Advertisement
ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ, ಕೊಟ್ಟಾರ, ಕಾಪಿಕಾಡ್ ಬಳಿ, ಬಲ್ಲಾಳ್‌ಬಾಗ್, ಉರ್ವಸ್ಟೋರ್ ಸಹಿತ ನಗರದ ವಿವಿಧ ಕಡೆಗಳಲ್ಲಿ ಅಳವಡಿಸಿದ ಹಂಪ್‌ಗ್ಳಲ್ಲಿ ಬಣ್ಣ ಇಲ್ಲ. ವಿವಿಧ ಕಡೆಗಳಲ್ಲಿ ರಸ್ತೆಯುಬ್ಬುಗಳಿಗೆ ಹಾಕಿದ ಬಿಳಿ ಬಣ್ಣಗಳು ಕಾಣದೆ ರಾತ್ರಿ ಹೊತ್ತಿನಲ್ಲಿ ಸಂಚರಿಸುವವರಿಗೆ ಅಪಾಯ ಉಂಟಾಗುವ ಸಂಭವವಿದೆ.
Related Articles
ಪಾದಚಾರಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ, ಅತೀ ಹೆಚ್ಚು ಜನ ಸೇರುವ ಕಡೆಗಳಲ್ಲಿ ಝೀಬ್ರಾ ಕ್ರಾಸ್ ಅನ್ನು ಅಳವಡಿಸಲಾಗಿದೆ. ಆದರೆ ಬಹುತೇಕ ಕಡೆ ಝೀಬ್ರಾ ಕ್ರಾಸ್‌ಗಳ ಬಣ್ಣ ಮಾಸಿದೆ. ಸಿಗ್ನಲ್‌ಗಳಲ್ಲಿ ವಾಹನಗಳು ನಿಲ್ಲಿಸಲು ಸೂಚನೆ ಸಿಗದಂತಾಗಿದೆ. ಇನ್ನು, ಸಾರ್ವಜನಿಕರು ಕೂಡ ರಸ್ತೆ ದಾಟಲು ಕಷ್ಟಪಡುವಂತಾಗಿದೆ.
Advertisement
ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ವಾಹನ ದಟ್ಟಣೆ ಉಂಟಾಗ ಬಾರದು ಎಂಬ ಉದ್ದೇಶಕ್ಕೆ ಕೆಲವೊಂದು ಜಂಕ್ಷನ್‌ಗಳಲ್ಲಿ ಪ್ರತ್ಯೇಕ ಬಸ್ ಲೇನ್ ವ್ಯವಸ್ಥೆ ಮಾಡಲಾ ಗಿದೆ. ಈ ರೀತಿಯ ಬಸ್ ಲೇನ್‌ಗಳಿಗೆ ಈ ಹಿಂದೆ ಕೋನ್‌ಗಳನ್ನು ಅಳವಡಿಸಲಾಗಿತ್ತು. ಆದರೆ, ಸದ್ಯ ಅವು ಗಳೆಲ್ಲ ಹೋಗಿದ್ದು, ಬಳಿಕ ಪ್ರತ್ಯೇಕವಾಗಿ ಮಾರ್ಕಿಂಗ್ ಮಾಡಲಾ ಗಿತ್ತು. ಅವುಗಳು ಕೂಡ ಈಗ ಮಾಸಿದೆ. ಇನ್ನೂ ಕೆಲವೆಡೆ ಮಾರ್ಕಿಂಗ್ ವ್ಯವಸ್ಥೆಯೂ ಸಮರ್ಪಕವಾಗಿ ಇಲ್ಲ ಎನ್ನುತ್ತಾರೆ ವಾಹನ ಸವಾರರು.
ಮಾರ್ಗಸೂಚಿಗಳಲ್ಲಿ ಅಕ್ಷರ ಮಾಯನಗರಕ್ಕೆ ಆಗಮಿಸಿದ ಮಂದಿಗೆ ವಿವಿಧ ಸ್ಥಳಗಳು, ಧಾರ್ಮಿಕ ಕ್ಷೇತ್ರಗಳ ರಸ್ತೆಯ ಮಾಹಿತಿಗಾಗಿ ನಗರದಲ್ಲಿ ಅಳವಡಿಸಿದ ಮಾರ್ಗಸೂಚಿ ಫಲಕಗಳಲ್ಲಿ ಕೆಲವು ಕಡೆ ಅಕ್ಷರಗಳೇ ಕಾಣಿಸುತ್ತಿಲ್ಲ. ಕರಾವಳಿಯ ವಾತಾವರಣ, ಬಿಸಿಲಿನ ಬೇಗೆಗೆ ಅಕ್ಷರಗಳು ಮಾಸಿ ಹೋಗಿವೆ. ಇನ್ನು, ನಗರದ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲಿ ಅಲ್ಲಿ ಮಹತ್ವ ತಿಳಿಸುವ ಬೋರ್ಡ್ ಗಳಿವೆ. ಆದರೆ ಕೆಲವೆಡೆ ಆ ಬೋರ್ಡ್‌ನಲ್ಲಿರುವ ಅಕ್ಷರಗಳು ಕಾಣಿಸುತ್ತಿಲ್ಲ. ಅಗತ್ಯ ಕ್ರಮ
ಮಂಗಳೂರು ನಗರದ ಬಹು ತೇಕ ಕಡೆ ವೈಜ್ಞಾನಿಕ ಹಂಪ್‌ಗ್ಳನ್ನು ಅಳ ವಡಿಸಲಾ ಗಿದೆ. ಹೊಸದಾಗಿ ಅಳವಡಿ ಸಿರುವ ಹಂಪ್‌ಗ್ಳಿಗೆ ಕೆಲವೇ ದಿನಗಳಲ್ಲಿ ಬಣ್ಣ ಬಳಿಯುತ್ತೇವೆ. ಇನ್ನು, ಈಗಾಗಲೇ ಹಂಪ್‌ಗ್ಳಲ್ಲಿ ಬಣ್ಣ ಮಾಸಿದ್ದರೆ ಅವು ಗಳಿಗೂ ಬಣ್ಣ ಬಳಿಯುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಜತೆ ಮಾತುಕತೆ ನಡೆಸುತ್ತೇನೆ.
-ಪ್ರೇಮಾನಂದ ಶೆಟ್ಟಿ,
ಮನಪಾ ಮೇಯರ್