Advertisement
ಇಂದಿನ ಶೈಕ್ಷಣಿಕ ಕ್ಷೇತ್ರದಲ್ಲಿ ವೃತ್ತಿಪರ ಕೋರ್ಸ್ ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಐಟಿಐನಿಂದ ಎಂಜಿನಿಯರ್ ಕಲಿಕೆಯವರೆಗೂ ವೃತ್ತಿಪರ ಕೋರ್ಸ್‌ಗೆ ಸೇರುವ ಮಂದಿ ಹೆಚ್ಚಾಗುತ್ತಿದ್ದಾರೆ. ಮುಖ್ಯವಾಗಿ ಕೋರ್ಸ್ ಮುಗಿದ ತತ್‌ಕ್ಷಣ ಅಥವಾ ಕೋರ್ಸ್‌ನಲ್ಲಿರುವಾಗಲೇ ಕೆಲಸ ಗಿಟ್ಟಿಸಿಕೊಳ್ಳುವ ವೃತ್ತಿಪರ ಕೋರ್ಸ್‌ಗಳ ಪೈಕಿ ಆಟೋಮೊಬೈಲ್ ಕ್ಷೇತ್ರ ಕೂಡ ಒಂದು.
Related Articles
Advertisement
ಐಟಿಐ ತಳಹದಿಆಟೋಮೊಬೈಲ್ ಕ್ಷೇತ್ರಕ್ಕೆ ಮುನ್ನುಡಿ ಎಂಬಂತೆ ಐಟಿಐ ಮಾಡಲು ಅವಕಾಶವಿರುತ್ತದೆ. ಆಟೋಮೊಬೈಲ್ ಕ್ಷೇತ್ರದಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಪಡೆಯಬೇಕು ಎಂದಿರುವವರು ಐಟಿಐ ಕಲಿತು ಬಳಿಕ ಡಿಪ್ಲೊಮಾ, ಬಳಿಕ ಎಂಜಿನಿಯರಿಂಗ್ ಕ್ಷೇತ್ರವನ್ನು ಆರಿಸಿಕೊಳ್ಳಬಹುದು.ಐಟಿಐನಲ್ಲಿ ಎರಡು ವರ್ಷಗಳ ಕೋರ್ಸ್ ಆಗಿ ಮೆಕ್ಯಾನಿಕ್ ವಿಷಯವನ್ನು ಆರಿಸಿಕೊಳ್ಳಲು ಅವಕಾಶ ಇರುತ್ತದೆ. ಎಸೆಸೆಲ್ಸಿ ಅಥವಾ ಪಿಯುಸಿ ಉತ್ತೀರ್ಣರಾದ ಮಂದಿಗೆ ಐಟಿಐನಲ್ಲಿ ಕಲಿಕೆಗೆ ಪ್ರವೇಶಾತಿ ಸಿಗುತ್ತದೆ. ವಾಹನ ಕ್ಷೇತ್ರದ ಉದ್ಯೋಗಾಕಾಂಕ್ಷಿಗಳು ನೀವಾಗಿದ್ದರೆ ಅಥವಾ ನಿಮಗೆ ಆಟೋಮೊಬೈಲ್ ಕ್ಷೇತ್ರದಲ್ಲಿ ಹೆಚ್ಚು ಆಸಕ್ತಿಯಿದ್ದರೆ, ಮೆಕ್ಯಾನಿಕ್ ಮೋಟಾರ್ ವಾಹನ ಅತ್ಯುತ್ತಮ ಆಯ್ಕೆ. ಈ ಐಟಿಐ ಕೋರ್ಸ್ ಪೂರ್ಣಗೊಳ್ಳಲು ಎರಡು ವರ್ಷಗಳು ಬೇಕು. ಐಟಿಐ ಫ್ರೆಷರ್ ಆದಾಗ ನಿಮಗೆ, ಭಾರತದಲ್ಲಿನ ಆಟೋಮೊಬೈಲ್ ಒಇಎಂ ಗಳ ನಿರ್ದಿಷ್ಟ ವಿಭಾಗಗಳಲ್ಲಿ ಮೆಕ್ಯಾನಿಕ್ ಮೋಟಾರ್ ವೆಹಿಕಲ್ ಉದ್ಯೋಗ ಸಿಗುತ್ತದೆ. ನಿಮಗೆ ಸ್ವಂತ ಉದ್ಯೋಗ ಆರಂಭಿಸುವ ಮನಸ್ಸಿದ್ದರೆ, ನೀವೇ ಸ್ವಂತ ಗ್ಯಾರೇಜ್ ಒಂದನ್ನು ಹೊಂದಲು ಇದೊಂದು ಉತ್ತಮ ಅವಕಾಶವಾಗಿದೆ. ಎಲ್ಲೆಲ್ಲಿ ಉದ್ಯೋಗ
