Advertisement

UV Fusion: ಕೈಲಾಸವಾಸ ನಮೋಃ

12:20 PM Mar 13, 2024 | Team Udayavani |

ಶಿವ ಶಿವ ಎಂದರೆ ಭಯವಿಲ್ಲ ಶಿವನಾಮಕೆ ಸಾಟಿ ಬೇರಿಲ್ಲಾ…ಎನ್ನುವುದು ಕೋಟ್ಯಾಂತರ ಶಿವ ಭಕ್ತರ ಮನದಾಳದ ಮಾತು.

Advertisement

ಇಂತಹ ಸಹಸ್ರಾರು ಶಿವಭಕ್ತರು ಭಕ್ತಿ ಭಾವದಿಂದ ಶಿವನಾಮ ಸ್ಮರಣೆಮಾಡುತ್ತಾ, ಅರ್ಧನಾರೀಶ್ವರನ ಕೀರ್ತನೆ, ಭಜನೆಗಳ ಮೂಲಕ ಕಥೆ ಪುರಾಣಗಳನ್ನು ಕೇಳುತ್ತಾ ಇಡೀ ರಾತ್ರಿ ಶಿವನ ಆರಾಧನೆ ಮಾಡುವುದೆ ಈ ಮಹಾ ಶಿವರಾತ್ರಿ.

ಶಿವ ಮತ್ತು ಶಕ್ತಿ ಸಂಗಮದ ಸಂಕೇತವಾಗಿ ಆಚರಿಸುವ ಮಹಾ ಶಿವರಾತ್ರಿಯನ್ನು ಮಾಘಮಾಸದ ಕೃಷ್ಣ ಪಕ್ಷ, ಚತುರ್ದಶಿ ತಿಥಿಯಂದು ಆಚರಿಸಲಾಗುತ್ತದೆ. ವಿವಿಧ ಕಥೆ ಪುರಾಣಗಳ ಪ್ರಕಾರ ಶಿವಪೂಜೆಗೆ ಅನೇಕ ಕಾರಣಗಳಿವೆ. ಸೃಷ್ಟಿ ಸಂರಕ್ಷಣೆಯ ಹೊಣೆಹೊತ್ತ ಶಿವ ಸಾಗರ ಮಂಥನದ ಸಮಯದಲ್ಲಿ ಹೊರಬಂದ ವಿಷವನ್ನು ತನ್ನ ಗಂಟಲಲ್ಲಿ ಬಂಧಿಸಿಟ್ಟ ಮೃತ್ಯುಂಜಯನ ಆರಾಧನೆಯೆ ಮಹಾಶಿವರಾತ್ರಿ ಎಂದು ಒಂದು ಕಥೆ ಹೇಳಿದರೆ. ಶಿವ ಪಾರ್ವತಿ ವಧು ವರರಾಗಿ ಹಸೆಮಣೆ ಏರಿದ ದಿನವೆ ಮಹಾ ಶಿವರಾತ್ರಿ ಎನ್ನಲಾಗುತ್ತದೆ.

ಭಗೀರಥನ ತಪಸ್ಸಿಗೆ ಮೆಚ್ಚಿ ರಭಸದಿಂದ ಭೂಮಿಗಿಳಿದ ಗಂಗೆಯಿಂದ ಭೂಲೋಕವನ್ನು ರಕ್ಷಿಸಲು ತನ್ನ ಜಡೆಯಲ್ಲಿ ಬಂದಿಸಿಟ್ಟ ಶಿವನಲ್ಲಿ ಗಂಗೆಯ ವಿಮುಕ್ತಿಯ ಬೇಡಿಕೆಯನ್ನಿಟ್ಟ ಭಗೀರಥನ ಭಕ್ತಿಗೆ ಮೆಚ್ಚಿದ ಶಿವ ಜಡೆಯಲ್ಲಿದ ಗಂಗೆಯನ್ನು ಶಾಂತಸ್ವರೂಪಳಾಗಿ ಹರಿಯಲು ಬಿಟ್ಟ ಸುಸಂದರ್ಭವೇ ಮಹಾಶಿವರಾತ್ರಿ ಎನ್ನಲಾಗುತ್ತದೆ.

ಇದಷ್ಟೇ ಅಲ್ಲದೆ ಪರಶಿವನ ಆದಿ ಅಂತ್ಯವನ್ನು ಹುಡುಕ ಹೊರಟ ಬ್ರಹ್ಮ ಮತ್ತು ವಿಷ್ಣುವಿಗೆ ಲಿಂಗ ಸ್ವರೂಪಿಯಾಗಿ ದರ್ಶನ ನೀಡಿದ ಮಹಾ ದಿನವೇ ಮಹಾಶಿವರಾತ್ರಿಯಾಗಿ ಶಿವಭಕ್ತರಿಂದ ಆಚರಣೆಗೊಳಪಟ್ಟಿದೆ.

Advertisement

ಮಾಘಮಾಸದ ಶುಭದಿನವಾದ ಶಿವರಾತ್ರಿಯಂದು ಶಿವನ ಅಭಿಷೇಕಮಾಡುವುದು, ಶಿವತಾಂಡವ ಸ್ತೋತ್ರ, ಮಹಾಮೃತ್ಯುಂಜಯ ಮಂತ್ರ, ಶಿವಚಾಲಿಸ ಪಠನೆ ಮಾಡುವುದರಿಂದ ಅರ್ಧನಾರೀಶ್ವರನ ಕೃಪೆಗೆ ಪಾತ್ರರಾಗುತ್ತೇವೆ ಹಾಗೂ ಆತ ತನ್ನೆಲ್ಲಾ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಎನ್ನುವ ನಂಬಿಕೆ ಭಕ್ತರದ್ದು.

ಲಕ್ಷ್ಮೀ ಶಿವಣ್ಣ.

ಮಹಿಳಾ ವಿವಿ ವಿಜಯಪುರ

Advertisement

Udayavani is now on Telegram. Click here to join our channel and stay updated with the latest news.

Next