Advertisement

10 ವರ್ಷ ಕತ್ತಲ ಕೊಠಡಿಯಲ್ಲಿದ್ದರು

01:22 AM Dec 29, 2020 | mahesh |

ಅಹಮದಾಬಾದ್‌: ಗುಜರಾತ್‌ನ ರಾಜಕೋಟ್‌ನಲ್ಲಿ ಅತ್ಯಂತ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. 10 ವರ್ಷದಿಂದ ಕತ್ತಲಗರ್ಭದಲ್ಲಿ, ಕೋಣೆಯೊಂದರಲ್ಲಿ ತಮಗೆ ತಾವೇ ಸೇರಿಕೊಂಡಿದ್ದ ಮೂವರು ಸಹೋದರ ಮತ್ತು ಸಹೋದರಿಯರು ಅತ್ಯಂತ ಅಸ್ವಸ್ಥ ಸ್ಥಿತಿಯಲ್ಲಿ ಹೊರಬಂದಿದ್ದಾರೆ. ಅವರನ್ನು ಸಾಥಿ ಸೇವಾ ಗ್ರೂಪ್‌ ಎಂಬ ಸರಕಾರೇತರ ಸಂಸ್ಥೆ (ಎನ್‌ಜಿಒ), ರವಿವಾರ ಕೊಠಡಿ ಬಾಗಿಲು ಒಡೆದು ಹೊರ ಕರೆದುಕೊಂಡು ಬಂದಿದೆ. ಆದರೆ ಇಷ್ಟು ವರ್ಷ ಅವರನ್ನು ಕೊಠಡಿಯಲ್ಲಿರಲು ಬಿಟ್ಟಿದ್ದು ಹೇಗೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.

Advertisement

ಮೂವರ ತಂದೆ ಹೇಳುವ ಪ್ರಕಾರ 1986ರಿಂದ ಅವರ ಪತ್ನಿಗೆ ಅನಾರೋಗ್ಯ ಶುರುವಾಯಿತು. ಅದನ್ನು ಅಮರೀಶ್‌ (42), ಮೇಘನಾ (39), ಭವೇಶ್‌ (30) ಮನಸ್ಸಿಗೆ ಹಾಕೊಂಡಿದ್ದರು. ಅದಾದ 5-6 ವರ್ಷಗಳ ಬಳಿಕ ತಾಯಿ ತೀರಿಕೊಂಡರು. ಮುಂದೆ ಕಾಲಾನಂತರದಲ್ಲಿ ಮೂವರೂ ಕೊಠಡಿ ಸೇರಿಕೊಂಡರು. ಅನಂತರ ಹೊರಗೆ ಬರಲು ಒಪ್ಪಲೇ ಇಲ್ಲ.

ಈ ಮೂವರ ತಂದೆ ಸರಕಾರಿ ಉದ್ಯೋಗಿ. ಮಕ್ಕಳು ಸುಶಿಕ್ಷಿತರು. ಅಮರೀಶ್‌ ಬಿಎ,  ಎಲ್‌ಎಲ್‌ಬಿ, ಮೇಘನಾ ಮನಃಶಾಸ್ತ್ರದಲ್ಲಿ ಸ್ನಾತಕೋ ತ್ತರ ಪದವಿ ಪಡೆದಿದ್ದಾರೆ. ಭವೇಶ್‌ ಅತ್ಯುತ್ತಮ ಕ್ರಿಕೆಟಿಗ ನಾಗಿದ್ದರು ಮಾತ್ರವಲ್ಲ ಅರ್ಥಶಾಸ್ತ್ರದಲ್ಲಿ ಬಿಎ ಪದವಿ ಪಡೆದಿದ್ದರು. ಈ ಮೂವರ ಮೇಲೆ ವಾಮಾಚಾರ ಪ್ರಯೋಗವಾಗಿದೆ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next