Advertisement

ಲಾಕ್‌ಡೌನ್‌ ಲಾಟರಿ!

05:02 AM Jun 01, 2020 | Team Udayavani |

ಜಗತ್ತಿನ ದೊಡ್ಡ ದೊಡ್ಡ ಕಂಪನಿಗಳೇ ನಷ್ಟ ಅನುಭವಿಸುತ್ತಾ ಮಕಾಡೆ ಮಲಗಿರುವ ಈ ಸಂದರ್ಭದಲ್ಲಿಯೂ, ಹಲವರಿಗೆ ಬಂಪರ್‌ ಲಾಟರಿ ಹೊಡೆದಿದೆ. ಲಾಕ್‌ಡೌನ್‌ ಸಮಯದಲ್ಲಿ ಯಾರ ಯಾರ ಸಂಪತ್ತು ಹೆಚ್ಚಳಗೊಂಡಿದೆ ಎಂದು  ಸಂಶೋಧನೆ ನಡೆಸಿದಾಗ ಎರಡು ಹೆಸರುಗಳು ಪ್ರಮುಖವಾಗಿ ಕಾಣಿಸಿಕೊಂಡಿವೆ.

Advertisement

ಮೊದಲ ಸ್ಥಾನದಲ್ಲಿರುವಾತ ಅಮೇಝಾನ್‌ ಸಂಸ್ಥೆಯ ಮಾಲೀಕ ಜೆಫ್ ಬೆಝೊಸ್‌. ಎರಡನೇ ಸ್ಥಾನದಲ್ಲಿರುವವರು ಫೇಸ್‌ಬುಕ್‌ ಸ್ಥಾಪಕ ಮಾರ್ಕ್‌  ಝಕರ್‌ಬರ್ಗ್‌. ಮಾರ್ಚ್‌ ಮತ್ತು ಮೇ ನಡುವಿನಲ್ಲಿ, ಬೆಝೊಸ್‌ ಅವರ ಸಂಪತ್ತಿಗೆ ಎರಡೂವರೆ ಲಕ್ಷ ಕೋಟಿ ರೂ. ಸೇರಿಕೊಂಡಿದೆ. ನೆನಪಿಡಿ; ಇದು ಒಂದು ತಿಂಗಳ ಅವಧಿಯಲ್ಲಿ ಅವರ ಸಂಪತ್ತಿಗೆ ಹೆಚ್ಚುವರಿಯಾಗಿ ಸೇರಿಕೊಂಡ ಮೊತ್ತ!

ಇದೇ ಅವಧಿಯಲ್ಲಿ ಮಾರ್ಕ್‌ ಝಕರ್‌ಬರ್ಗ್‌ ಅವರ ಸಂಪತ್ತಿಗೆ ಒಂದೂ ಮುಕ್ಕಾಲು ಲಕ್ಷ ಕೋಟಿ ರೂ. ಹೆಚ್ಚುವರಿಯಾಗಿ ಸೇರಿಕೊಂಡಿದೆ. ಲಾಕ್‌ಡೌನ್‌ ಸಮಯದಲ್ಲಿ ಅಮೇಝಾನ್‌ ಪ್ರೈಮ್‌ (ಒಟಿಟಿ) ಚಂದಾದಾರರು ಹೆಚ್ಚಿರುವುದು ಮತ್ತು  ದಿನನಿತ್ಯದ ಅಗತ್ಯಗಳಿಗಾಗಿ ಅಮೇಝಾನ್‌ ಇ ಕಾಮರ್ಸ್‌ ಜಾಲತಾಣದ ಮೊರೆ ಹೋಗಿದ್ದರಿಂದ ಹೀಗಾಗಿದೆ ಎನ್ನುವು ಪರಿಣತರ ಅಭಿಪ್ರಾಯ.

Advertisement

Udayavani is now on Telegram. Click here to join our channel and stay updated with the latest news.

Next