Advertisement

ಲೂಯಿಸ್‌, ಹೋಪ್‌ ಸಾಹಸ; ವೆಸ್ಟ್‌ ಇಂಡೀಸಿಗೆ ಸರಣಿ

11:19 PM Mar 13, 2021 | Team Udayavani |

ನಾರ್ತ್‌ಸೌಂಡ್‌ (ಆ್ಯಂಟಿಗುವಾ): ಆರಂಭಿಕ ಆಟಗಾರರಾದ ಎವಿನ್‌ ಲೂಯಿಸ್‌ ಮತ್ತು ಶೈ ಹೋಪ್‌ ಅವರ ಮತ್ತೂಂದು ಅಮೋಘ ಬ್ಯಾಟಿಂಗ್‌ ಸಾಹಸದಿಂದ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯನ್ನು ವೆಸ್ಟ್‌ ಇಂಡೀಸ್‌ ವಶಪಡಿಸಿಕೊಂಡಿದೆ. ದ್ವಿತೀಯ ಪಂದ್ಯದಲ್ಲಿ ಕೆರಿಬಿಯನ್‌ ಪಡೆ 5 ವಿಕೆಟ್‌ಗಳ ಜಯ ಸಾಧಿಸಿತು.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಶ್ರೀಲಂಕಾ 8 ವಿಕೆಟಿಗೆ 273 ರನ್‌ ಬಾರಿಸಿ ಸವಾಲೊಡ್ಡಿದರೆ, ವಿಂಡೀಸ್‌ 49.4 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 274 ರನ್‌ ಹೊಡೆದು ಗೆಲುವು ಒಲಿಸಿಕೊಂಡಿತು.

192 ರನ್‌ ಜತೆಯಾಟ
ಆರಂಭಕಾರ ಎವಿನ್‌ ಲೂಯಿಸ್‌ 103 ಮತ್ತು ಶೈ ಹೋಪ್‌ 84 ರನ್‌ ಹೊಡೆದು ವಿಂಡೀಸಿಗೆ 192 ರನ್ನುಗಳ ಅಮೋಘ ಆರಂಭ ಒದಗಿಸಿದರು. ಇವರ ಜತೆಯಾಟ 38ನೇ ಓವರ್‌ ತನಕ ಸಾಗಿತು. ಲಂಕೆಯ ಮುಂದೆ ತಿರುಗಿ ಬೀಳಲು ಯಾವ ಮಾರ್ಗವೂ ಇರಲಿಲ್ಲ. ಲೂಯಿಸ್‌ 121 ಎಸೆತಗಳನ್ನು ಎದುರಿಸಿ 8 ಫೋರ್‌, 4 ಸಿಕ್ಸರ್‌ಗಳೊಂದಿಗೆ ಅಬ್ಬರಿಸಿದರು. ಇದು ಅವರ 4ನೇ ಏಕದಿನ ಶತಕ. ಮತ್ತೂಮ್ಮೆ ಭರವಸೆಯ ಆಟವಾಡಿದ ಹೋಪ್‌ 108 ಎಸೆತಗಳಿಂದ ತಮ್ಮ ಸೊಗಸಾದ ಇನ್ನಿಂಗ್ಸ್‌ ಕಟ್ಟಿದರು. ಇದರಲ್ಲಿ 6 ಬೌಂಡರಿ ಒಳಗೊಂಡಿತ್ತು. ವಿಂಡೀಸ್‌ಗೆ 8 ವಿಕೆಟ್‌ ಜಯ ತಂದಿತ್ತ ಮೊದಲ ಮುಖಾಮುಖೀಯಲ್ಲಿ ಈ ಜೋಡಿ 143 ರನ್‌ ರಾಶಿ ಹಾಕಿತ್ತು. ಅಲ್ಲಿ ಹೋಪ್‌ ಸೆಂಚುರಿ (110 ರನ್‌) ಹೊಡೆದಿದ್ದರು.

ಸಂಕ್ಷಿಪ್ತ ಸ್ಕೋರ್‌
ಶ್ರೀಲಂಕಾ-8 ವಿಕೆಟಿಗೆ 273 (ಗುಣತಿಲಕ 96, ಚಂಡಿಮಾಲ್‌ 71, ಹಸರಂಗ 47, ಜಾಸನ್‌ ಮೊಹಮ್ಮದ್‌ 47ಕ್ಕೆ 3, ಜೋಸೆಫ್‌ 42ಕ್ಕೆ 2). ವೆಸ್ಟ್‌ ಇಂಡೀಸ್‌-49.4 ಓವರ್‌ಗಳಲ್ಲಿ 5 ವಿಕೆಟಿಗೆ 274 (ಲೂಯಿಸ್‌ 103, ಹೋಪ್‌ 84, ಪೆರೆರ 45ಕ್ಕೆ 2, ಪ್ರದೀಪ್‌ 66ಕ್ಕೆ 2).

ಪಂದ್ಯಶ್ರೇಷ್ಠ: ಎವಿನ್‌ ಲೂಯಿಸ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next