Advertisement

“ಲಾಟರಿ’ಕಿರುಚಿತ್ರ ಪ್ರಯೋಗ

10:14 AM Feb 07, 2020 | Lakshmi GovindaRaj |

ಕನ್ನಡ ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಪ್ರದೀಪ್‌ ಮುಳ್ಳುರು, ಕನ್ನಡ ಸಿನಿಮಾಗಳ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಿಗೆ ಅನುಕೂಲವಾಗುವಂತೆ ಬೆಂಗಳೂರಿನಲ್ಲಿ ಎರಡು ವರ್ಷಗಳ ಹಿಂದೆ ಅತ್ಯಾಧುನಿಕ ತಂತ್ರಜ್ಞಾನದ ಸುಸಜ್ಜಿತ ಸೌಲಭ್ಯಗಳುಳ್ಳ “ಪ್ರಯೋಗ್‌ ಸ್ಟುಡಿಯೋ’ ಎನ್ನುವ ಪೋಸ್ಟ್‌ ಪ್ರೊಡಕ್ಷನ್‌ ಸ್ಟುಡಿಯೋವನ್ನು ಪ್ರಾರಂಭಿಸಿದ್ದರು.

Advertisement

ಇದೀಗ ಈ ಸ್ಟುಡಿಯೋ ಯಶಸ್ವಿಯಾಗಿ ಎರಡು ವರ್ಷ ಪೂರೈಸಿದ್ದು, ಇದೇ ವೇಳೆ ಇದರ ರೂವಾರಿ ಪ್ರದೀಪ್‌ ಮುಳ್ಳುರು, ಸದಭಿರುಚಿ ಚಿತ್ರಗಳ ನಿರ್ಮಾಣದ ಉದ್ದೇಶದಿಂದ “ಪ್ರಯೋಗ್‌ ಪ್ರೊಡಕ್ಷನ್ಸ್‌’ ಎನ್ನುವ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿದ್ದಾರೆ. ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಸಂಗೀತ ಹಿರಿಯ ಸಂಗೀತ ನಿರ್ದೇಶಕ ವಿ. ಮನೋಹರ್‌, ನಿರ್ದೇಶಕ ಸತ್ಯಪ್ರಕಾಶ್‌, ನಟಿ ಸುಮನ್‌ ನಗರಕರ್‌, “ರಾಮಾ ರಾಮಾ ರೇ’ ಖ್ಯಾತಿಯ ನಟರಾಜ್‌, ನಿರ್ದೇಶಕ ದೀಪಕ್‌ ಮಧುವನಹಳ್ಳಿ,

ಗುರುದೇವ್‌ ನಾಗರಾಜ, ನಿರ್ಮಾಪಕ ಮಂಜುನಾಥ್‌ ದಾಸೇಗೌಡ, ನಿರ್ದೇಶಕ ಆದರ್ಶ ಈಶ್ವರಪ್ಪ, ನಿರ್ದೇಶಕ ಪ್ರದೀಪ್‌ ವರ್ಮಾ, ನಟ ನಿರ್ದೇಶಕ ವರುಣ್‌ ಕಟ್ಟಿಮನಿ, ಅರವಿಂದ್‌ ಅಯ್ಯರ್‌, ನಿಹಾಲ್‌ ರಾಜ್‌ಪುತ್‌, ನಿರ್ಮಾಪಕ ರಾಮಚಂದ್ರ ಬಾಬು ಸೇರಿದಂತೆ ಚಿತ್ರರಂಗದ ಹಲವು ಗಣ್ಯರ ಸಮ್ಮುಖದಲ್ಲಿ “ಪ್ರಯೋಗ್‌ ಪ್ರೊಡಕ್ಷನ್ಸ್‌’ ನಿರ್ಮಾಣ ಸಂಸ್ಥೆಗೆ ಚಾಲನೆ ನೀಡಲಾಯಿತು. ಇದೇ ವೇಳೆ “ಪ್ರಯೋಗ್‌ ಪ್ರೊಡಕ್ಷನ್ಸ್‌’ ಸಂಸ್ಥೆಯಿಂದ ನಿರ್ಮಾಣವಾದ 20 ನಿಮಿಷಗಳ ಅವಧಿಯ “ಲಾಟರಿ’ ಕಿರುಚಿತ್ರ ಪ್ರದರ್ಶಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next