Advertisement

ಕಟೀಲು: ಒಂದೇ ದಿನ 95 ವಿವಾಹ

11:19 AM May 08, 2017 | Karthik A |

ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ 80 ಜೋಡಿ ಹಾಗೂ ದೇವಸ್ಥಾನದ ಆವರಣದಲ್ಲಿರುವ ಸಭಾ ವೇದಿಕೆಯಲ್ಲಿ 15 ಜೋಡಿ ಸಹಿತ 95 ಜೋಡಿಗಳ ವಿವಾಹ ರವಿವಾರ ನೆರವೇರಿತು. ಬೆಳಗ್ಗೆ 9ರಿಂದ ಆರಂಭವಾದ ವಿವಾಹ ಪ್ರಕ್ರಿಯೆ 1 ಗಂಟೆ ತನಕ ನಡೆಯಿತು. ಸುಮಾರು 8,000 ಜನರು ಪ್ರಸಾದ ಭೋಜನ ಸ್ವೀಕರಿಸಿದರು. 800 ಮಂದಿ ಬೆಳಗ್ಗಿನ ಗಂಜಿ ಊಟ ಪ್ರಸಾದ ಸ್ವೀಕರಿಸಿದ್ದಾರೆ. ದೇವಸ್ಥಾನದಲ್ಲಿ ಮೂರೂ ಹೊತ್ತು ಅನ್ನಪ್ರಸಾದ ವ್ಯವಸ್ಥೆ ಇದೆ.

Advertisement

ಸೋಮವಾರ 45 ಜೋಡಿಗಳಿಗೆ ವಿವಾಹಕ್ಕೆ ನೋಂದಣಿ ನಡೆದಿದೆ. ಮದುವೆ ವ್ಯವಸ್ಥೆಗೆ ನಾಲ್ಕು ಜನ ಪುರೋಹಿತರು ಹಾಗೂ ನೋಂದಣಿಗೆ ಪ್ರತ್ಯೇಕ ಸಿಬಂದಿ ನೇಮಕ ಮಾಡಲಾಗಿದೆ ಎಂದು ದೇವಸ್ಥಾನದ ಅರ್ಚಕ ಶ್ರೀಹರಿನಾರಾಯಣ ದಾಸ ಆಸ್ರಣ್ಣ ತಿಳಿಸಿದ್ದಾರೆ.

ಟ್ರಾಫಿಕ್‌ ಜಾಮ್‌: ಮದುವೆ ಬಂದ ದಿಬ್ಬಣ ಹಾಗೂ ರಜಾ ದಿನವಾದುದರಿಂದ ಕಟೀಲು ಪೇಟೆ ಹಾಗೂ ರಥಬೀದಿ ಬಸ್‌ ನಿಲ್ದಾಣದಲ್ಲಿ ಟ್ರಾಫಿಕ್‌ ಜಾಮ್‌ ಬಿಸಿ ಉಂಟಾಯಿತು. ಎಕ್ಕಾರು ದ್ವಾರದಿಂದ ಕಿನ್ನಿಗೋಳಿ ಹೋಗುವ ರಸ್ತೆಯ ಅಜಾರು ದ್ವಾರದವರೆಗೆ ವಾಹನಗಳ ಸರತಿ ಸಾಲಿನಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿದೆ. ಕಟೀಲು ದೇವಸ್ಥಾನದ ಭದ್ರತಾ ಸಿಬಂದಿ ವಾಹನಗಳ ನಿಯಂತ್ರಣಕ್ಕೆ ಹರಸಾಹಸಪಡಬೇಕಾಯಿತು.

Advertisement

Udayavani is now on Telegram. Click here to join our channel and stay updated with the latest news.

Next