

Advertisement

ನಿರೀಕ್ಷೆಗಳು
* ಟೋಲ್‌ಗೇಟ್‌ನಿಂದ ಕಡಬಗೆರೆ ಕ್ರಾಸ್‌ವರೆಗೆ ಮೆಟ್ರೋ ಸೇವೆ

* ಕೃಷ್ಣದೇವರಾಯ ಹಾಲ್ಟ್ ಸ್ಟೇಷನ್‌ನಲ್ಲಿ ಎಕ್ಸ್‌ಪ್ರೆಸ್‌ ರೈಲುಗಳ ನಿಲುಗಡೆ ಆಗಬೇಕು. ಇದರಿಂದ ಸುತ್ತಲಿನ ಜನರಿಗೆ ಅನುಕೂಲ ಆಗಲಿದ್ದು, ಸಂಚಾರದಟ್ಟಣೆ ಕೂಡ ತಗ್ಗಲಿದೆ.

ವಿಧಾನಸಭಾ ಕ್ಷೇತ್ರ- ವಿಜಯನಗರ
-ವಾರ್ಡ್‌ಗಳು- 8
-ಬಿಜೆಪಿ- 5
-ಕಾಂಗ್ರೆಸ್‌- 1
-ಜೆಡಿಎಸ್‌- 2

-ಜನಸಂಖ್ಯೆ- 4,76,760
-ಮತದಾರರ ಸಂಖ್ಯೆ- 2,99,355
-ಪುರುಷರು- 1,56,720
-ಮಹಿಳೆಯರು- 1,42,635

2014ರ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಚಲಾವಣೆಯಾದ ಮತಗಳು- 1,44,466 (ಶೇ. 53.95)
-ಬಿಜೆಪಿ ಪಡೆದ ಮತಗಳು- 79,812 (ಶೇ. 53.95)
-ಕಾಂಗ್ರೆಸ್‌ ಪಡೆದ ಮತಗಳು- 56,841 (ಶೇ. 39.3)
-ಜೆಡಿಎಸ್‌ ಪಡೆದ ಮತಗಳು- 3.081 (ಶೇ. 2.1)

2014ರ ಲೋಕಸಭೆ ಚುನಾವಣೆ ವೇಳೆ ಕ್ಷೇತ್ರದ ಚಿತ್ರಣ
-ಎಂ.ಕೃಷ್ಣಪ್ಪ, ಕಾಂಗ್ರೆಸ್‌ ಶಾಸಕ
-ಪಾಲಿಕೆಯಲ್ಲಿ ಕಾಂಗ್ರೆಸ್‌ ಸದಸ್ಯರು-2
-ಬಿಜೆಪಿ ಸದಸ್ಯರು- 6
-ಜೆಡಿಎಸ್‌- 0

Advertisement

Udayavani is now on Telegram. Click here to join our channel and stay updated with the latest news.

Next