ಮುಂಬೈ: ಕೋವಿಡ್ ಕಾರಣದಿಂದ ಐಪಿಎಲ್ ಅಮಾನತಾಗಿದೆ. ಮುಂದೆ ಸಾಧ್ಯವಾದಲ್ಲಿ ಐಪಿಎಲ್ ನಡೆಸುತ್ತೇವೆ ಎಂದು ಬಿಸಿಸಿಐ ಹೇಳಿದೆ. ಒಂದು ವೇಳೆ ಐಪಿಎಲ್‌ನ ಉಳಿದ ಭಾಗ ರದ್ದಾದರೆ ಬಿಸಿಸಿಐಗೆ ಭಾರೀ ನಷ್ಟವಾಗಲಿದೆ.
ಪೂರ್ತಿ ಐಪಿಎಲ್ ರದ್ದಾದರೆ ಬಿಸಿಸಿಐ ಅಂದಾಜು 2000 ಕೋಟಿ ರೂ.ನಿಂದ 2,500 ಕೋಟಿ ರೂ. ನಷ್ಟ ಅನುಭವಿಸಲಿದೆ. ಹೀಗೆಂದು ಮೂಲಗಳು ಹೇಳಿವೆ.
ಸದ್ಯ 29 ಪಂದ್ಯಗಳು ಮುಗಿದಿವೆ. ಇನ್ನು 31 ಪಂದ್ಯಗಳು ಬಾಕಿಯಿವೆ. ಒಂದುವರ್ಷದ ಐಪಿಎಲ್ ನೇರಪ್ರಸಾರಕ್ಕೆ ಸ್ಟಾರ್‌ನ್ಪೋರ್ಟ್ಸ್ ಬಿಸಿಸಿಐಗೆ 3269 ಕೋಟಿ ರೂ. ನೀಡುತ್ತದೆ. ಸದ್ಯ ನಡೆದಿರುವ 29 ಪಂದ್ಯಗಳಿಗೆ 1,580 ಕೋ.ರೂ. ಮಾತ್ರ ನೀಡಲಿದೆ.
ಇದನ್ನೂ ಓದಿ:ಐಪಿಎಲ್ ಅಮಾನತು: ವಿದೇಶಿ ಆಟಗಾರರನ್ನು ಮನೆಗೆ ಕಳುಹಿಸುವುದು ಹೇಗೆ?
ಉಳಿದ 1690 ಕೋ.ರೂ. ನಷ್ಟ. ಇನ್ನು ವಿವೋ, ಶೀರ್ಷಿಕೆ ಪ್ರಾಯೋಜಕತ್ವಕ್ಕಾಗಿ ನೀಡುವ 440 ಕೋಟಿ ರೂ.ನಲ್ಲಿ ಅರ್ಧಹಣ ಕಡಿತಗೊಳ್ಳಲಿದೆ. ಇತರೆ ಪ್ರಾಯೋಕರುಗಳಿಂದ ಬರಬೇಕಾಗಿರುವ 600 ಕೋಟಿ ರೂ.ಗಳಲ್ಲಿ ಅರ್ಧಹಣ ಮಾತ್ರ ಬರಲಿದೆ.
ಅಂದಹಾಗೆ ಇನ್ನು ಟೀಂ ಇಂಡಿಯಾದ ನಿರಂತರ ಕ್ರಿಕೆಟ್ ಆಡಬೇಕಾಗಿದೆ. ಹೀಗಾಗಿ ಐಪಿಎಲ್ ಮತ್ತೆ ನಡೆಯುವುದು ಅನುಮಾನವೇ!
ಇದನ್ನೂ ಓದಿ:ಐಪಿಎಲ್‌ಗೆ ಬಿಗ್ ಬ್ರೇಕ್ ಹಾಕಿದ ಕೋವಿಡ್