Advertisement

ಕಾನೂನು ಪದವೀಧರರಿಗೆ ವಿಪುಲ ಅವಕಾಶ: ನ್ಯಾ|ಹೊಸಗೌಡರ್‌

02:38 PM Jun 08, 2018 | Team Udayavani |

ದಾವಣಗೆರೆ: ಕಾನೂನು ಪದವಿ ಪಡೆದವರಿಗೆ ಉತ್ತಮ ಜೀವನ ಕಟ್ಟಿಕೊಳ್ಳಲು ವಿಪುಲ ಅವಕಾಶಗಳಿದ್ದು, ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಕಾನೂನು ಪದವಿ ಪಡೆಯಲು ಮುಂದಾಗಬೇಕೆಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಎಚ್‌.ಎಸ್‌. ಹೊಸಗೌಡರ್‌ ಹೇಳಿದ್ದಾರೆ.

Advertisement

ರಾ.ಲ. ಕಾನೂನು ಕಾಲೇಜಿನಲ್ಲಿ ಗುರುವಾರ ರ್‍ಯಾಂಕ್‌ ವಿಜೇತರಿಗೆ ಸನ್ಮಾನ, ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ, ಮಾತನಾಡಿದ ಅವರು, ಕಾನೂನು ಕ್ಷೇತ್ರ ಇಂದು ವ್ಯಾಪಕವಾಗಿ ಬೆಳೆಯುತ್ತಿದೆ. ವಕೀಲ ವೃತ್ತಿಯಲ್ಲಿ ಉತ್ತಮ ಜೀವನ ಕಟ್ಟಿಕೊಳ್ಳಬಹುದು ಎಂದರು. 

ಇದುವರೆಗೆ ಕಾನೂನು ಅಭ್ಯಾಸ ಮಾಡಿದವರು ವಕೀಲರು ಇಲ್ಲವೇ ನ್ಯಾಯಾಧೀಶರಾಗಬೇಕಿತ್ತು. ಆದರೆ, ಇದೀಗ
ಕಾರ್ಪೋರೇಟ್‌ ವಲದಯಲ್ಲೂ ವಿಪುಲ ಅವಕಾಶ ಸೃಷ್ಟಿಯಾಗಿವೆ. ಉತ್ತಮ ಪ್ರತಿಭೆ ಹೊಂದಿರುವ ಕಾನೂನು ಪದವೀಧರರು ಕಾರ್ಪೋರೇಟ್‌ ವಲಯದಲ್ಲಿ ಲಕ್ಷಾಂತರ ರೂಪಾಯಿ ವೇತನ ಪಡೆಯುವ ಅವಕಾಶಗಳಿವೆ ಎಂದು ಅವರು ತಿಳಿಸಿದರು. 

ದಿನ ಕಳೆದಂತೆ ದೇಶದ ಶಿಕ್ಷಣ ಪ್ರಮಾಣ ಹೆಚ್ಚುತ್ತದೆ. ಕಾನೂನು ಪರಿಪಾಲನೆ ಅನಿವಾರ್ಯ ಆಗುತ್ತಿದೆ. ಇಂತಹ ಸಂದರ್ಭದಲ್ಲಿ ನಾಗರಿಕರೂ ಸಹ ಪ್ರತಿಯೊಂದನ್ನೂ ಕಾನೂನು ಚೌಕಟ್ಟಿನಲ್ಲಿಯೇ ನೋಡಬೇಕಾಗುತ್ತದೆ. ಆಗ
ಕಾನೂನು ಪದವೀಧರರು ಅನಿವಾರ್ಯವಾಗಿ ಬೇಕಾಗುತ್ತಾರೆ ಎಂದು ಅವರು ಹೇಳಿದರು. 

ಕಾನೂನು ಶಿಕ್ಷಣ ಪಡೆಯುವವರು ಕೇವಲ ಪುಸ್ತಕದ ಜ್ಞಾನ ಹೊಂದಿದರೆ ಸಾಲದು. ಇದರ ಜೊತೆಗೆ ವಿವಿಧ ಭಾಷಾ ಜ್ಞಾನ ಪಡೆಯಬೇಕು. ಪಠ್ಯದಲ್ಲಿರುವ ವಿಷಯ ಮಾತ್ರವಲ್ಲದೆ ಕಾಲ ಕಾಲಕ್ಕೆ ತಕ್ಕಂತೆ ಬದಲಾಗುವ ಕಾನೂನುಗಳ ಕುರಿತು ಅಧ್ಯಯನ ಮಾಡುತ್ತಿರಬೇಕು. ನ್ಯಾಯಾಲಯಗಳು ನೀಡುವ ತೀರ್ಪಿನ ಆಧಾರ, ತಾರ್ಕಿಕತೆ ತಿಳಿಯಲು ಮುಂದಾಗಬೇಕು. ಆಗ ಮಾತ್ರ ಕಾನೂನು ಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕೇರಬಹುದು ಎಂದು ಅವರು ಹೇಳಿದರು.

Advertisement

ಕಾಲೇಜಿನ ಅಧ್ಯಕ್ಷ ಡಾ| ಆರ್‌.ಎಲ್‌. ಉಮಾಶಂಕರ್‌ ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳು ಇಂದಿನ ದಿನಮಾನದಲ್ಲಿ ಬರೀ ಮೊಬೈಲ್‌ ಮೊರೆಹೋಗುತ್ತಾರೆ. ಇದು ಬದಲಾಗಬೇಕು. ಪುಸ್ತಕ ಓದುವ ಹವ್ಯಾಸ ಸಹ ಬೆಳೆಸಿಕೊಳ್ಳಬೇಕು. ಮೊಬೈಲ್‌ ಮೂಲಕ ಉತ್ತಮ ವಿಷಯ ತಿಳಿದುಕೊಳ್ಳಲು ಮುಂದಾಗಬೇಕೆಂದರು. ಕಾಲೇಜಿನ ಪ್ರಾಂಶುಪಾಲ ಡಾ| ಬಿ.ಎಸ್‌. ರೆಡ್ಡಿ ವೇದಿಕೆಯಲ್ಲಿದ್ದರು. ರ್‍ಯಾಂಕ್‌ ವಿಜೇತ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next