Advertisement

Waqf Property: ಬೀದರ್‌ನ ಬಹುಮನಿ ಕೋಟೆಗೂ ವಕ್ಫ್ ಮೊಹರು!

02:03 AM Nov 05, 2024 | Team Udayavani |

ಬೀದರ್‌: ರೈತರ ಜಮೀನುಗಳ ಬೆನ್ನಲ್ಲೇ ಈಗ ಕೇಂದ್ರ ಪುರಾತತ್ವ ಇಲಾಖೆಗೆ ಸೇರಿದ ಬೀದರ್‌ನ ಬಹುಮನಿ ಕೋಟೆಯ ಸೋಲಾಹ ಕಂಬ್‌ ಸ್ಮಾರಕ ಕೂಡ ವಕ್ಫ್ ಆಸ್ತಿಯಾಗಿ ಪರಿವರ್ತನೆ ಆಗಿರುವುದು ಬೆಳಕಿಗೆ ಬಂದಿದೆ.

Advertisement

ಏಷ್ಯಾದ ಅತಿ ದೊಡ್ಡ ಕೋಟೆ ಎಂಬ ಹೆಗ್ಗಳಿಕೆಯ ಬಹುಮನಿ ಕೋಟೆಯನ್ನು ವಕ್ಫ್ ಆಸ್ತಿ ಎಂದು ವರ್ಗಾಯಿಸಿಕೊಳ್ಳಲಾಗಿದೆ. ಅಷ್ಟೇ ಅಲ್ಲ ಇಲ್ಲಿನ ಅಷ್ಟೂರಿಯದ ಕೆಲವು ಗುಂಬಜ್‌ಗಳ ಮೇಲೂ ವಕ್ಫ್ ತನ್ನ ಹಕ್ಕು ಸಾಧಿಸಿದೆ. ಬಹುಮನಿ ಅರಸರು 1427ರಲ್ಲಿ ನಿರ್ಮಿಸಿರುವ ಬೀದರ ಕೋಟೆಯನ್ನು 1951ರ ನ. 29ರಂದು ಸಂರಕ್ಷಿತ ಆಸ್ತಿ ಎಂದು ಗೆಜೆಟ್‌ ಆಫ್‌ ಇಂಡಿಯಾದಲ್ಲಿ ಪ್ರಕಟಿಸಲಾಗಿದೆ. ಆದರೆ ಈಗ ಕೋಟೆಯ ಆಸ್ತಿ 2005ರಲ್ಲಿಯೇ ವಕ್ಫ್ ಗೆ ಸೇರಿದೆ ಎಂದು ಅಧಿಸೂಚನೆ ಹೊರಬಿದ್ದಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯಿಂದ ಮಾಹಿತಿ ತಿಳಿದುಕೊಳ್ಳುತ್ತೇನೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದ್ದಾರೆ.

ಸ್ಮಾರಕವನ್ನು ವಕ್ಫ್  ಆಸ್ತಿ ಎಂದು ವಕ್ಫ್ ಇಲಾಖೆ ಅಧಿಸೂಚನೆ ಹೊರಡಿಸಿದೆ. ಆದರೆ ಆಸ್ತಿಯ ಬಗ್ಗೆ ಯಾವುದೇ ದಾಖಲಾತಿ ಇಲ್ಲ ಎಂದು ಬೀದರ್‌ ಪುರಾತತ್ವ ಇಲಾಖೆಯ ಸಹಾಯಕ ಸರ್ವೇಕ್ಷಣಾಧಿಕಾರಿ ಅನಿರುದ್ಧ ದೇಸಾಯಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next