ಆಟೋಮೊಬೈಲ್ ಕ್ಷೇತ್ರದಲ್ಲಿ ಕಲಿತ ಮಂದಿ ಮುಖ್ಯವಾಗಿ ತಾವೇ ಸ್ವಂತ ಉದ್ಯೋಗವನ್ನು ಆರಂಭ ಮಾಡಿಕೊಳ್ಳಬಹುಸು. ಇತ್ತೀಚಿನ ದಿನಗಳಲ್ಲಿ ಸ್ಟಾರ್ಟ್‌ಅಪ್ ಸೇರಿದಂತೆ ಕೇಂದ್ರ ಸರಕಾರವು ವಿವಿಧ ಯೋಜನೆಗಳನ್ನು ಘೋಷಿಸಿದೆ. ಅದೇ ರೀತಿ ಬ್ಯಾಂಕ್ ಮುಖೇನ ಸಾಲ ಸೌಲಭ್ಯಗಳು ಕೂಡ ಇವೆ. ಇವುಗಳನ್ನು ಬಳಸಿ ತಮ್ಮ ಉದ್ಯೋಗವನ್ನು ತಾವೇ ಸೃಷ್ಟಿಸಿಕೊಳ್ಳಬಹುದು. ಇವಿಷ್ಟೇ ಅಲ್ಲದೆ, ಪ್ರಮುಖ ಕಾರು ಉತ್ಪಾದನಾ ಸಂಸ್ಥೆಗಳಲ್ಲಿ ದುಡಿಯಬಹುದು. ಇನ್ನು, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ (ನಾಗರಿಕ ವಿಮಾನಯಾನ ಇಲಾಖೆ) ಅಗ್ನಿಶಾಮಕ ವಿಭಾಗದಲ್ಲಿಯೂ ಕೆಲಸ ಮಾಡಲು ಅವಕಾಶವಿದೆ. ತಿಂಗಳಿಗೆ 20,000 ದಿಂದ 50,000 ರೂ.ವರೆಗೆ ವೇತನವನ್ನೂ ಪಡೆಯಬಹುದು. ಮುಂದಿನ ದಿನಗಳಲ್ಲಿ ವಿದ್ಯುತ್ ಚಾಲಿತ ಕಾರುಗಳು, ಬೈಕ್‌ಗಳು ತಯಾರಾಗುತ್ತಿದ್ದು, ಈ ಕ್ಷೇತ್ರದಲ್ಲಿಯೂ ಉದ್ಯೋಗ ಪಡೆಯಬಹುದಾಗಿದೆ. ಭಾರತವಷ್ಟೇ ಅಲ್ಲದೆ, ವಿದೇಶಗಳಲ್ಲಿಯೂ ಆಟೋಮೊಬೈಲ್ ಓದಿದ ವಿದ್ಯಾರ್ಥಿಗಳಿಗೆ ಡಿಮ್ಯಾಂಡ್ ಇದೆ. ಮಾರುತಿ ಸುಝುಕಿ, ಟಾಟಾ ಮೋಟರ್ಸ್, ಯಮಹಾ, ಹುಂಡೈ, ಹೀರಿ ಮೊಟೊಕಾರ್ಪ್, ಫೋಕ್ಸ್‌ವ್ಯಾಗನ್, ಔಡಿ, ರೆನೊ, ಅಶೋಕ್ ಲೇಲ್ಯಾಂಡ್, ಟೊಯೊಟಾ, ಮಹೇಂದ್ರ ಸೇರಿದಂತೆ ಮತ್ತಿತರ ಸರ್ವಿಸ್ ಸ್ಟೇಶನ್‌ಗಳಲ್ಲಿ ಡೀಲರ್‌ಷಿಪ್‌ಗ್ಲ್ಲಿ, ಟ್ರಾನ್ಸ್‌ಪೊರ್ಟ್ ಸರ್ವೀಸರ್ ಗಳಲ್ಲಿ, ರಕ್ಷಣಾ ವಿಭಾಗಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಅವಕಾಶವಿದೆ. - ನವೀನ್ ಭಟ್ ಇಳಂತಿಲ