Advertisement

ಲಾಕ್ ಡೌನ್ ಎಫೆಕ್ಟ್: ಮದ್ಯ, ಊಟ ಸಿಗದೆ ಕಾರ್ಮಿಕ ಆತ್ಮಹತ್ಯೆ

09:07 AM Mar 30, 2020 | keerthan |

ಬೀದರ್: ಕೋವಿಡ್-19 ನಿಯಂತ್ರಣಕ್ಕಾಗಿ ಸರ್ಕಾರ ವಿಧಿಸಿರುವ ಲಾಕ್ ಡೌನ್ ಪರಿಣಾಮ ಸಮಯಕ್ಕೆ ಸರಿಯಾಗಿ ಊಟ ಸಿಗದ ಕಾರಣ ಭಾಲ್ಕಿಯಲ್ಲಿ ಹೋಟೆಲ್ ಕಾರ್ಮಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Advertisement

ಬೀದರ ಜಿಲ್ಲೆಯ ಭಾಲ್ಕಿಯಲ್ಲಿ ಈ ಘಟನೆ ನಡೆದಿದ್ದು,  ಭಾಸ್ಕರ್( 41) ಎಂಬಾತ ಭಾಲ್ಕಿ ಪಟ್ಟಣದ ಝರಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕುಂದಾಪುರ ಮೂಲದವನಾಗಿರುವ ಭಾಸ್ಕರ್ ಬಾಲ್ಕಿ ಪಟ್ಟಣದ ಗಾಂಧಿ ವೃತ್ತ ಹತ್ತಿದ ಉಡುಪಿ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದನು.

ಲಾಕ್ ಡೌನ್ ನಂತರ ಕೆಲಸವಿಲ್ಲ.‌ ಹಣ ಇಲ್ಲ. ಊಟದ ಸಮಸ್ಯೆ ಆಗಿತ್ತು. ಇದರೊಟ್ಟಿಗೆ ಈತನು ಕುಡಿತದ ಚಟ ಹೊಂದಿದ್ದ. ಕುಡಿಯಲು ಮದ್ಯ ಇಲ್ಲ, ಊಟಕ್ಕೂ ಹಣವಿಲ್ಲ. ಇದೆಲ್ಲದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next