Advertisement

New Delhi: ಸಂಸತ್ತಿನ ಬಳಿ ಬೆಂಕಿ ಹಚ್ಚಿಕೊಂಡಿದ್ದ ಯುವಕ ಸಾ*ವು

05:34 PM Dec 27, 2024 | Team Udayavani |

ನವದೆಹಲಿ: ಸಂಸತ್ತಿನ ಬಳಿ ಡಿಸೆಂಬರ್ 25 ರಂದು ಬೆಂಕಿ ಹಚ್ಚಿಕೊಂಡಿದ್ದ 26 ವರ್ಷದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ(ಡಿ27) ಆರ್‌ಎಂಎಲ್ ಆಸ್ಪತ್ರೆಯಲ್ಲಿ ಸಾ*ವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಉತ್ತರ ಪ್ರದೇಶದ ಬಾಗ್‌ಪತ್‌ನ ಜಿತೇಂದ್ರ ನೂತನ ಸಂಸತ್ ಕಟ್ಟಡದ ಬಳಿ ತನ್ನ ದೇಹದ ಮೇಲೆ ಪೆಟ್ರೋಲ್ ತರಹದ ಪದಾರ್ಥವನ್ನು ಸುರಿದುಕೊಂಡು ಆತ್ಮಹ*ತ್ಯೆಗೆ ಯತ್ನಿಸಿದ್ದ.

ಸಂಸತ್ತಿನ ಬಳಿ ನಿಯೋಜಿಸಲಾಗಿದ್ದ ಭದ್ರತಾ ಸಿಬಂದಿ ದೌಡಾಯಿಸಿ ಬೆಂಕಿಯನ್ನು ನಂದಿಸಿ ಆರ್‌ಎಂಎಲ್ ಆಸ್ಪತ್ರೆಗೆ ಕರೆದೊಯ್ದಿದ್ದರು.

ಆರಂಭಿಕ ತನಿಖೆಗಳ ಪ್ರಕಾರ, ಬಾಗ್‌ಪತ್‌ನಲ್ಲಿ ಮನೆಗೆ ತೆರಳಿದ ಬಳಿಕ ವಿವಾದದ ಕಾರಣದಿಂದ ಮನನೊಂದು ಕಠಿನ ನಿರ್ಧಾರ ಕೈಗೊಂಡಿದ್ದಾನೆ.ಆತನ ಕುಟುಂಬ ಗ್ರಾಮದಲ್ಲಿ ಮತ್ತೊಂದು ಕುಟುಂಬದೊಂದಿಗೆ ಎರಡು ಹಲ್ಲೆ ಪ್ರಕರಣಗಳನ್ನು ಎದುರಿಸುತ್ತಿದೆ, ಇದರಿಂದಾಗಿ  ಅಸಮಾಧಾನಗೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

95 ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಯುವಕ ಶುಕ್ರವಾರ ನಸುಕಿನ 2.23 ಕ್ಕೆ ಕೊನೆಯುಸಿರೆಳೆದಿದ್ದಾನೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಮರಣೋತ್ತರ ಪರೀಕ್ಷೆಯ ನಂತರ ಜಿತೇಂದ್ರ ಮೃತ ದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next