ಹುಣಸೂರು: ನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ 200 ಹಾಸಿಗೆಯ ಸುಸಜ್ಜಿತ ಆಸ್ಪತ್ರೆಗೆ ಬೈಪಾಸ್ ರಸ್ತೆಯ ತೋಟಗಾರಿಕೆ ಇಲಾಖೆ ಸ್ಥಳ ಹಸ್ತಾಂತರಿಸಲು ತಡ ಮಾಡುತ್ತಿದ್ದು, ನರಸಿಂಹಸ್ವಾಮಿ ತಿಟ್ಟು ಬಡಾವಣೆ ಬಳಿ ಸ್ಥಳ ಪರಿಶೀಲಿಸಿ ಪ್ರಸ್ತಾವನೆ ಸಿದ್ದಪಡಿಸುವಂತೆ ಶಾಸಕ ಎಚ್.ವಿಶ್ವನಾಥ್ ಅಧಿಕಾರಿಗಳಿಗೆ ಸೂಚಿಸಿದರು.
ಆಸ್ಪತ್ರೆ ನಿರ್ಮಾಣಕ್ಕೆ ಹಿಂದಿನ ಸರ್ಕಾರದ ಅವಧಿಯಲ್ಲೇ ಮೊದಲ ಹಂತದಲ್ಲಿ 25 ಕೋಟಿ ರೂ. ಬಿಡುಗಡೆಯಾಗಿ, ಏಜನ್ಸಿಯೂ ನಿಗದಿಯಾಗಿದೆ. ತೋಟಗಾರಿಕೆ ಇಲಾಖೆಯಿಂದ ಆರೋಗ್ಯ ಇಲಾಖೆಗೆ ಭೂಮಿ ಹಸ್ತಾಂತರಿಸುವುದು ತಡ ಮಾಡುತ್ತಿರುವ ಹಿನ್ನೆಲೆಯಲ್ಲಿ ಬದಲಿ ಸ್ಥಳಕ್ಕಾಗಿ
-ಉಪ ವಿಭಾಗಾಕಾರಿ ಕೆ.ನಿತೀಶ್, ತಹಶೀಲ್ದಾರ್ ಮೋಹನ್‌ರೊಂದಿಗೆ ಹುಣಸೂರು-ಎಚ್.ಡಿ.ಕೋಟೆ ಮುಖ್ಯರಸ್ತೆಯ ಬಾಚಳ್ಳಿ ಗ್ರಾಮದಲ್ಲಿರುವ 2 ಎಕರೆ ಹಾಗೂ ನರಸಿಂಹಸ್ವಾಮಿ ತಿಟ್ಟು ಬಡಾವಣೆಯಲ್ಲಿರುವ ಸರಕಾರಿ ಭೂಮಿ ಪರಿಶೀಲಿಸಿದರು.
ಉಪವಿಭಾಗಾಕಾರಿ ಕೆ.ನಿತೀಶ್, ಬಾಚಳ್ಳಿರಸ್ತೆಯಲ್ಲಿ 2 ಎಕರೆ ಹಾಗೂ ತಿಟ್ಟು ಬಡಾವಣೆಯಲ್ಲಿ 4 ಎಕರೆ ಭೂಮಿಯಿದೆ. ಪಕ್ಕದಲ್ಲೇ ಇನ್ನೂ ಒಂದೂವರೆ ಎಕರೆ ಸರ್ಕಾರಿ ಭೂಮಿ ಇದೆ. ಆದರೆ ಬಾಚಳ್ಳಿಯಲ್ಲಿರುವ ಸ್ಥಳಕ್ಕೆ ಸಮರ್ಪಕ ರಸ್ತೆ ಇಲ್ಲ. ಆದ್ದರಿಂದ ಹುಣಸೂರು-ಮಡಿಕೇರಿ ಬೈಪಾಸ್ ಬಳಿಯ ತೋಟಗಾರಿಕೆ ಇಲಾಖೆ ಭೂಮಿ ಪಡೆಯುವುದೇ ಸೂಕ್ತ ಎಂದು ಶಾಸಕರಿಗೆ ಮನವರಿಕೆ ಮಾಡಿಕೊಟ್ಟರು.
ಈ ವೇಳೆ ಜೆಡಿಎಸ್ ತಾಲೂಕು ಅಧ್ಯಕ್ಷ ಮಾದೇಗೌಡ, ಉಪ ವಿಭಾಗಾಕಾರಿ ನಿತೀಶ್, ತಹಶೀಲ್ದಾರ್ ಮೋಹನ್, ನಗರಸಭಾಧ್ಯಕ್ಷ ಶಿವಕುಮಾರ್, ಸದಸ್ಯೆ ಸುನೀತಾ, ಪೌರಾಯುಕ್ತ ಶಿವಪ್ಪನಾಯಕ, ಎಇಇ ಪಾರ್ವತಿ, ಎಂಜಿನಿಯರ್ ಸದಾಶಿವಪ್ಪ, ಎಡಿಎಲ್‌ಆರ್ ಮಂಜುನಾಥ್, ಮುಖಂಡ ನಿಂಗರಾಜಮಲ್ಲಾಡಿ, ಬಸವಲಿಂಗಯ್ಯ ಇತರರಿದ್ದರು.