Advertisement

ಉಳ್ಳಾಲ: ಚಾಲಕನ ನಿಯಂತ್ರಣ ತಪ್ಪಿ ಮೀನು ಸಾಗಾಟದ ಲಾರಿ ಪಲ್ಟಿ

12:24 PM Feb 05, 2023 | Team Udayavani |

ಉಳ್ಳಾಲ: ಮೀನು ಸಾಗಾಟದ ಟೆಂಪೋ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ತೊಕ್ಕೊಟ್ಟು ಕಲ್ಲಾಪು ಎಂಬಲ್ಲಿ ರವಿವಾರ ಮುಂಜಾನೆ (ಫೆ.5 ರಂದು) ರಂದು ನಡೆದಿದೆ.

Advertisement

ಘಟನೆಯಲ್ಲಿ ಲಾರಿ ಚಾಲಕ ಸಾದಿಕ್ ಗಾಯಗೊಂಡಿದ್ದಾರೆ.‌

ಇದನ್ನೂ ಓದಿ: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ನಿಧನ

ಮಂಗಳೂರು ಧಕ್ಕೆಯಿಂದ ಉಳ್ಳಾಲ ಫಿಶ್ ಮಿಲ್ ಗೆ ಮೀನು ಸಾಗಾಟ ನಡೆಸುತ್ತಿದ್ದ ಟೆಂಪೋ ಕಲ್ಲಾಪು ಬಳಿ ಚಾಲಕನ ನಿಯಂತ್ರಣ ತಪ್ಪಿ ವಾಲಿದ್ದು, ಈ ವೇಳೆ ಟಯರ್ ಸಿಡಿದು ರಸ್ತೆಗೆ ಉರುಳಿದೆ. ಘಟನೆಯಿಂದ ರಸ್ತೆ ಸಂಚಾರದಲ್ಲಿ ಅಡಚಣೆಯುಂಟಾಗಿದೆ.

ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣಾ ಪೊಲೀಸರು ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next