ತಿರುವನಂತಪುರಂ: ತೀವ್ರ ಕುತೂಹಲ ಕೆರಳಿಸಿದ್ದ ಕೇರಳದ ತಿರುವನಂತಪುರಂ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ, ಕಾಂಗ್ರೆಸ್ ಅಭ್ಯರ್ಥಿ ಶಶಿ ತರೂರ್ 3,51,304 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದು, ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ರಾಜೀವ್ ಚಂದ್ರಶೇಖರ್ 3,35,886 ಲಕ್ಷ ಮತ ಪಡೆದು ಪರಾಜಯಗೊಂಡಿದ್ದಾರೆ.
ಇದನ್ನೂ ಓದಿ:NDAಗೆ ಸಿಗದ ನಿರೀಕ್ಷಿತ ಬಹುಮತ: ಹೃದಯಾಘಾತದಿಂದ ಅಸುನೀಗಿದ ಬಿಜೆಪಿ ಕಟ್ಟಾಭಿಮಾನಿ…
ತಿರುವನಂತಪುರಂ ಲೋಕಸಭಾ ಕ್ಷೇತ್ರದಲ್ಲಿ ಸಿಪಿಐ ಅಭ್ಯರ್ಥಿ ಪನ್ನಿಯನ್ ರವೀಂದ್ರನ್ 2,42,937 ಮತ ಪಡೆದು ತೃತೀಯ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.
ರಾಯ್ ಬರೇಲಿಯಲ್ಲಿ ರಾಹುಲ್ ಗೆ ಭರ್ಜರಿ ಜಯ:
ಉತ್ತರಪ್ರದೇಶದ ರಾಯ್ ಬರೇಲಿಯಲ್ಲಿ ರಾಹುಲ್ ಗಾಂಧಿ 5,98,126 ಮತ ಪಡೆಯುವ ಮೂಲಕ 3,31,974 ಲಕ್ಷದಷ್ಟು ಭಾರೀ ಅಂತರದಿಂದ ಜಯ ಸಾಧಿಸಿದ್ದು, ಸಮೀಪದ ಪ್ರತಿಸ್ಪರ್ಧಿ ಭಾರತೀಯ ಜನತಾ ಪಕ್ಷದ ದಿನೇಶ್ ಪ್ರತಾಪ್ ಸಿಂಗ್ 2,66,152 ಲಕ್ಷ ಮತ ಪಡೆದು ಪರಾಜಯಗೊಂಡಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ರಾಹುಲ್ ಗಾಂಧಿ 2019ರಲ್ಲಿ ಸೋನಿಯಾ ಗಾಂಧಿ ಪಡೆದ ಮತಕ್ಕಿಂತ ಅಧಿಕ ಮತ ಮತ್ತು ಅಧಿಕ ಅಂತರದ ಗೆಲುವು ಪಡೆದಿರುವುದಾಗಿ ವರದಿ ತಿಳಿಸಿದೆ.
2004ರಿಂದ ಸೋನಿಯಾ ಗಾಂಧಿ ರಾಯ್ ಬರೇಲಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, 2019ರ ಲೋಕಸಭಾ ಚುನಾವಣೆಯಲ್ಲಿ ಸೋನಿಯಾ 1.67 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.