ಪಾವಂಜೆ: ಮಕ್ಕಳಲ್ಲಿ ನಾವು ದೇವರನ್ನು ಕಾಣುವ ಮೂಲಕ ಅವರ ಮುದ್ದು ಮನಸ್ಸಿನಲ್ಲಿ ಜ್ಞಾನವನ್ನು ತುಂಬುವ ಕೆಲಸ ಮಾಡಬೇಕು. ನಿಷ್ಠೆ ಹಾಗೂ ಭಕ್ತಿಗೆ ಹನುಮಂತನ ಸಾಹಸ ಕಥಾನಕಗಳನ್ನು ಅವರ ಮನದಲ್ಲಿ ತುಂಬಿ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಬೆಳೆಸಿರಿ ಎಂದು ಚಿಕ್ಕಮಗಳೂರಿನ ವೇದ ವಿಜ್ಞಾನ ಕೇಂದ್ರದ ವೇದ ಕೃಷಿಕ ಕೆ.ಎಸ್. ನಿತ್ಯಾನಂದ ಸ್ವಾಮೀಜಿ ಹೇಳಿದರು.
ಪಾವಂಜೆ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮೀ ದೇವಸ್ಥಾನದಲ್ಲಿ ರಾಮನವಮಿಯ ಪ್ರಯುಕ್ತ ಮಾ. 25ರಂದು ಮಕ್ಕಳು
ಹನುಮಂತನ ವೇಷಧಾರಿಯಾಗಿ ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಅವರು ಆಶೀರ್ವಚನ ನೀಡಿದರು. ಸುಮಾರು 40 ಮಕ್ಕಳು ಹನುಮಂತನ ವೇಷ ಧರಿಸಿ ಸಂಭ್ರಮಿಸಿದರು.
ಮಕ್ಕಳಿಗೆ ದೇಗುಲದ ವತಿಯಿಂದ ಮೊಕ್ತೇಸರ ಎಂ.ಶಶೀಂದ್ರ ಕುಮಾರ್ ಹಾಗೂ ದೇಗುಲದ ಟ್ರಸ್ಟಿ ನಕ್ರೆ ಬಾಲಕೃಷ್ಣ ಭಟ್ ಅವರು ವಿಶೇಷವಾಗಿ ಗೌರವಿಸಿದರು. ಮಹಾನಗರ ಪಾಲಿಕೆಯ ಮಾಜಿ ಮೇಯರ್ ರಜನಿ ದುಗ್ಗಣ್ಣ, ಹಳೆಯಂಗಡಿ ಶ್ರೀ ವಿದ್ಯಾವಿನಾಯಕ ಯುವಕ ಮಂಡಲದ ಅಧ್ಯಕ್ಷ ಸುಧಾಕರ ಆರ್. ಅಮೀನ್, ಎಚ್.ರಾಮಚಂದ್ರ ಮೊದಲಾದವರು ಈ ಸಂದರ್ಭದಲ್ಲಿ ಶೆಣೈ ಉಪಸ್ಥಿತರಿದ್ದರು.