Advertisement

ಛತ್ತೀಸ್‌ಗಢ ಬಿಜೆಪಿ ಅಧ್ಯಕ್ಷರಾಗಿ ಅರುಣ್ ಸಾವೋ ಆಯ್ಕೆ

05:34 PM Aug 09, 2022 | Team Udayavani |

ರಾಯ್‌ಪುರ: ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ಆಡಳಿತವಿರುವ ರಾಜ್ಯದಲ್ಲಿ ತನ್ನ ಸಂಘಟನೆ ಪುನಶ್ಚೇತನಗೊಳಿಸಲು ಬಿಜೆಪಿ ಮಂಗಳವಾರ ಬಿಲಾಸ್‌ಪುರ ಲೋಕಸಭಾ ಸದಸ್ಯ ಅರುಣ್ ಸಾವೋ ಅವರನ್ನು ಛತ್ತೀಸ್‌ಗಢ ಪಕ್ಷದ ಅಧ್ಯಕ್ಷರನ್ನಾಗಿ ನೇಮಿಸಿದೆ.

Advertisement

ಜೂನ್ 2020 ರಿಂದ ರಾಜ್ಯ ಬಿಜೆಪಿಯನ್ನು ಮುನ್ನಡೆಸುತ್ತಿದ್ದಬುಡಕಟ್ಟು ನಾಯಕ ಮತ್ತು ಮಾಜಿ ಕೇಂದ್ರ ಸಚಿವ ವಿಷ್ಣು ದೇವ್ ಸಾಯಿ ಅವರನ್ನು ಬದಲಾಯಿಸಿ ಹಿಂದುಳಿದ ವರ್ಗದ (ಒಬಿಸಿ) ಸದಸ್ಯರಾದ ಸಾವೊ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಇದನ್ನೂ ಓದಿ:ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 465 ಅಂಕ ಜಿಗಿತ; 17,000 ಅಂಕಗಳ ಗಡಿ ದಾಟಿದ ನಿಫ್ಟಿ

ಸಾವೊ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ವಿದ್ಯಾರ್ಥಿ ವಿಭಾಗದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಗಾಗಿ ದೀರ್ಘಕಾಲ ಕೆಲಸ ಮಾಡಿದ್ದರು ಮತ್ತು 2019 ರಲ್ಲಿ ಬಿಲಾಸ್‌ಪುರ ಕ್ಷೇತ್ರದಿಂದ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next