Advertisement

ರೆಪೋ ದರಕ್ಕೆ ಸಾಲ, ಠೇವಣಿ ಬಡ್ಡಿ ದರ ಲಿಂಕ್‌

12:30 AM Mar 10, 2019 | |

ಮುಂಬೈ: ಇದೇ ಮೊದಲ ಬಾರಿಗೆ ಭಾರತೀಯ ಸ್ಟೇಟ್‌ ಬ್ಯಾಂಕ್‌ ತನ್ನ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಮಾಡಿದ್ದು, ಆರ್‌ಬಿಐನ ರೆಪೋ ದರಕ್ಕೆ ಬ್ಯಾಂಕ್‌ನ ಠೇವಣಿ ಮತ್ತು ಅಲ್ಪಾವಧಿ ಸಾಲದ ಮೇಲಿನ ಬಡ್ಡಿ ದರ ಗಳನ್ನು ಲಿಂಕ್‌ ಮಾಡಿದೆ. ಈ ಹೊಸ ವ್ಯವಸ್ಥೆ ಮೇ 1 ರಿಂದ ಜಾರಿಗೆ ಬರಲಿದೆ.

Advertisement

ಇದರಿಂದಾಗಿ ಆರ್‌ಬಿಐ ಮಾಡುವ ಯಾವುದೇ ರೆಪೊ ದರ ಬದಲಾವಣೆಯು ಗ್ರಾಹಕರಿಗೆ ನೇರವಾಗಿ ಪರಿ ಣಮಿಸುತ್ತದೆ. ಆರ್‌ಬಿಐ ಬಡ್ಡಿ ದರ ಇಳಿಸಿದರೆ ಗ್ರಾಹಕರ ಸಾಲ ಅಥವಾ ಠೇವಣಿ ಬಡ್ಡಿ ದರವೂ ಕಡಿಮೆಯಾಗುತ್ತದೆ. ಈವರೆಗೆ ಆರ್‌ಬಿಐ ರೆಪೋ ದರವನ್ನು ಬದಲಿಸಿದರೂ, ಬ್ಯಾಂಕ್‌ಗಳು ಬಡ್ಡಿ ದರ ಬದಲಾವಣೆ ಮಾಡದೇ ಅದರ ಫ‌ಲವನ್ನು ಸಾಲಗಾರರು ಹಾಗೂ ಠೇವಣಿದಾರರಿಗೆ ನೀಡು  ತಿ ¤ರಲಿಲ್ಲ. ಈ ಹೊಸ ವ್ಯವಸ್ಥೆಯಿಂದ ಈ ಸಮಸ್ಯೆ ನಿವಾರಣೆಯಾಗಲಿದ್ದು, ಗ್ರಾಹಕರಿಗೆ ತಕ್ಷಣ ಆರ್‌ಬಿಐ ಕ್ರಮಗಳ ಲಾಭ ಸಿಗಲಿದೆ. ಆದರೆ ಎಸ್‌ಬಿಐ ಈ ಕ್ರಮವು 1 ಲಕ್ಷ ರೂ.ಗಿಂತ ಹೆಚ್ಚು ಮೊತ್ತವನ್ನು ಖಾತೆಯಲ್ಲಿ ಹೊಂದಿರುವ ಹಾಗೂ 1 ಲಕ್ಷ ರೂ.ವರೆಗಿನ ಸಾಲ ಹೊಂದಿರುವ ಗ್ರಾಹಕರಿಗೆ ಮಾತ್ರ ಅನ್ವಯಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next