Advertisement

ಬುಕ್ಕಿ ಚಾವ್ಲಾ ಗಡಿಪಾರಿಗೆ ಲಂಡನ್‌ ಕೋರ್ಟ್‌ ಒಪ್ಪಿಗೆ

07:09 AM Nov 17, 2018 | Team Udayavani |

ಲಂಡನ್‌: ಮ್ಯಾಚ್‌ ಫಿಕ್ಸಿಂಗ್‌ ಪ್ರಕರಣದಲ್ಲಿ ಬಂಧಿತ ಬುಕ್ಕಿ ಸಂಜೀವ್‌ ಕುಮಾರ್‌ ಚಾವ್ಲಾನನ್ನು ಭಾರತಕ್ಕೆ ಗಡಿಪಾರು ಮಾಡಲು ತಡೆ ನೀಡಿದ್ದ ಕೆಳ ನ್ಯಾಯಾಲಯದ ಆದೇಶವನ್ನು ಯುನೈಟೆಡ್‌ ಕಿಂಗ್‌ಡಮ್‌ ಹೈಕೋರ್ಟ್‌ ತಳ್ಳಿಹಾಕಿದ್ದು, ಗಡಿಪಾರು ಮಾಡುವ ಪ್ರಕ್ರಿಯೆಯನ್ನು ಪುನಃ ಆರಂಭಿಸುವಂತೆ ಜಿಲ್ಲಾ ನ್ಯಾಯಾಧೀಶರಿಗೆ ಸೂಚನೆ ನೀಡಿದೆ. ತಿಹಾರ್‌ ಜೈಲಿನಲ್ಲಿನ ಸ್ಥಿತಿ ಕಳಪೆಯಾಗಿದ್ದುದರಿಂದ 50 ವರ್ಷದ ಚಾವ್ಲಾರನ್ನು ಗಡಿಪಾರು ಮಾಡಲು ಜಿಲ್ಲಾ ನ್ಯಾಯಾಲಯ ನಿರಾಕರಿಸಿತ್ತು. ತಿಹಾರ್‌ ಜೈಲಿನಲ್ಲಿನ ಸ್ಥಿತಿ ಕಳಪೆಯಾಗಿದೆ ಎಂಬ ಕಾರಣವನ್ನು ನೀಡಿ ಉದ್ಯಮಿ ವಿಜಯ್‌ ಮಲ್ಯ ಕೂಡ ತನ್ನನ್ನು ಗಡಿಪಾರು ಮಾಡುವುದಕ್ಕೆ ಲಂಡನ್‌ನ ವೆಸ್ಟ್‌ಮಿನ್‌ಸ್ಟರ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದೇ ಕೋರ್ಟ್‌ನಲ್ಲಿ ಚಾವ್ಲಾ ಗೆಲುವು ಸಾಧಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next