Advertisement

Bantwala: ರಾಂಗ್‌ಸೈಡಿನಲ್ಲಿ ಬಂದು ಎರಡು ಬೈಕ್‌ಗಳಿಗೆ  ಢಿಕ್ಕಿ ಹೊಡೆದ ಲಾರಿ

09:17 PM May 07, 2024 | Team Udayavani |

ಬಂಟ್ವಾಳ: ರಾ.ಹೆ.75ರ ಫರಂಗಿಪೇಟೆಯಲ್ಲಿ ಲಾರಿಯೊಂದು ರಾಂಗ್‌ಸೈಡಿನಲ್ಲಿ ಬಂದು ಎರಡು ಬೈಕ್‌ಗಳಿಗೆ ಢಿಕ್ಕಿ ಹೊಡೆದ ಪರಿಣಾಮ ಮೂವರು ಸವಾರರು ಗಾಯಗೊಂಡ ಘಟನೆ ಮೇ 5ರಂದು ನಡೆದಿದ್ದು, ಲಾರಿ ಚಾಲಕ ನಿಲ್ಲಿಸದೆ ಪರಾರಿಯಾಗಿದ್ದಾನೆ.

Advertisement

ಘಟನೆಯಲ್ಲಿ ಬುಲೆಟ್‌ ಸವಾರ ಫಜೀರು ನಿವಾಸಿ ಹೆರಾಲ್ಡ್‌ ಕ್ರಾಸ್ತಾ, ಸಹಸವಾರೆ ಮೆಲಿಷಾ ಸಿಕ್ವೇರಾ ಹಾಗೂ ಇನ್ನೊಂದು ಬೈಕ್‌ ಸವಾರ ಯಾಕೂಬ್‌ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ.

ಮಂಗಳೂರು ಕಡೆಯಿಂದ ಏಕಮುಖ ರಸ್ತೆಯಲ್ಲಿ ರಾಂಗ್‌ ಸೈಡಿನಲ್ಲಿ ಲಾರಿಯೊಂದನ್ನು ಅದರ ಚಾಲಕ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಬುಲೆಟ್‌ ಹಾಗೂ ಬೈಕಿಗೆ ಢಿಕ್ಕಿ ಹೊಡೆದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಂಟ್ವಾಳ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next