Advertisement

 ಕೊಲ್ಲೂರಿನಲ್ಲಿ ಲೋ ವೋಲ್ಟೇಜ್ ಸಮಸ್ಯೆ 

06:20 AM Apr 16, 2018 | |

ಕೊಲ್ಲೂರು: ಕೊಲ್ಲೂರು ಪರಿಸರದಲ್ಲಿ ಲೋವೋಲ್ಟೇಜ್ ಸಮಸ್ಯೆಯಿದ್ದು, ಪರಿಹಾರಕ್ಕಾಗಿ ಇಲಾಖೆ ಮೊರೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ.  

Advertisement

ವರ್ಷದ ಎಲ್ಲ ತಿಂಗಳಲ್ಲೂ ಇಲ್ಲಿ ಲೋವೋಲ್ಟೇಜ್ ಸಮಸ್ಯೆ ಇದ್ದು, ಕಳೆದ 6 ದಿನಗಳಿಂದಲೂ ಸಮಸ್ಯೆ ತೀವ್ರವಾಗಿದೆ. ವಾರದಲ್ಲಿ 2 ದಿನ ದುರಸ್ತಿಗೆಂದು ದಿನವಿಡೀ ವಿದ್ಯುತ್‌ ಕಡಿತಗೊಳಿಸಿದರೆ, ಬಾಕಿ ದಿನಗಳಲ್ಲಿ ಸಾಮಾನ್ಯ ಬಲ್ಬ್ಗಳೂ ಬೆಳಗದಷ್ಟು ವೋಲ್ಟೇಜ್ ಇಲ್ಲದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಇಲಾಖೆಗೆ ದೂರು ನೀಡಿದರೆ, ಕೇವಲ ಭರವಸೆ ಮಾತ್ರ ಸಿಕ್ಕಿದ್ದು, ಸಮಸ್ಯೆ ಬಗೆಹರಿಯದೇ ಇನ್ನೂ ಹಾಗೇ ಉಳಿದಿದೆ ಎನ್ನುವುದು ಜನರ ಅಳಲು. 

ಪಂಪ್‌, ಉಪಕರಣ ಚಾಲೂ ಇಲ್ಲ!
ಲೋವೋಲ್ಟೇಜ್ ಸಮಸ್ಯೆಯಿಂದ ಕೃಷಿಕರ ಪಂಪ್‌ಸೆಟ್‌ಗಳು, ಕೊಲ್ಲೂರಿನಲ್ಲಿ ಅಂಗಡಿ ಮುಂಗಟ್ಟುಗಳ ಮಾಲಕರಿಗೆ ಸಮಸ್ಯೆಯಾಗಿದೆ. ಆದ್ದರಿಂದ ಅವರು ಜನರೇಟರ್‌ ಮೊರೆ ಹೋಗಿದ್ದು, ಹೆಚ್ಚಿನ ಖರ್ಚಿನಿಂದಾಗಿ ಹೊಡೆತ ಬಿದ್ದಿದೆ.
 
ವಿಳಂಬವಾಗುವ ಸಾಧ್ಯತೆ 
ಹಾಲ್ಕಲ್‌ನಲ್ಲಿ ನಿರ್ಮಾಣಗೊಳ್ಳಲಿರುವ ಮೆಸ್ಕಾಂ ಸಬ್‌ಸ್ಟೇಷನ್‌ಗೆ ಗುದ್ದಲಿ ಪೂಜೆ ನಡೆದಿದ್ದರೂ, ಕಾಮಗಾರಿ ಆಮೆನಡಿಗೆಯಲ್ಲಿ ಸಾಗಿದೆ. 11 ಕೆ.ವಿ. ಲೈನ್‌ ಬೈಂದೂರು ಅಥವಾ ತಲ್ಲೂರಿನಿಂದ ಕೊಲ್ಲೂರಿಗೆ ಜೋಡಿಸಬೇಕಾಗಿದ್ದು 30 ಕಿ.ಮೀ. ದೂರ ವ್ಯಾಪ್ತಿಯ ಪ್ರದೇಶ ಪೂರ್ಣಗೊಳಿಸುವುದು ವಿಳಂಬವಾಗುವ ಸಾಧ್ಯತೆ ಇದೆ. ಇದಕ್ಕೆ 2 ವರ್ಷ ಬೇಕಾಗಬಹುದು ಎಂಬ ಅಂದಾಜಿದೆ. ಇದರ ಟೆಂಡರನ್ನು ಮಂಗಳೂರಿನ ಜ್ಯೋತಿ ಕನ್‌ಸ್ಟ್ರಕ್ಷನ್‌ ಅವರಿಗೆ ಟೆಂಡರ್‌ ನೀಡಲಾಗಿದೆ. ಕುಡಿಯುವ ನೀರಿಗೂ ಇದರಿಂದ ಸಮಸ್ಯೆಯಾಗಿದೆ ಎಂದು ಸ್ಥಳೀಯರಾದ ರಮೇಶ್‌ ಗಾಣಿಗ ಹೇಳುತ್ತಾರೆ. 

ಜನರೇಟರ್‌ಗೆ ಶರಣು
ಲೋ ವೋಲ್ಟೇಜ್ ಸಮಸ್ಯೆ ಎದುರಾಗಿರುವ ಕೊಲ್ಲೂರಿನ ಅಂಗಡಿ ಮುಂಗಟ್ಟುಗಳವರು ಇನ್‌ವರ್ಟರ್‌ ಹಾಗೂ ಜನರೇಟರ್‌ಗೆ ಶರಣು ಹೋಗಬೇಕಾಗಿದ್ದು ದುಬಾರಿ ವೆಚ್ಚ ತೆತ್ತು ವ್ಯವಹಾರ ನಡೆಸುವುದು ಕಷ್ಟಸಾಧ್ಯ. ಸಬ್‌ಸ್ಟೇಷನ್‌ ಕೂಡಲೇ ಆರಂಭಿಸಿ ಲೋವೋಲ್ಟೇಜ್  ಸಮಸ್ಯೆ ಬಗೆಹರಿಸಬೇಕು. 

 - ಗಿರೀಶ್‌ ಶೆಟ್ಟಿ, ಉದ್ಯಮಿ, ಕೊಲ್ಲೂರು

ಅಡುಗೆ ಮಾಡಲಾಗುತ್ತಿಲ್ಲ
ದೈನಂದಿನ ಅಗತ್ಯಕ್ಕೆ  ಬಳಕೆ ಆಗಬೇಕಾದ ವಿದ್ಯುತ್‌ ಉಪಕರಣಗಳು ಲೋವೋಲ್ಟೇಜ್ನಿಂದ ಸ್ತಬ್ಧವಾಗಿವೆ. ಅಡುಗೆ ಮಾಡಲೂ ಸಾಧ್ಯವಾಗುತ್ತಿಲ್ಲ. 

 - ಲಕ್ಷ್ಮೀದೇವಿ 
ಗೃಹಿಣಿ, ಕೊಲ್ಲೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next