Advertisement

ಪ್ರೇಮ ಸುಖಾಂತ್ಯ

10:53 AM Nov 22, 2017 | Team Udayavani |

“ಓ ಪ್ರೇಮವೇ’ ಎಂಬ ಚಿತ್ರವೊಂದು ಬರುತ್ತಿರುವ ಬಗ್ಗೆ ನಿಮಗೆ ಗೊತ್ತೇ ಇದೆ. ಈಗ ಆ ಚಿತ್ರ ಸದ್ದಿಲ್ಲದೇ ಚಿತ್ರೀಕರಣ ಮುಗಿಸಿದೆ. ಈ ಚಿತ್ರ ಬಿ ಎಂ ಕೆ ಫಿಲಂಸ್‌ ಅಡಿಯಲ್ಲಿ ತಯಾರಾಗಿದೆ. ಲಂಡನ್‌ ಫಿಲ್ಮ್ ಅಕಾಡೆಮಿಯಲ್ಲಿ ನಿರ್ದೇಶನ ತರಬೇತಿ ಪಡೆದಿರುವ ಮನೋಜ್‌ ಅವರ ಚೊಚ್ಚಲ ನಿರ್ದೇಶನಕ್ಕೆ ಶ್ರೀಮತಿ ಸಿ. ಟಿ ಚಂಚಲಾ ಕುಮಾರ್‌ ಅವರು ಹಣ ಹೂಡಿದ್ದಾರೆ. ಕ್ರೇಜಿ ಸ್ಟಾರ್‌ ವಿ ರವಿಚಂದ್ರನ್‌ ಅವರಿಂದ ಸ್ಫೂರ್ತಿಗೊಂಡ ಮನೋಜ್‌ ಒಂದು ತ್ರಿಕೋನ ಪ್ರೇಮ ಕಥೆಯನ್ನು ನಿರ್ದೇಶನ ಮಾಡಿದ್ದಾರೆ.

Advertisement

ಇದರಲ್ಲಿ ನಾಯಕ ಪಾತ್ರ ನಿಜ ಜೀವನದಲ್ಲಿ ಸಂಭವಿಸಿದ ಘಟನೆಯ ಸುತ್ತ ಸುತ್ತುತ್ತದೆಯಂತೆ. “ಮೊಗ್ಗಿನ ಮನಸು’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಮನೋಜ್‌ ಕುಮಾರ್‌ಗೆ ನಿಕ್ಕಿ ಗಲ್ರಾಣಿ ಹಾಗೂ ಅಪೂರ್ವ ನಾಯಕಿ. “ಓ ಪ್ರೇಮವೇ’ ಒಂದು ರೊಮ್ಯಾಂಟಿಕ್‌ ಲವ್‌ ಸೋರಿ. ಇಬ್ಬರ ನಾಯಕಿಯರ ನಡುವಿನ ಪ್ರೀತಿಯ ಸಂದರ್ಭಗಳು ಇಲ್ಲಿ ಪ್ರಮುಖವಾಗಿ ಮೂಡಿಬರಲಿದೆಯಂತೆ. ರಂಗಾಯಣ ರಘು, ಸಾಧು ಕೋಕಿಲ, ಬುಲೆಟ್‌ ಪ್ರಕಾಶ್‌, ಪ್ರಶಾಂತ್‌ ಸಿದ್ದಿ ಹಾಗೂ ವಿಶೇಷ ಪಾತ್ರದಲ್ಲಿ ಹುಚ್ಚ ವೆಂಕಟ್‌ ಅಭಿನಯಿಸಿದ್ದಾರೆ.  

ಎ ಹರ್ಷ, ಮದನ್‌ ಹರಿಣಿ, ಕಂಬಿ ರಾಜು, ಶ್ರೀನಿವಾಸ್‌ ಪ್ರಭು ನೃತ್ಯ ಸಂಯೋಜನೆ, ಕಿರಣ್‌ ಹಂಪಾಪುರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್‌ ಸಂಕಲನ, ಥ್ರಿಲ್ಲರ್‌ ಮಂಜು ಹಾಗೂ ಡಿಫ‌ರೆಂಟ್‌ ಡ್ಯಾನಿ ಸಾಹಸ ಸಂಯೋಜನೆ ಇರುವ ಈ ಚಿತ್ರಕ್ಕೆ ಆನಂದ್‌ ರಾಜ ವಿಕ್ರಮ್‌ ಹಾಗೂ ರಾಹುಲ್‌ ದೇವ್‌ ಜಂಟಿ ಸಂಗೀತ ನಿರ್ದೇಶಕರುಗಳು. ಜಯಂತ್‌ ಕಾಯ್ಕಿಣಿ, ಕವಿರಾಜ್‌, ಭರ್ಜರಿ ಚೇತನ್‌ ಗೀತ ಸಾಹಿತ್ಯಕ್ಕೆ ಸೋನು ನಿಗಮ್‌,

-ಶ್ರೇಯಾ ಘೋಷಾಲ್‌, ವಿಜಯ ಪ್ರಕಾಶ್‌, ಟಿಪ್ಪು ಅವರು  ಹಾಡಿದ್ದಾರೆ. ಈ ಚಿತ್ರದಲ್ಲಿ ಆರು ಹಾಡುಗಳಿದ್ದು ಎರಡು ಹಾಡುಗಳನ್ನು ಸ್ವಿಟ್ಜರ್ಲೆಂಡ್‌ನ‌ಲ್ಲಿ ಚಿತ್ರೀಕರಿಸಲಾಗಿದೆ. “ಓ ಪ್ರೇಮವೇ’ ತಂಡದಿಂದ ಈಗಾಗಲೇ ಗೀತೆಗಳು ಅಂತರ್ಜಾಲದಲ್ಲಿ ಬಿಡುಗಡೆಯಾಗಿದ್ದು ಒಂದೇ ದಿವಸಕ್ಕೆ ಒಂದು ಲಕ್ಷ ವೀಕ್ಷಕರು ಇದನ್ನು ನೋಡಿದ್ದಾರೆ. “ಓ ಪ್ರೇಮವೇ’ ಚಿತ್ರದ ಹಾಡುಗಳು ಮಾರುಕಟ್ಟೆಗೆ ಸದ್ಯದಲ್ಲೇ ಬರಲಿವೆ.

Advertisement

Udayavani is now on Telegram. Click here to join our channel and stay updated with the latest news.

Next