Advertisement

ತಬ್ಲೀಘಿನಿಂದಾಗಿ ಲಾಕ್‌ಡೌನ್‌ ವಿಸ್ತರಣೆ: ನಖ್ವಿ

08:27 AM May 10, 2020 | Sriram |

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ತಬ್ಲೀಘಿ -ಎ-ಜಮಾತ್‌ ಸಮಾವೇಶ ನಡೆಯದೇ ಇದ್ದಿದ್ದರೆ, ಲಾಕ್‌ಡೌನ್‌ ಮೂರನೇ ಹಂತಕ್ಕೆ ವಿಸ್ತರಣೆಯಾಗುತ್ತಿರಲಿಲ್ಲ ಎಂದು ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಮುಕ್ತಾರ್‌ ಅಬ್ಬಾಸ್‌ ನಖ್ವಿ ಹೇಳಿದ್ದಾರೆ.

Advertisement

ತಬ್ಲಿ ಸಮಾವೇಶವು ದೇಶದಲ್ಲಿ ಕೋವಿಡ್‌-19 ಶರವೇಗದ ಸಂವಾಹಕ (ಸೂಪರ್‌ ಸ್ಪ್ರೆಡರ್‌)ಎಂಬಂತೆ ಕೆಲಸ ಮಾಡಿತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಖಾಸಗಿ ಸಂಸ್ಥೆಯೊಂದರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ತಬ್ಲೀಘಿ-ಎ-ಜಮಾತ್‌ ಸಂಘಟನೆಯ ಧಾರ್ಮಿಕ ಸಮಾವೇಶದ ಮೂಲಕ ಇಡೀ ದೇಶಾದ್ಯಂತ ಕೋವಿಡ್‌-19 ಸೋಂಕು ವೇಗವಾಗಿ ಹರಡಿತು. ಆ ಸಂಘಟನೆಯು ಅದೊಂದು ತಪ್ಪು ಮಾಡಿರದಿದ್ದರೆ ದೇಶದಲ್ಲಿ ಲಾಕ್‌ಡೌನ್‌ ಮೂರನೇ ಹಂತಕ್ಕೆ ವಿಸ್ತರಣೆಯಾಗುತ್ತಿರಲಿಲ್ಲ. ಆದರೆ, ಆ ಸಂಘಟನೆಯ ಸದಸ್ಯರು ಮಾಡಿದ ತಪ್ಪನ್ನೇ ಆಧಾರವಾಗಿಟ್ಟುಕೊಂಡು ಎಲ್ಲಾ ಮುಸ್ಲಿಮರನ್ನೂ ಶಿಕ್ಷಿಸುವುದು ಸರಿಯಲ್ಲ” ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next