Advertisement
ಸುರತ್ಕಲ್ ನಗರದ ಹೃದಯಭಾಗದಲ್ಲಿನ ಬಸ್ ನಿಲ್ದಾಣದ ಹಿಂಭಾಗದಲ್ಲಿ 8 ಲಕ್ಷ ರೂ. ವೆಚ್ಚದಲ್ಲಿ ಶೌಚಾಲಯ ನಿರ್ಮಿಸಲಾಗಿದೆ. ಆದರೆ ಇದಕ್ಕೆ ಮುಖ್ಯವಾಗಿ ಬೇಕಾಗಿರುವ ಒಳಚರಂಡಿ ಸಂಪರ್ಕವನ್ನೇ ನೀಡಲಾಗಿಲ್ಲ. ತರಾತುರಿ ಯಲ್ಲಿ ಶೌಚಾಲಯ ಕಟ್ಟಡ ನಿರ್ಮಿಸಿದ್ದು, ಇದೀಗ ಪಾಳು ಬೀಳುವಂತಾಗಿದೆ.
ತಲಾ 8 ಲಕ್ಷ ರೂ.ಯಂತೆ 32 ಲಕ್ಷ ರೂ. ಶೌಚಾಲಯಕ್ಕೆ ಬಳಕೆಯಾಗಿದೆ ಎಂಬುದು ಲೆಕ್ಕಾಚಾರ. ಆದೇ ಸಂದರ್ಭದಲ್ಲಿ ಇದಕ್ಕೆ ಬೇಕಾದ ಮೂಲಸೌಕರ್ಯ ನೀಡಲು ಕಡೆಗಣಿಸಲಾಗಿದೆ. ಇಷ್ಟೊಂದು ತರಾತುರಿ ಯಲ್ಲಿ ಕೇವಲ ಕಟ್ಟಡ ನಿರ್ಮಾಣಕ್ಕೆ ಆದ್ಯತೆ ನೀಡಿದ್ದು ಯಾಕೆ. ತೆರಿಗೆ ಹಣವನ್ನು ವೃಥಾ ಪೋಲು ಮಾಡುವ ಬದಲು ಇತರ ಯೋಜನೆಗೆ ಬಳಕೆ ಮಾಡಬಹುದಿತ್ತು. ಇಲ್ಲವೇ ಸುಸಜ್ಜಿತ ಶೌಚಾಲಯ ನಿರ್ಮಿಸಿ ಬಿಟ್ಟುಕೊಡಬೇಕಿತ್ತು ಎಂಬುದು ಸ್ಥಳೀಯರ ಅಭಿಪ್ರಾಯ.
Related Articles
ಪಶು ವೈದ್ಯಕೀಯ ಕಟ್ಟಡದ ಬಳಿ ಇರುವ ಶೌಚಾಲಯ ಸುರತ್ಕಲ್ ಬಸ್ ನಿಲ್ದಾಣದ ಸಮೀಪವಿರುವುದರಿಂದ ಹಣ ಪಾವತಿಸಿ ಬಳಸುವ ಬಗ್ಗೆ ಪಾಲಿಕೆ ಕ್ರಮ ಕೈಗೊಳ್ಳಬಹುದಿತ್ತು.
Advertisement
ಈಗಿನ ಬಸ್ ನಿಲ್ದಾಣದ ಬಳಿ ಯಾವುದೇ ಸೌಲಭ್ಯವಿಲ್ಲ. ಮಕ್ಕಳು, ಹಿರಿಯರು, ಮಹಿಳೆಯರು ಸಹಿತ ನೂರಾರು ಮಂದಿ ನಿತ್ಯ ಉಡುಪಿ, ಮಂಗಳೂರು ಬಸ್‌ಗಾಗಿ ಇಲ್ಲೇ ಕಾಯ ಬೇಕಿದೆ. ಇಲ್ಲಿನ ಶೌಚಾಲಯ ಬಾಗಿಲು ತೆಗೆದೇ ಇಲ್ಲ. ಬಂದವರು ಶೌಚಾಲಯ ವಿಲ್ಲದೆ ಪರದಾಡುವಂತಾಗಿದೆ.
ಅಧಿಕಾರಿಗಳಲ್ಲಿ ಚರ್ಚಿಸಿ ಕ್ರಮಪಾಲಿಕೆ ವ್ಯಾಪ್ತಿಯಲ್ಲಿ ನಿರ್ಮಿಸಿದ ಸುಲಭ ಶೌಚಾಲಯಗಳನ್ನು ಸಾರ್ವಜನಿಕರ ಉಪಯೋಗಕ್ಕೆ ಬಿಟ್ಟು ಕೊಡುವ ಬಗ್ಗೆ ಆಧಿಕಾರಿಗಳಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.
– ಪ್ರೇಮಾನಂದ ಶೆಟ್ಟಿ, ಮೇಯರ್ ಮನಪಾ, ಮೂಲಸೌಕರ್ಯ ಒದಗಿಸಿ ಬಳಕೆಗೆ
ಬಜೆಟ್ ಪೂರ್ವಭಾವಿ ಸಭೆ ಸಂದರ್ಭ ಶೌಚಾಲಯಕ್ಕೆ ಬೀಗ ಹಾಕಿರುವ ಬಗ್ಗೆ ಆಯುಕ್ತರ ಗಮನಕ್ಕೆ ಬಂದಿದೆ. ಮೂಲಸೌಕರ್ಯ ಒದಗಿಸಿ ಸ್ಥಳೀಯವಾಗಿ ಯಾರಾದರೂ ನಿರ್ವಹಣೆಗೆ ಸಿಕ್ಕಿದಲ್ಲಿ ಸಾರ್ವಜನಿಕರ ಉಪಯೋಗಕ್ಕೆ ನೀಡುವ ಬಗ್ಗೆ ಚಿಂತಿಸಲಾಗುವುದು.
– ಸುಶಾಂತ್, ಹಿ.ಆ. ನಿರೀಕ್ಷಕರು, ಪಾಲಿಕೆ ಉಪ ಕಚೇರಿ, ಸುರತ್ಕಲ್ - ಲಕ್ಷ್ಮೀನಾರಾಯಣ ರಾವ್