Advertisement

ತೈಲ ಬೆಲೆ ಇಳಿಕೆಗೆ ಲಾರಿ ಮಾಲೀಕರ ಆಗ್ರಹ

12:38 PM Feb 27, 2021 | Team Udayavani |

ಚಾಮರಾಜನಗರ: ಇಂಧನ ಬೆಲೆ ಏರಿಕೆ, ಹಳೆ ವಾಹನಗಳ ಗುಜರಿ ನೀತಿ ಹಾಗೂ ಫಾಸ್ಟ್‌ ಟ್ಯಾಗ್‌ ಬೆಲೆ ಏರಿಕೆ ಖಂಡಿಸಿ ಲಾರಿ ಮತ್ತು ಟೆಂಪೊ ಮಾಲೀಕರು ಕೇಂದ್ರ ಸರ್ಕಾರದ ವಿರುದ್ಧ ದೇಶಾದ್ಯಂತ ನಡೆಸುತ್ತಿರುವ ಮುಷ್ಕರ ಬೆಂಬಲಿಸಿ ಚಾಮರಾಜನಗರ ಲೋಕಲ್‌ ಲಾರಿ ಮತ್ತು ಟೆಂಪೊ ಮಾಲೀಕರ ಸಂಘದ ವತಿಯಿಂದ ನಗರದಲ್ಲಿ ಪ್ರತಿಭಟಿಸಲಾಯಿತು.

Advertisement

ನಗರದ ಸುಲ್ತಾನ್‌ ಷರೀಫ್ ವೃತ್ತದಲ್ಲಿ ಪ್ರತಿಭಟನಾನಿರತರು ಕೆಲಕಾಲ ರಸ್ತೆತಡೆ ನಡೆಸಿ, ಕೇಂದ್ರದ ವಿರುದ್ಧ ಧಿಕ್ಕಾರ ಕೂಗಿದರು.ಈ ವೇಳೆ ಸಂಘದ ಅಧ್ಯಕ್ಷ ಎಂ.ಡಿ. ಜಿಯಾ ಉಲ್ಲಾ ಮಾತನಾಡಿ, ಇಂಧನ ಬೆಲೆ ಏರಿಕೆ, ಹಳೆವಾಹನಗಳ ಗುಜರಿ ನೀತಿ ಹಾಗೂ ಫಾಸ್ಟ್‌ ಟ್ಯಾಗ್‌ ಬೆಲೆ ಏರಿಕೆಯಿಂದ ನಮ್ಮ ಲಾರಿ, ಟೆಂಪೋ ಹಾಗೂ ಇತರ ವಾಹನ ಮಾಲೀಕರಿಗೆ ತುಂಬಾ ತೊಂದರಿಯಾಗಿದೆ. ಇಂಧನ ಬೆಲೆ ಏರಿಕೆಯನ್ನು ವಾಪಸ್‌ ಪಡೆಯಬೇಕು ಎಂದರು.

ಪ್ರತಿಭಟನೆಯಲ್ಲಿ ಸಂಘದ ಉಪಾಧ್ಯಕ್ಷ ನಾಸೀರ್‌ ಖಾನ್‌, ಕಾರ್ಯದರ್ಶಿ ಡಿ.ಕೆ.ಇರ್ಷಾದ್‌, ಖಜಾಂಚಿ ನಯೀಮ್‌ ಉಲ್ಲಾಖಾನ್‌, ನಿರ್ದೇಶಕ ರಾದ ಮಹೇಶ್‌, ಅಸ್ಲಾಂಪಾಷಾ,ಶಕೀಲ್‌, ಆರೀಫ್, ಆಸೀಫ್ ಉಲ್ಲಾ, ಫಾಜಿಲ್‌ ಷರೀಫ್ ಇತರರಿದ್ದರು.

ಇಂದು ಲಕ್ಷ್ಮೀವರದರಾಜ ಸ್ವಾಮಿ ರಥೋತ್ಸವ  :

ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿಯಪ್ರಸಿದ್ಧ ಲಕ್ಷ್ಮೀ ವರದರಾಜ ಸ್ವಾಮಿದೇವಸ್ಥಾನದಲ್ಲಿ 12ನೇ ವರ್ಷದ ದಿವ್ಯ ರಥೋತ್ಸವವು ಶನಿವಾರ ನಡೆಯಲಿದೆ.

Advertisement

ನಾಡಿನ ವಿವಿಧ ಭಾಗಗಳಿಂದ ಹಾಗೂಹೊರರಾಜ್ಯಗಳಿಂದಸಾವಿರಾರು ಮಂದಿಭಕ್ತಾದಿಗಳು ಆಗಮಿಸುವರು. ರಥೋತ್ಸವ ಪ್ರಯುಕ್ತ ದೇವಾಲಯದಲ್ಲಿ ಏಳು ದಿನಗಳ ಕಾಲ ವಿಶೇಷ ಪೂಜೆಆಯೋಜಿಸಲಾಗಿದೆ. ವಿದ್ಯುತ್‌ ಕಂಬಗಳಿಗೆ ಧ್ವನಿವರ್ಧಕ ಅಳವಡಿಸಿ ರಸ್ತೆಯಬದಿಗಳಲ್ಲಿ ದೀಪಾಲಂಕಾರಮಾಡಲಾಗಿದೆ. ವಿವಿಧ ವರ್ಣದ ಪತಾಕೆಗಳಿಂದ ಬ್ರಹ್ಮ ರಥವನ್ನು ಸಿದ್ಧಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next