Advertisement

ಕೋವಿಡ್-19 ಭೀತಿ: ಬೆಂಗಳೂರು ಸೇರಿದಂತೆ ಒಂಬತ್ತು ಜಿಲ್ಲೆಗಳು ಸಂಪೂರ್ಣ ಲಾಕ್ ಡೌನ್

11:13 AM Mar 27, 2020 | keerthan |

ಬೆಂಗಳೂರು: ಅಪಾಯಕಾರಿ ಕೋವಿಡ್-19 ಭೀತಿ ಹೆಚ್ಚಾಗುತ್ತಿದ್ದಂತೆ ಬೆಂಗಳೂರು ಸೇರಿದಂತೆ ಒಂಬತ್ತು ಜಿಲ್ಲೆಗಳಲ್ಲಿ ಲಾಕ್ ಡೌನ್ ಆದೇಶ ಹೊರಡಿಸಲಾಗಿದೆ.

Advertisement

ಬೆಂಗಳೂರು, ಕಲಬುರಗಿ, ಮೈಸೂರು, ಕೊಡಗು, ಚಿಕ್ಕಬಳ್ಳಾಪುರ, ಧಾರವಾಡ ,  ಮಂಗಳೂರು, ಬೆಳಗಾವಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ನಾಳೆಯಿಂದ ಮಾರ್ಚ್ 31ರವರೆಗೂ ಸಂಪೂರ್ಣ ಲಾಕ್ ಡೌನ್ ಆಗಿರಲಿದೆ.

ನಾಳೆಯಿಂದ ರಾಜ್ಯದ 9 ಜಿಲ್ಲೆಗಳಲ್ಲಿ ತುರ್ತು ಸೇವೆಗಳು ಹೊರತು ಪಡಿಸಿ ಉಳಿದೆಲ್ಲವೂ ಬಂದ್ ಆಗಿರಲಿದೆ. ಬಾರ್, ರೆಸ್ಟೋರೆಂಟ್ , ಕ್ಲಬ್, ಪಬ್, ಬಸ್ ಸಂಚಾರ, ಆಟೋ -ಕ್ಯಾಬ್ ಸೇವೆ, ಮಾಲ್ ಎಲ್ಲವೂ ಸ್ಥಗಿತ.

ಅಗತ್ಯ ಸೇವೆಗಳಾದ ಹಾಲು-ಪೇಪರ್, ದಿನಸಿ ವಸ್ತುಗಳು, ಮೆಡಿಕಲ್ ಸ್ಟೋರ್ ಎಂದಿನಂತೆ ಕಾರ್ಯನಿರ್ವಹಿಸಲಿದೆ. ರಾಜ್ಯದ ಜನರು ಭಯಪಡುವ ಅಗತ್ಯವಿಲ್ಲ ಎಂದು ರಾಜ್ಯ ಸರ್ಕಾರ ಹೇಳಿದೆ.

ರಾಜ್ಯದಲ್ಲಿ ನಾಳೆಯೂ ಸಂಚಾರ ವ್ಯವಸ್ಥೆ ಬಂದ್ ಆಗಿರಲಿದೆ. ಮಾರ್ಚ್ 31ರವರೆಗೂ ಎಸಿ ಬಸ್ ಗಳು ಬಂದ್ ಆಗಿರಲಿದೆ.

Advertisement

ಬೆಂಗಳೂರಿನಲ್ಲಿ ಇಂದು ರಾತ್ರಿ ರಾತ್ರಿ 9ರಿಂದ 12ರವರೆಗೂ ನಿಷೇಧಾಜ್ಞೆ ಇರಲಿದ್ದು, ಜನರು ಗುಂಪು ಸೇರುವಂತಿಲ್ಲಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸ್ಪಷ್ಟನೆ ನೀಡಿದ್ದಾರೆ.

ರಾಜ್ಯದ ಎಲ್ಲಾ ಸರಕಾರಿ/ಅನುದಾನಿತ/ಅನುದಾನರಹಿತ ಶಾಲಾ ಶಿಕ್ಷಕರಿಗೆ ಮತ್ತು ಶಿಕ್ಷಕೇತರ ಸಿಬ್ಬಂದಿಗೆ 31.03.2020 ರವರೆಗೆ ರಜೆ  ಘೋಷಿಸಲಾಗಿದ್ದು ಅವರಿಗೆ ಕೊಟ್ಟಿರುವ ಶೈಕ್ಷಣಿಕ ಕಾರ್ಯಗಳನ್ನು‌ ಅವರವರ ಮನೆಗಳಿಂದಲೇ ನಿರ್ವಹಿಸುವುದಕ್ಕೆ ಸೂಚನೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next