Advertisement
ಮಂಗಳೂರಿನ ಕಾಂಗ್ರೆಸ್ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರವು ಬಜೆಟ್‌ನಲ್ಲಿ ಅನುದಾನ ಬಿಡುಗಡೆ ಮಾಡಲು ತಾರತಮ್ಯ ಮಾಡಿದ್ದಾರೆ. ನೀತಿ ಆಯೋಗದಲ್ಲಿ ಭಾಷಣ ಮಾಡುವ ವೇಳೆ ಮಮತಾ ಬ್ಯಾನರ್ಜಿಯವರ ಮೈಕ್ ಆಫ್ ಮಾಡುತ್ತಾರೆ. ಆರೆಸ್ಸೆಸ್‌ನವರಿಗೆ ಅಧಿಕಾರಿಗಳಾಗುವ ಅವಕಾಶ ಕಲ್ಪಿಸುತ್ತಾರೆ. ಆ ಮೂಲಕ ಕೇಂದ್ರ ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ ಎಂದರು.
ಶೇ. 40 ಕಮಿಷನ್ ಆರೋಪ ವಿಚಾರಕ್ಕೆ ಸಂಬಂಧಿಸಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಎಂದೆಂದಿಗೂ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ. ನಾವು ಮಾಡಿದ ಆರೋಪಕ್ಕೆ ಸಂಬಂಧಿಸಿ ನ್ಯಾ| ನಾಗಮೋಹನ್ ಅವರ ಸಮಿತಿ ರಚಿಸಿ ತನಿಖೆ ನಡೆಸುತ್ತಿದ್ದೇವೆ. ಲಕ್ಷಾಂತರ ಕೆಲಸಗಳಲ್ಲಿ ಅವ್ಯವಹಾರ ನಡೆದಿದೆ ಎಂದು ದೂರುಗಳು ಬರುತ್ತಿದ್ದು, ವರದಿ ಬಂದ ಬಳಿಕ ಕ್ರಮ ಕೈಗೊಳ್ಳುತ್ತೇವೆ ಎಂದರು. ಮಾಜಿ ಸಂಸದ ಅಜಯ್ ಕುಮಾರ್ ನಾಯಕ್, ವಿ.ಪ. ಸದಸ್ಯ ಐವನ್ ಡಿ’ ಸೋಜಾ, ಮಾಜಿ ಸಚಿವ ಬಿ ರಮಾನಾಥ ರೈ, ಕೆಪಿಸಿಸಿ ಉಪಾಧ್ಯಕ್ಷ ಸಯ್ಯದ್ ಅಹಮದ್, ಪ್ರಮುಖರಾದ ಕೆ. ಹರೀಶ್ ಕುಮಾರ್, ಪದ್ಮರಾಜ್ ಪೂಜಾರಿ, ರಕ್ಷಿತ್ ಶಿವರಾಮ್, ಜಿ. ಕೃಷ್ಣಪ್ಪ, ಎಂ. ಎಸ್. ಮಹಮ್ಮದ್, ಯು.ಟಿ. ಫರ್ಜಾನ ಉಪಸ್ಥಿತರಿದ್ದರು.