ಇಟಾನಗರ್(ಅರುಣಾಚಲ ಪ್ರದೇಶ): ಪೂರ್ವ ಲಡಾಖ್ ನಲ್ಲಿ ಜಿದ್ದಿಗೆ ಬಿದ್ದಿದ್ದ ಚೀನಾ ಇದೀಗ ಅರುಣಾಚಲಪ್ರದೇಶದಲ್ಲಿಯೂ ತನ್ನ ಕಳ್ಳಾಟ ಮುಂದುವರಿಸಿದ್ದು, ಅರುಣಾಚಲ ಪ್ರದೇಶದ ಪೂರ್ವ ಕಮೆಂಗ್ ಜಿಲ್ಲೆಯ ಕಮೆಂಗ್ ನದಿಗೆ ಭಾರೀ ಪ್ರಮಾಣದಲ್ಲಿ ಕಲುಷಿತಗೊಳ್ಳುವಂತೆ ಮಾಡಿದ ಪರಿಣಾಮ ಸಾವಿರಾರು ಮೀನುಗಳು ಸತ್ತು ತೇಲುತ್ತಿರುವ ದೃಶ್ಯ ಕಂಡುಬಂದಿರುವುದಾಗಿ ಅಧಿಕಾರಿಗಳು ಶನಿವಾರ(ಅಕ್ಟೋಬರ್ 30)
ತಿಳಿಸಿದ್ದಾರೆ.
ಇದನ್ನೂ ಓದಿ:ಸರಳ ಮತ್ತು ಗೌರವಪೂರ್ವಕ ರಾಜ್ಯೋತ್ಸವ : ಮಾರ್ಗಸೂಚಿ ಬಿಡುಗಡೆ
ಭಾರೀ ಪ್ರಮಾಣದ ವಿಷಯುಕ್ತ ಅಂಶಗಳಿಂದ ಕೂಡಿದ ತ್ಯಾಜ್ಯದಿಂದಾಗಿ ನದಿಯ ನೀರು ಕಪ್ಪು ಬಣ್ಣಕ್ಕೆ ತಿರುಗಿದೆ ಎಂದು ಜಿಲ್ಲಾ ಮೀನುಗಾರಿಕೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದರಿಂದಾಗಿ ಸೆಪ್ಪಾ ಪ್ರದೇಶದಲ್ಲಿ ಸಾವಿರಾರು ಮೀನುಗಳು ಸಾವನ್ನಪ್ಪಿವೆ ಎಂದು ವರದಿ ಹೇಳಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಭಾರೀ ಪ್ರಮಾಣದ ವಿಷಯುಕ್ತ(ಟಿಡಿಎಸ್) ವಸ್ತು ನೀರಿನಲ್ಲಿ ಸೇರಿದ ಪರಿಣಾಮ ಮೀನುಗಳು ಉಸಿರಾಟದ ತೊಂದರೆಗೆ ಸಿಲುಕಿ ಸಾವನ್ನಪ್ಪಿವೆ. ಮೀನುಗಳಿಗೆ ಆಕ್ಸಿಜನ್ ಲಭ್ಯವಾಗದೆ ಸಾವನ್ನಪ್ಪಿರುವುದಾಗಿ ವಿವರಿಸಿದೆ. ಜನರು ಯಾವುದೇ ಕಾರಣಕ್ಕೂ ಈ ಮೀನುಗಳನ್ನು ಸೇವಿಸಬಾರದು, ಇದರಿಂದ ಗಂಭೀರವಾದ ಆರೋಗ್ಯ ಸಮಸ್ಯೆ ಎದುರಾಗಲಿದೆ ಎಂದು ತಾಜ್ ವೊ ತಿಳಿಸಿದ್ದಾರೆ.
ಜನರು ಕಮೆಂಗ್ ನದಿ ಪ್ರದೇಶದಲ್ಲಿ ಮೀನುಗಳನ್ನು ಹಿಡಿಯದಂತೆ ಪೂರ್ವ ಕಮೆಂಗ್ ಜಿಲ್ಲಾಡಳಿತ ಮುನ್ನೆಚ್ಚರಿಕಾ ನೋಟಿಸ್ ಅನ್ನು ಜಾರಿಗೊಳಿಸಿದೆ. ಮುಂದಿನ ಆದೇಶದವರೆಗೆ ಜನರು ಮೀನು ಹಿಡಿಯುವುದಾಗಲಿ, ಮೀನನ್ನು ಸೇವಿಸುವುದಾಗಲಿ ಅಥವಾ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದೆ.