Advertisement

Lokasabha Poll: ಎಸ್‌ಟಿಎಸ್‌ ಕ್ಷೇತ್ರದಲ್ಲಿ ಲೀಡ್‌ ಕೊಟ್ಟು ಪಾಠ ಕಲಿಸಿದ್ದೀರಿ- ಶೋಭಾ

12:14 PM Jun 24, 2024 | Team Udayavani |

ಕೆಂಗೇರಿ: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ನನಗೆ 1.13 ಲಕ್ಷಕ್ಕೂ ಹೆಚ್ಚು ಮತ ನೀಡಿ ಶಾಸಕ ಎಸ್‌.ಟಿ.ಸೋಮಶೇಖರ್‌ಗೆ ಮತದಾರರು ತಕ್ಕ ಪಾಠ ಕಲಿಸಿದ್ದಾರೆ ಎಂದು ಕ್ಷೇತ್ರದ ಸಂಸದೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ಇಲ್ಲಿನ ಸೂಲಿಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೊಸಪಾಳ್ಯದ ಮದುವೆ ಮನೆ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಕಾರ್ಯಕರ್ತರು ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಶ ವಂತಪುರ ಕ್ಷೇತ್ರದಲ್ಲಿ ಎಸ್‌.ಟಿ.ಸೋಮಶೇಖರ್‌ ಪರವಾಗಿ ಕೆಲಸ ಮಾಡುವುದಿಲ್ಲ ಎಂದು ಬಿಜೆಪಿ ಮುಖಂಡರು, ಕಾರ್ಯಕರ್ತರು ಪಟ್ಟು ಹಿಡಿದಿದ್ದರು. ಆಗ ಕಾರ್ಯಕರ್ತರ ಮನವೊಲಿಸಿ ಪಕ್ಷದ ಪರ ಕೆಲಸ ಮಾಡಿಸಿದ್ದೇವೆ. ಬಿಜೆಪಿ ಮುಖಂಡರು, ಕಾರ್ಯಕರ್ತ ನೆರವಿನಿಂದ ಗೆದ್ದ ಎಸ್‌. ಟಿ.ಸೋಮಶೇಖರ್‌ ನಮ್ಮ ಪಕ್ಷದ ಪರವಾಗಿ ನಿಲ್ಲದೆ ಕಾಂಗ್ರೆಸ್‌ ಪರವಾಗಿ ಪ್ರಚಾರ ನಡೆಸಿದ್ದಾರೆ. ಇದೀಗ ಅವರ ಕ್ಷೇತ್ರದಲ್ಲಿ ಜನರು ತಕ್ಕ ಉತ್ತರ ನೀಡಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.

ಜೆಡಿಎಸ್‌ನ ವಿಧಾನ ಪರಿಷತ್‌ ಸದಸ್ಯ ಮತ್ತು ಸಂಸದರು ಈ ಕ್ಷೇತ್ರದಲ್ಲಿದ್ದು, ಡಬಲ್‌ ಧಮಾಕ ಸಿಕ್ಕಿದ್ದು. ಮುಖಂಡರು, ಕಾರ್ಯಕರ್ತರ ಆಶಯಗಳಿಗೆ ಸ್ಪಂದಿಸಿ. ಅಭಿವೃದ್ಧಿ ವೇಗವನ್ನು ಹೆಚ್ಚಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಹರೀಶ್‌, ಎರಡು ಮಂಡಲಗಳ ಬಿಜೆಪಿ ಅಧ್ಯಕ್ಷರಾದ ರಂಗರಾಜು, ಅನಿಲ್‌ ಚಳಗೇರಿ, ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯ ದರ್ಶಿ ಆರ್‌. ಪಿ ಪಿ. ಪ್ರಕಾಶ್‌, ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಜಿ. ಮುನಿರಾಜು, ಒಕ್ಕಲಿಗರ ಸಂಘದ ಖಜಾಂಚಿ ಸಿ.ಎಂ.ಮಾರೇಗೌಡ, ಬೆಂಗಳೂರು ನಗರ ಜಿಪಂ ಮಾಜಿ ಉಪಾಧ್ಯಕ್ಷೆ ಪಾರ್ವತಿ ಚಂದ್ರಪ್ಪ, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಎಸ್‌. ಶಶಿಕುಮಾರ್‌, ಎನ್‌. ಕದರಪ್ಪ, ಜೆ.ರಮೇಶ್‌, ಯುವ ಮುಖಂಡ ಯದುನಂದನ್‌, ನಾಗದೇವನಹಳ್ಳಿ ಎನ್‌. ಸಿ.ಕುಮಾರ್‌, ಪಾಲಿಕೆ ಮಾಜಿ ಸದಸ್ಯರಾದ ಆಂಜನಪ್ಪ, ಮೈಲಸಂದ್ರ ಮುನಿರಾಜು, ಜಿಪಂ ಮಾಜಿ ಸದಸ್ಯ ಎ. ಶಿವಕುಮಾರ್‌, ಕನ್ನಲಿ ಡಾ. ಶಾಂತರಾಜು, ಪಟ್ಟಣಗೆರೆ ಮಹೇಶ್‌, ಸೋಮನಹಳ್ಳಿ ಪವನ್‌ ಆರ್‌., ಜಿ. ರಮೇಶ್‌ ಸೇರಿದಂತೆ ಮತ್ತಿತರರಿದ್ದರು.

