Advertisement

Love Li movie review: ಪ್ರೀತಿ, ದ್ವೇಷ ಮತ್ತು ಅವನು!

02:32 PM Jun 15, 2024 | Team Udayavani |

ಆತ ಅನಾಥ. ಆತನಿಗೆ ಯಾರೂ ಕ್ಯಾರೆ ಎನ್ನದ ಸಮಾಜದಲ್ಲಿ ಮುಂದೆ ಹೇಗೆ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಾನೆ ಎಂಬುದು ಒಂದು ಹಂತ. ಅದರ ಹಿಂದೆ ಬಲವಾದ ಕಾರಣ ಇರುತ್ತದೆ, ಅದುವೇ ಪ್ರೀತಿ.

Advertisement

ರೌಡಿ ಆಗಿದ್ದ ನಾಯಕ (ವಸಿಷ್ಠ ಸಿಂಹ) ಪ್ರೀತಿಯ ಬಲೆಗೆ ವಿದ್ದ ನಂತರ ಸಾತ್ವಿಕ ಜೀವನ ನಡೆಸಲು ಮುಂದಾಗುತ್ತಾನೆ. ಕುಡಿತದ ಮೇಲಿನ ವ್ಯಾಮೋಹ ಬಿಡುತ್ತಾನೆ. ಪತ್ನಿಯನ್ನು ಪ್ರೀತಿಸುತ್ತಾನೆ. ಅವರಿಬ್ಬರ ದಾಂಪತ್ಯಕ್ಕೆ ಸಾಕ್ಷಿಯಾಗಿ ಮಗುವಿನ ಜನನವಾಗುತ್ತದೆ. ಈವರೆಗಿನ ಕಥೆ ಒಂದು ರೂಪದಲ್ಲಿದ್ದರೆ, ಮಧ್ಯಂತರದ ವೇಳೆಗೆ ದೊಡ್ಡ ಶಾಕ್‌ ಕೊಟ್ಟು ಬ್ರೇಕ್‌ ಕೊಡುತ್ತಾರೆ ನಿರ್ದೇಶಕ ಚೇತನ್‌ ಕೇಶವ್‌.

ದ್ವಿತೀಯಾರ್ಧದಲ್ಲಿ ಸಾಕಷ್ಟು ತಿರುವುಗಳ ಮೂಲಕ ಸಿನಿಮಾ ಸಾಗುತ್ತದೆ. ಮುಖ್ಯವಾಗಿ ಏಡ್ಸ್‌, ಹೆಣ್ಣು ಮಕ್ಕಳ ಕಳ್ಳ ಸಾಗಣೆ ಸೇರಿದಂತೆ ಹಲವಾರು ಮಾμಯಾಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ. ಪ್ರತಿ ಅಂಶವನ್ನು ಸುಧೀರ್ಘ‌ವಾಗಿ ತೋರಿಸುವ ಹಾಗೂ ಎಲ್ಲವನ್ನೂ ಸಾವಧಾನವಾಗಿ ತೋರಿಸುವ ನಿರ್ದೇಶಕರ ಇಂಗಿತ ಚಿತ್ರದುದ್ದಕ್ಕೂ ಕಾಣುತ್ತದೆ. ಸಿನಿಮಾದ ಕಥೆಗೆ ಬೇಕಾದ ಲೋಕೇಷನ್‌, ಸೆಟ್‌ಗಳು ಸಿನಿಮಾದಲ್ಲಿ ಗಮನ ಸೆಳೆಯುತ್ತವೆ.

ಇಡೀ ಸಿನಿಮಾವನ್ನು ವಸಿಷ್ಠ ಸಿಂಹ ಹೆಗಲ ಮೇಲೆ ಹೊತ್ತಿದ್ದಾರೆ. ಕ್ರೂರತನ, ಪ್ರೀತಿ, ಬೆಸುಗೆ, ಬಾಂಧವ್ಯ… ಹೀಗೆ ಆಯಾ ಕಾಲದ ಸನ್ನಿವೇಶಗಳಿಗೆ ಹೊಂದಿಕೊಂಡು ಪಾತ್ರವನ್ನು ಜೀವಿಸಿದ್ದಾರೆ. ಸ್ಟೆಫಿ ಪಟೇಲ್‌ ಭಾಷೆ ಬಾರದಿದ್ದರೂ ಪಾತ್ರವನ್ನು ಅರ್ಥೈಸಿಕೊಂಡು ನೀಟಾಗಿ ನಿಭಾಯಿಸಿದ್ದಾರೆ. ದತ್ತಣ್ಣ, ಚಿತ್ಕಾಲ ಬಿರಾದಾರ್‌, ವಂಶಿಕಾ, ಮಾಳವಿಕಾ ಸೇರಿದಂತೆ ಅನೇಕರು ಗಮನ ಸೆಳೆಯುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next