ಜಲಮಿಷನ್‌ ಯೋಜನೆ ಅವ್ಯವಹಾರ ವಿರುದ್ಧ ಹೋರಾಟ: ಶೋಭಾ

Advertisement

ಯಶವಂತಪುರ ಕ್ಷೇತ್ರ ವ್ಯಾಪ್ತಿಯಲ್ಲಿ ಎಲ್ಲಾ ರೈಲ್ವೆ ಕೆಳ ಮತ್ತು ಮೇಲು ಸೇತುವೆ ಕಾಮಗಾರಿಗೆ ಚಾಲನೆ ದೊರಕಿಸಿಕೊಡುತ್ತೇನೆ. ಗ್ರಾಮೀಣ ಪ್ರದೇಶದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಜಲಜೀವನ್‌ ಮಿಷನ್‌ ಯೋಜನೆಯಲ್ಲಿ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಲಾಗಿದ್ದು, ಅದರಲ್ಲಿ ರಾಜ್ಯ ಸರ್ಕಾರ ತುಂಡು ಗುತ್ತಿಗೆ ನೀಡುವ ಮೂಲಕ ಹಣ ಲೂಟಿ ಮಾಡಲು ಹೊರಟಿದೆ. ಅದರ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಶೋಭಾ ತಿಳಿಸಿದರು.

ತಾಕತ್‌ ಇದ್ರೆ ಎಲೆಕ Òನ್‌ಗೆ ನಿಲ್ಲಲಿ: ಎಸ್‌ಟಿಎಸ್‌ಗೆ ಜವರಾಯಿಗೌಡ ಸವಾಲು

ಈಗಲೂ ಬಿಜೆಪಿ ಶಾಸಕರಾಗಿರುವ ಎಸ್‌. ಟಿ. ಸೋಮಶೇಖರ್‌ ಅವರೇ ನಿಮಗೆ ತಾಕತ್‌ ಇದ್ದರೆ, ಚುನಾವಣೆಗೆ ಬಾ ನೋಡೋಣ. ನಾಲ್ಕು ಬಾರಿ ಸೋತಿದ್ದೇನೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಾವ ರೀತಿ ಸೋಲಿಸುತ್ತೇವೆ ಎಂದು ಮತದಾರರು ಹೇಳುತ್ತಿದ್ದಾರೆ. ಮುಂದಿನ ಬಾರಿಯೂ ನಾನೇ ಅಖಾಡಕ್ಕೆ ಇಳಿಯುತ್ತೇನೆ ಎಂದು ವಿಧಾನ ಪರಿಷತ್‌ ಸದಸ್ಯ ಜವರಾಯಿಗೌಡ ಸವಾಲು ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next